ತಾಪ ಬ್ರಹ್ಮೇತಿ
ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ಪ
ಸಿಂಧು ಕಾವೇರಿ
ಕೃಷ್ಣವೇಣಿ ಗೋದೆ ತುಂಗೆ ನರ್ಮದಾ
ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು
ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ1
ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ
ವಿಕಳಮತಿಯಲಿಟ್ಟು ವರನಾದರೇನು
ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು
ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ 2
e್ಞÁನದಲ್ಲಿ ಪರರಿಗೆ ನ್ಯಾಯ ಪೇಳಿದರೇನು
ಹಾನಿ ನೆನೆಸಿ ಕೀರ್ತಿಯ ಪಡೆದರೇನು
ಧ್ಯಾನದಲಿ ಮಾನಸ ಪೂಜೆ ಮಾಡಿದರೇನು
ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ 3
ಯಾತ್ರೆ ತೀರ್ಥಂಗಳು ತೊಳಲಿ ತಿರುಗಿದರೇನು
ಪಾತ್ರಾಪಾತ್ರನರಿದು ನಡೆದರೇನು
ಗಾತ್ರವನು ಬಳಲಸಿ ನೇಮ ಮಾಡಿದರೇನು
ಮೂತ್ರದಲಿ ತೊಳೆದು ಅಮೃತನ್ನ ಉಂಡಂತೆ 4
ವಡೆವ ಮಡಕಿಗೆ ಚಿಂತಾಮಣಿ ತಂದು ಹಚ್ಚಲು
ಗಡಿಗಿ ಅಲ್ಲದೆ ಅದು ಪರುಶಾಗೋದೆ
ಬಿಡದೆ ಕೋಪಿಷ್ಠನು ಬಲು ಶಾಂತನೆನೆಸಿದರೆ
ಸಿರಿ ವಿಜಯವಿಠ್ಠಲನೊಲಿದು ಮೆಚ್ಚನಯ್ಯಾ 5
**********
ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ಪ
ಸಿಂಧು ಕಾವೇರಿ
ಕೃಷ್ಣವೇಣಿ ಗೋದೆ ತುಂಗೆ ನರ್ಮದಾ
ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು
ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ1
ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ
ವಿಕಳಮತಿಯಲಿಟ್ಟು ವರನಾದರೇನು
ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು
ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ 2
e್ಞÁನದಲ್ಲಿ ಪರರಿಗೆ ನ್ಯಾಯ ಪೇಳಿದರೇನು
ಹಾನಿ ನೆನೆಸಿ ಕೀರ್ತಿಯ ಪಡೆದರೇನು
ಧ್ಯಾನದಲಿ ಮಾನಸ ಪೂಜೆ ಮಾಡಿದರೇನು
ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ 3
ಯಾತ್ರೆ ತೀರ್ಥಂಗಳು ತೊಳಲಿ ತಿರುಗಿದರೇನು
ಪಾತ್ರಾಪಾತ್ರನರಿದು ನಡೆದರೇನು
ಗಾತ್ರವನು ಬಳಲಸಿ ನೇಮ ಮಾಡಿದರೇನು
ಮೂತ್ರದಲಿ ತೊಳೆದು ಅಮೃತನ್ನ ಉಂಡಂತೆ 4
ವಡೆವ ಮಡಕಿಗೆ ಚಿಂತಾಮಣಿ ತಂದು ಹಚ್ಚಲು
ಗಡಿಗಿ ಅಲ್ಲದೆ ಅದು ಪರುಶಾಗೋದೆ
ಬಿಡದೆ ಕೋಪಿಷ್ಠನು ಬಲು ಶಾಂತನೆನೆಸಿದರೆ
ಸಿರಿ ವಿಜಯವಿಠ್ಠಲನೊಲಿದು ಮೆಚ್ಚನಯ್ಯಾ 5
**********
No comments:
Post a Comment