Friday, 27 December 2019

ಬಾರಯ್ಯ ಶ್ರೀ ಶ್ರೀನಿವಾಸ ankita kamalanabha vittala

by ನಿಡಗುರುಕಿ ಜೀವೂಬಾಯಿ
ಬಾರಯ್ಯ ಶ್ರೀ ಶ್ರೀನಿವಾಸ ಭಕ್ತವತ್ಸಲ ಸ್ವಾಮಿಬಾಗಿ ನಮಿಸುವೆನು ಭಾಗವತರ ಪ್ರಿಯ ಪ

ಬಾರೋ ಭಕುತರ ಭವವಿಮೋಚನಬಾರೊ ದ್ರೌಪದಿಮಾನಸಂರಕ್ಷಣಬಾರೊ ಧ್ರುವ ಪ್ರಹ್ಲಾದ ಪಾಲಕಬಾರೋ ಗಜರಾಜೇಂದ್ರ ವರದ ಅ.ಪ

ಕಾಲಲಂದುಗೆ ಗೆಜ್ಜೆ ಘಲುಘಲುರೆನುತಲಿಕಾಲಪಾಡಗರುಳಿ ಕಾಲಪೈಜನಿಸರಕಾಲಲ್ಲಿ ಅಸುರರ ಧೂಳಿ ಮಾಡಿದ ದಿವ್ಯಕಾಲಿಗೆರಗುವೆನು ಕಾಯೊ ಶ್ರೀಹರಿಶೌರೆಕಾಲಿನಲಿಶಿಲೆನಾರಿಯಾದಳುಕಾಳಿಮದ ನಿರ್ಮೂಲವಾಯಿತುಕಾಲಿನಲಿ ಗಂಗೆಯು ಜನಿಸಿದಳುಕಾಲು ಪಾರ್ಥನೆÀ ರಥದಿ ಮೆರೆಸಿದೆ 1

ಎಡಬಲದಿ ನಿನ್ನ ಮಡದೇರಿಂದೊಪ್ಪುತತಡಮಾಡದಲೆ ಬಾರೊ ಮೃಡಸಖನೆಉಡುಪ ಮುಖನೆ ನಿನ್ನ ಅಡಿಗೆರಗುವರಯ್ಯತಡಮಾಡದಲೆ ತಾಳಮೇಳ ವಾದ್ಯಗಳಿಂದಬಿಡದೆಶ್ವೇತಛತ್ರಚಾಮರಎಡಬಲದಿ ನಿನ್ನ ಸ್ತುತಿಪ ಭಕ್ತರಕಡುಸ್ವರದ ವಾದ್ಯ ವೇದ ಘೋಷಣೆಬಿಡದೆ ಮಾಳ್ಪರೊ ಕಡಲೊಡೆಯನೆ 2

ಕಮಲಸಂಭವನಯ್ಯ ಕಮಲಜಾತೆಯ ಪ್ರಿಯಕಮಲಪೊಕ್ಕಳಲಿ ಪಡೆದಾತನೆಕಮಲದಳಾಕ್ಷನೆಕಮನೀಯರೂಪನೇಕಮಲಾಕ್ಷಿಯೊಡಗೂಡಿ ಕರುಣದಿ ಬಾರಯ್ಯಕಮಲಮಲ್ಲಿಗೆ ಮಳೆಯ ಕರೆವರುಕಮಲಗಂಧಿಯರೆಲ್ಲ ಹರುಷದಿಕಮಲನಾಭವಿಠ್ಠಲನೆ ಪೊಳೆವ ಹೃ-ತ್ಕಮಲದೊಳು ಮಿಗೆ ಶೋಭಿಸುವಹರಿ3
*******

No comments:

Post a Comment