Wednesday, 15 December 2021

ಅಂಗಳದೊಳು ರಾಮನಾಡಿದ ಚಂದ್ರ neleadikeshava ANGALADOLU RAMANADIDA CHANDRA BEKENDU









ಆಂಗಳದೊಳು ರಾಮನಾಡಿದ
ಕನಕದಾಸರ ಕೃತಿ - ರಾಮಚಂದ್ರನ ಬಾಲಲೀಲೆಯನ್ನು ಹೇಳುವ ಕೃತಿ

"ಅಂಗಳದೊಳು ರಾಮನಾಡಿದ"

ಒಮ್ಮೆ ರಾಮಚಂದ್ರ ಆಟವಾಡುತ ಬಾನಲಿ ಚಂದ್ರನ ಕಂಡು ಲೋಕರೀತ್ಯ ತನಗೆ ತಾಯಿ ಕೊಟ್ಟ ಎಲ್ಲಾ ಆಟಿಕೆಗಳನ್ನು ಒಲ್ಲೆನೆಂದು ಚಂದ್ರ ಬೇಕೆಂದು ಹಠ ಹಿಡಿಯಲು,  ದಿಕ್ಕು ತೋಚದೇ, ಕೌಸಲ್ಯೆಯು ಚಿಂತಿತಳಾಗಲು, ಮಂತ್ರಿ ಸುಮಂತ್ರನು ರಾಮನ ಕೈಗೆ ಕನ್ನಡಿಯನ್ನಿತ್ತಾಗ ಅಲ್ಲಿ ಚಂದ್ರನ ಬಿಂಬವನ್ನು ನೋಡಿ ತೃಪ್ತನಾದನಂತೆ.  

ಇದೊಂದು ಅಪೂರ್ವ ಕೃತಿ.  ಕೌಸಲ್ಯೆಯ ಮುಗ್ಧತೆ, ರಾಮನ ಮುಗ್ಧತೆಯ ಮೋಡಿ, ಮಂತ್ರಿ ಸುಮಂತ್ರ ರಾಮನ ಮೋಹಕ್ಕೆ ಮೋಡಿಗೊಳಗಾಗುವಿಕೆ,   ಸಾಮಾನ್ಯವಾಗಿ ಕನಕದಾಸರು ಉಪಯೋಗಿಸುವ ಪದಗಳು ಕ್ಲಿಷ್ಟ, ಆದರೆ ಇಲ್ಲಿ ಎಲ್ಲವನ್ನೂ ಅತಿ ಸುಲಭ ಪದಗಳಲ್ಲಿ ವರ್ಣಿಸಿದ್ದಾರೆ ಕನಕದಾಸರು.
***

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ ॥೨॥

ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ
ಅಂಜಿದನು ಎನ್ನುತಿದ್ದಳು ॥೩॥

ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀ ರಾಮನ ಎತ್ತಿ ಮುದ್ದಾಡಿದ ॥೪॥

ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿ ಕೇಶವ
ರಘು ವಂಶವನ್ನೇ ಕೊಂಡಾಡಿದ ॥೫॥
***


.ಅಂಗಳದೊಳು  ರಾಮನಾಡಿದ . ರಾಗ : ಅಭೇರಿ . ಆದಿ ತಾಳ. ಕನಕದಾಸ

P: ಅಂಗಳದೊಳು  ರಾಮನಾಡಿದ  ಚಂದ್ರ  ಬೇಕೆಂದು  ತಾ ಹಠ  ಮಾಡಿದ

C1: ತಾಯಿಯ  ಕರೆದು  ಕೈ  ಮಾಡಿ ತೋರಿದ  ಮುಗಿಲ  ಕಡೆಗೊಮ್ಮೆ  ದಿಟ್ಟಿಸಿ  ನೋಡಿದ
ಚಿನ್ನಿಕೊಳು  ಚಂಡು ಬೂಗುರಿ ಎಲ್ಲವ  ಬೇಡ  ಬೇಡ  ಎಂದು  ತಾ  ಬಿಸಾಡಿದ

2: ಕಂದ ಬಾ ಎಂದು  ತಾಯಿ  ಕರೆದಳು  ಮಮ್ಮು  ಉನ್ನೆಂದು ಬಣ್ಣಿಸುತ್ತಿದ್ದಳು
ತಾಯಿ  ಕೌಸಲ್ಯ  ಕಳವಳ ಗೊಂಡಳು ಕಂದ ಅಂಜಿದನು ಎನ್ನುತಿದ್ದಳು

3: ಅಳುವ  ಧ್ವನಿ  ಕೇಳಿ ರಾಜನು  ಮಂತ್ರಿ  ಸಹಿತಾಗಿ  ಧಾವಿಸಿ  ಬಂದನು
ನಿಲುವ  ಕನ್ನಡಿ  ತಂದಿರಿಸಿದ  ಶ್ರೀ  ರಾಮನ  ಎತ್ತಿ  ಮುದ್ದಾಡಿದ

4: ಕನ್ನಡಿಯೊಳು  ಬಿಂಬ  ನೋಡಿದ  ಚಂದ್ರ  ಸಿಕ್ಕಿದನೆಂದು  ಕುಣಿದಾಡಿದ
ಈ  ಸಂಭ್ರಮ  ನೋಡಿ  ಆದಿ  ಕೇಶವ  ರಘು ವಂಶವನ್ನೇ  ಕೊಂಡಾಡಿದ
***
 

angaLadoLu rAmanADida. rAgA: AbhEri. Adi tALA. Kanakadasa.

P: angaLadoLu rAmanADida candra bEkendu tA haTha mADidA
C1: tAyiya karedu kai mADi tOridA mugila kaDegomme diTTisi nODida

ciNikOLu chaNDu buguri ellava bEDa bEDa endu tA bisADidA

2: khanda bA endu tAyi karedaLu mammu uNNEndu baNNisuttiddaLu
tAyi kausalya kaLavaLa goNDalu kanda anjidanu ennutiddaLu

3: ALuva dhvani kELi rAjanu mantri sahitAgi dhAvisi bandanu
niluva kannaDi tanDisidA shrI rAmana etti muddADidA

4: kannaDiyoLu bimba nODidA chandra sikkidanendu kuNidADidA
I sambhrama nODi Adi kEshava raghu vamsahavannE koNDADidA
***

Angaladolu raamanaadidaa |
Chandra bekendu taa hata maadidaa || pa ||

Taayiya karedu kai maadi toridaa |
Mugila kadegomme dittisi nodidaa |
Chinni kolu cendu buguri ellavaa |
Bedaa bedaa endu beesaadidaa || 1 ||

Kanda baa endu taayi karedalu |
Mammu unnendu bannisuttiddalu |
Taayi kousalyaa kalavalagondalu |
Kanda anjidanu ennuttiddalu || 2 ||

Aluva dhwani keli raajanu |
Mantri sahitaagi dhaavisi bandanu |
Niluva kannadi tandirisidaa |
Shreeraamana etti muddaadidaa || 3 ||

Kannadiyolu bimba nodidaa |
Chandra sikkidanendu kunidaadidaa |
Ee sambhrama nodi aadi keshava |
Raghuvamshavanne kondaadidaa || 4 ||
***

ಅಂಗಳದೊಳು ರಾಮನಾಡಿದ
ಚಂದ್ರಬೇಕೆಂದು ತಾ ಹಠಮಾಡಿದಾ
ಚಂದ್ರ ಬೇಕೆಂದು ತಾ ಹಠ ಮಾಡಿದಾ...

ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
||ತಾಯಿಯ||
ಚಿಣಿಕೋಲು ಚೆಂಡು ಬುಗುರಿ ಎಲ್ಲವಾ
ಬೇಡ ಬೇಡ ಎಂದು ತಾ ಬಿಸಾಡಿದ
||ಚಿಣಿಕೋಲು||
||ಅಂಗಳದೊಳು||

ಕಂದ ಬಾ, ಎಂದು ತಾಯಿ ಕರೆದಳು
ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು
||ಕಂದ||
ತಾಯಿ ಕೌಸಲ್ಯ ಕಳವಳಗೊಂಡಳು
ಕಂದ ಅಂಜಿದನು ಎನ್ನುತ್ತಿದ್ದಳು
||ತಾಯಿ||
||ಅಂಗಳದೊಳು||

ಅಳುವಾ, ಧ್ವನಿ ಕೇಳಿ ರಾಜನು
ಮಂತ್ರಿ ಸಹಿತಾಗಿ ಧಾವಿಸಿ ಬಂದನು
||ಅಳುವಾ||
ನಿಲುವಾ ಕನ್ನಡಿ ತಂದಿರಿಸಿದಾ
ಶ್ರೀ ರಾಮನ ಎತ್ತಿ ಮುದ್ದಾಡಿದಾ
||ನಿಲುವಾ||
||ಅಂಗಳದೊಳು||

ಕನ್ನಡಿಯೊಳು ಬಿಂಬ ನೋಡಿದಾ
ರಾಮಾ , ನೋಡಿದಾ...
ಕನ್ನಡಿಯೊಳು ಚಂದ್ರ ಬಿಂಬವ ನೋಡಿದ

ಕನ್ನಡಿಯೊಳು ಬಿಂಬ ನೋಡಿದ
ಚಂದ್ರ ಸಿಕ್ಕಿದನೆಂದು ಕುಣಿದಾಡಿದಾ
||ಕನ್ನಡಿಯೊಳು||
ಇ ಸಂಭ್ರಮ ನೋಡಿ ಆದಿಕೇಶವಾ||2||
ರಘುವಂಶವನ್ನೇ ಕೊಂಡಾಡಿದ
||ಇ ಸಂಭ್ರಮ||

||ಅಂಗಳದೊಳು||

No comments:

Post a Comment