Wednesday, 13 November 2019

ನಿನ್ನ ನೋಡಿ ಧನ್ಯನಾದೆನೊ ಶ್ರೀಕೃಷ್ಣ ankita govinda

by ಗೋವಿಂದದಾಸ
ನಿನ್ನ ನೋಡಿ ಧನ್ಯನಾದೆನೊ ಶ್ರೀಕೃಷ್ಣ ದಯದಿಮನ್ನಿಸಯ್ಯ ಮರೆಯ ಹೊಕ್ಕೆನು ಪ

ಅನ್ನಪಾನದಿಂದ ಬೆಳೆದ ತನುವು ಸ್ಥಿರವಿದೆಂದು ನಂಬಿಮುನ್ನ ಮತಿಹೀನನಾಗಿ ನಿನ್ನ ಸ್ಮರಣೆ ಮರೆತೆ ಅ.ಪ

ಮಾಯ ಪಾಶದಲಿ ಸಿಲುಕಿದೆಯನ್ನನಗಲಿ ಅಳಿದ ತಾಯಿತಂದೆಯರಿಗೆ ಮರುಗಿದೇ ಪ್ರಿಯಮಡದಿ ಪರಸ್ತ್ರೀಯರಲಿ ಮೋಹವೆರಸಿಮರುಳನಾದೆಕಾಯಸುಖವನೆಣಿಸಿಸರ್ವೇ ನ್ಯಾಯ ತಪ್ಪಿ ನಡೆದೆ ಕೃಷ್ಣಾ 1

ಹಲವು ಜನ್ಮವೆತ್ತಿ ತೊಳಲಿದೇ ತರಳನೆನಿಸಿಹಲವು ಜಾತಿ ಮೊಲೆಯ ಭುಜಿಸಿದೆಹಲವು ದೇಶಗಳನು ಸುತ್ತಿ ಹಲವುಕ್ರೂರಕೃತ್ಯ ಗೈದೆ ತಲೆಯ ಹಿಂದೆಇರುವ ಮೃತ್ಯು ನೆಲೆಯನರಿಯದಿರ್ದೆ ಕೃಷ್ಣಾ 2

ಆಶಾಪಾಶಗಳಲಿ ಸರ್ವ ದೋಷ ಮೋಸವೆಣಿಸದಾದೆಲೇಸ ಕಾಣೆ ಮುಂದೆ ಯಮನ ಪಾಶಕರ್ಹನಾದೆ ಕೃಷ್ಣಾ3

ಅರಿಗಳಾರು ಮಂದಿ ದೇಹದಿ ನೆಲಸಿರ್ದು ಎನ್ನಮರುಳುಗೊಳಿಸೆ ಇಂದ್ರಿಯ ಸಹಾಯದಿನರವು ಮಾಂಸ ಅಸ್ಥಿಯಿಂದ ವಿರಚಿಸಿದ ದೇಹವಿದನುಪರಿಪರಿಯ ಶೃಂಗರಿಸುತ ಸ್ಮರನ ತೆರದಿ ಮೆರೆದೆ ಕೃಷ್ಣಾ 4

ಒಂದು ದಿನವು ಸುಖವ ಕಾಣೆನೂ ಈ ಜೀವನಸಂಬಂಧಿಗಳ್ಯಾರೆಂಬುದನರಿಯೆನೂಬಂಧು ನೀನೇ ಸರ್ವಪ್ರದನು ಮುಂದೆ ಜನುಮವೆತ್ತದಂತೆಬಂದು ಎನ್ನ ಸಲಹೋ ಗೋವಿಂದದಾಸನೊಡೆಯ ಕೃಷ್ಣಾ 5
********

No comments:

Post a Comment