Wednesday 16 October 2019

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ ankita vijaya vittala

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ
ಸೋಮ ರಣರಂಗ ಭೀಮಾ ಆ ಮಹಾದುರಿತ
ರಾಮರಾಸಿಗೆ ದೇವಾ ಮೊಗನೆನಿಸುವ ಭೂಮಿ ಭಾರ ಹರ ||pa||

ಧರ್ಮನಂದನನೊಡನೆ ಜನಿಸಿ ಬಂದು
ದುರ್ಮತಿಗಳಾ ಕೂಡ ನಿರ್ಮತ್ಸರಾದಲ್ಲಿರದೆ ನಿರುತ ಛಾತ್ರಾ
ಕರ್ಮದಲ್ಲಿ ಮರೆದೆ ಧರ್ಮಕ ಹಿತರೊಂದು ನಿರ್ಮಿತದರಗಿನ
ಅರ್ಮನೆ ಮಾಡಿರೆ ಮರ್ಮ ತಿಳಿದು ದಾಟಿ
ಮಾರ್ಮಲೆತ ಅಸುರನ ನಿರ್ನಾಮಗೈಸಿದ
ನಿರ್ಮಳಾ ಮನೋಹರಾ ಪೇರ್ಮಿವುಳ್ಳವನೆ||1||

ಬಕನ ಸರ್ರನೆ ಸೀಳಿ ಬಿಸಾಟಿ ಪಾಂಚಾಲಕನ ಸಭಾದÀ ಮೌಳಿ
ಅಕಟ ತೊಲಗಿಸಿ ಗೆಲಿದು ನೆರೆದ ಕಾ
ಮುಕರ ಬಿಂಕವ ಹಳಿದು
ಬಕ ವಿರೋಧಿಯ ಭಕುತಿಯಿಂದಲಿ ಬಲು ಸುಖ ಬಡಿಸುತ ಕು
ಹಕ ಮಾಗಧÀನ ರಣಮುಖಕಾಹುತಿಯಿತ್ತು
ವಿಕಳತನದ ಕೀಚರ ಕಿಮ್ಮೀರ ಲಿಕಿಲಿಕಿ ಮಾಡಿದ||2||

ಗುರುವಿನ ರಥವೆ ತೆಗೆದು ಗಗನಕ್ಕೆ ಭರದಿಂದಲಿ ಬಗೆದು
ಹರಿದಾಡಿ ಕುಣಿಕುಣಿದು ನೆರದ ಸುತ್ತುವದ ರಥಿಕರ ಹಣಿದು
ಅರಿಗಳ ಶಿರಗಳ ತರಿ ತರಿದವನಿಗೆ
ಹರಪಿದೆ ಗುರುಸುತ ಧುರ ಧರದೊಳು
ಹರಿಶರ ಬಿಡಲಂಜದೆ ಎರಗದಲಿಪ್ಪ ಭ
ಳಿರೆ ಪರಾಕ್ರಮ ವರ ವೃಕೋದರ||3||

ಕೊಬ್ಬಿದ ದುಃಶಾಸನ್ನ ಉರವಣಿಸಿ ಮಬ್ಬಾದ ಕರಿ ತೀಕ್ಷಣ
ಕಬ್ಬು ತುಡಕಿದಂದದಿ ಪಿಡಿದವನ
ಇಬ್ಬಗದು ಉದರದ ಕೊಬ್ಬು ಹರಿಸಿ ಕರು
ಳಬ್ಬರದಲಿ ಸತಿಗೆ ಉಬ್ಬಿಗೆ ತೀರಿಸಿ
ಇಬ್ಬಲದವರನ ಯೆಬ್ಬಟಲು ಸುರರಭ್ಬೆಭ್ಬೆನುತಿರೆ
ಬೊಬ್ಬಾಟಕೆ ಜಗ ಸುಬ್ಬನ ಸೂರೆ ||4||

ಕುರುಪ ಜಲದೊಳಗೆ ಅಡಗಿರಲು
ಬಿರಖು ನುಡಿಯ ಕೆಳಗೆ ಪೊರಡಿಸಿ ಗದೆಯಿಂದಲಿ
ವೈರಿಯ ತೊಡೆ ಮುರಿದು ನಿರ್ಭಯದಿಂದಲಿ
ತುರಗಧ್ವರದಲಿ ಮೆರೆದೆ ದೋಷರಾಶಿ
ವಿರಹಿತ ಕಾಮನೆ ಸುರಮಣಿ ಜಗದಂ
ತರಿಯಾಮಿ ಪರಮಗುರುವೆ ವಿಜಯ
ವಿಠ್ಠಲರಿವ ಭಾರತ ಮಲ್ಲ ಮರುತಾವತಾರ ||5||
**********

No comments:

Post a Comment