Friday, 27 December 2019

ಪವಡಿಸು ಪರಮಾತ್ಮಾ ಶ್ರೀ ankita kamalanabha vittala

by ನಿಡಗುರುಕಿ ಜೀವೂಬಾಯಿ
ಪವಡಿಸು ಪರಮಾತ್ಮಾ ಶ್ರೀ ಶ್ರೀಶಾಪವಡಿಸು ಪರಮಾತ್ಮಾ ಪ

ಪರಮಭಕ್ತರನು ಪೊರೆಯುವ ದೇವನೆಅ.ಪರನ್ನಮಂಟಪದೊಳು ಕನ್ನಡಿಯಂದದಿಸ್ವರ್ಣವರ್ಣದಲಿಹ ಪನ್ನಂಗ ಕಾದಿಹ 1

ಸುತ್ತಲು ತುಂಬುರರು ನಾರದರು ಸ್ತೋತ್ರವ ಮಾಡಿಅತ್ಯಂತ ಹರುಷದಿ ಚಿತ್ತೈಸೆಂದೆನುವರು 2

ಥಳಥಳಿಸುವ ದಿವ್ಯತಾರೆಗಳಂದದಿಲಲನೆಶ್ರೀ ಭೂದೇವಿಯರು ಸೇವಿಪರು ನಿನ್ನ3

ವೇದವ ಕದ್ದನ ಭೇದಿಸಿ ಅಜನಿಗೆವೇದವ ತಂದಿತ್ತು ಆದರಿಸಿದ ದೇವ 4

ಮುಳುಗಿದ ಗಿರಿಯನು ಧರಿಸಿ ಬೆನ್ನಲಿ ಬೇಗಸುರರಿಗೆ ಅಮೃತವ ಕುಡಿಸಿದಮಾಧವ5

ಸುರಮುನಿಗಳಿಗೆಲ್ಲಾ ಅಭಯವ ನೀಡುತವರಹರೂಪತಾಳಿ ಬಳಲಿ ದಣಿದು ಬಂದಿ6

ಕಂದನಿಗಾಗಿ ದೊಡ್ಡ ಕಂಬದಿಂದುದಿಸಿ ಖಳನಕೊಂದು ಕರುಳ ವನಮಾಲೆ ಧರಿಸಿ ದಣಿದಿ 7

ಮೂರಡಿ ಭೂಮಿಯ ಬೇಡಿ ಬಲೀಂದ್ರನದೂಡಿ ಪಾತಾಳಕೆ ಬಹಳ ಬಳಲಿ ಬಂದಿ 8

ಭೂಮಿ ಪಾಲಕರನ್ನು ಸೋಲಿಸಿಬಾರಿಬಾರಿವಾರಿಜಾಕ್ಷ ಶ್ರೀರಾಮರಿಗೊಲಿದೆಯೊ 9

ಸೇತುವೆಯನ್ನುಕಟ್ಟಿದೂರ್ತರಾವಣನ ಕುಲವಘಾತಿಸಿ ಕೊಂದ ರಘುನಾಥನೆ ಬಳಲಿದೆ 10

ವಸುದೇವ ಕಂದನೆ ಶಿಶುರೂಪಿನಿಂದಲಿಅಸುರೆ ಪೂತಣಿ ಅಸುಹೀರಿ ಬಳಲಿ ಬಂದಿ 11

ತಿದ್ದಿ ತ್ರಿಪುರಾಸುರರ ಮರ್ದಿಸಿ ಸುಜನರಿಗೆಮುದ್ದು ತೋರಿದ ಸುಪ್ರಸಿದ್ಧ ಮೂರುತಿ ಬೇಗ 12

ಕರದಿ ಖಡ್ಗವ ಧರಿಸಿ ಸಿರದಿ ಕಿರೀಟ ಹೊಳೆಯೆಇಳೆಯ ಮನುಜರಿಗೆಲ್ಲ ಸುಲಭನಂದದಿ ತೋರ್ಪಿ 13

ಮಂಗಳಚರಿತ ವಿಹಂಗವಾಹನ ಸುರಗಂಗೆಯಪಿತ ಸಾಧುಸಂಗವಂದಿತ ದೇವ 14

ಗರುಡಗಮನ ಕೃಷ್ಣ ಉರಗನ್ಹಾಸಿಗೆಯೊಳುಸಿರಿದೇವಿ ಸಹವರ ಕಮಲನಾಭ ವಿಠ್ಠಲ 15
*******

No comments:

Post a Comment