Friday, 27 December 2019

ಬಿಡು ಎನ್ನ ಶೆರಗನು ಬಾಲಕೃಷ್ಣಾಉಡುಗಿ ankita indiresha

ಬಿಡು ಎನ್ನ ಶೆರಗನು 
ಬಾಲಕೃಷ್ಣಾ ।
ಉಡುಗಿ ದೇವರ 
ಮನಿ ಬರುವೆ ಬೇಗ ।। ಪಲ್ಲವಿ ।।

ಅಂಗಳ ಥಳಿ ಹಾಕಿ ।
ರಂಗವಲ್ಲಿಯ ಹಾಕಿ ।
ತಂಗಳ ಮೊಸರನ್ನಾ ।
ಕಡೆಯಲ್ಹಾಕಿ ।।
ಬಂಗಾರದ ಬಟ್ಟಲೊಳು ।
ರಂಗ ಬೆಣ್ಣೆಯನೀವೆ ।
ಕಂಗಳನೆ ತೆಗಿ ಬೀರು ।
ಮಂಗಳವಾ ।। ಚರಣ ।।... 

ಅಂದ ಮಾತನು ಕೇಳಿ ಆ ।
ಕಂದ ಎತ್ತಿಕೋ ಎನ್ನ ।
ಒಂದು ಬಟ್ಟಲದೊಳಗೆ ।। 
ತಂದುಕೊಡು ಆಡುವೆ ।
ಎಂದು ತಾಯಿ ಚಿನ್ನಾ ।
ಹಿಂದೆ ಸೆರಗಪಿಡಿದು 
ಇಂದಿರೇಶ ।। ೫ ।।
****

ಬಿಡು ಎನ್ನ ಶೆರಗನು ಬಾಲಕೃಷ್ಣಾಉಡುಗಿ ದೇವರ ಮನಿ ಬರುವೆ ಬೇಗ ||pa||

ಅಂಗಳ ಥಳಿ ಹಾಕಿ ರಂಗವಲ್ಲಿಯ ಹಾಕಿತಂಗಳ ಮೊಸರನ್ನಾ ಕಡೆಯಲ್ಹಾಕಿಬಂಗಾರದ ಬಟ್ಟಲೊಳು ರಂಗ ಬೆಣ್ಣೆಯನೀವೆಕಂಗಳನೆ ತೆಗಿ ಬೀರು ಮಂಗಳವಾ||1||

ಹಾಸಿಗೆ ಬಿಟ್ಟೇಳು ವಾಸುದೇವನೆ ನಿಮ್ಮಹಾಸಿನ ತೊಟ್ಟಿಲೊಳು ಮಲಗು ಕೂಸಾಏಸು ಹುಡುಗರೆಲ್ಲ ಸೋಸಿಲಿ ಕರೆವರುದೋಸೆ ಕೊಡುವೆ ತಿನ್ನೋ ಏಳು ಬೇಗ ||2||

ತರುವು ಕಟ್ಟಲಿ ಬೇಕು ಕರುವು ಕಾಯಲುಬೇಕುತೊರೆದು ಮಲಿಯನುಣ್ಣು ಏಳು ಬಾಲಜರದ ಕುಂಚಿಗೆ ಹೊದ್ದು ಹೊರಗೆ ಬಂದಿಹ ರಾಮಕರೆಯುತ್ತಲಿರುವನು ಕಣ್ಣೆತ್ತಿ ನೋಡು ||3||

ಕೋಳಿ ಕೂಗುತಲಿದೆ ಕಾಳು ಕಡಿವೆ ಹಾಕುಏಳು ಗಿಳಿಯು ನಿನ್ನ ಕೇಳುತಲಿವೆಪಾಲು ಸಕ್ಕರಿನಿತ್ತು ಸಾಲು ಕೋಕಿಲ ಹಿಂಡುಗಾನ ಮಾಡುತಲಿವೆ ಏಳು ಬೇಗ||4||

ಅಂದ ಮಾತನು ಕೇಳಿ ಆ ಕಂದ ಎತ್ತಿಕೋ ಎನ್ನಒಂದು ಬಟ್ಟಲದೊಳಗೆ ತಂದುಕೊಡು ಆಡುವೆಎಂದು ತಾಯಿ ಚಿನ್ನಾ ಹಿಂದೆ ಸೆರಗಪಿಡಿದು ಇಂದಿರೇಶ ||5||
********

No comments:

Post a Comment