Thursday 12 December 2019

ನಾನೆ ಭ್ರಮಿಸಿದೆನೊ ವಿಷಯದಿ ಮಮತೆ ankita gopala vittala

ನಾನೆ ಭ್ರಮಿಸಿದೆನೊ ವಿಷಯದಿ, ಮಮತೆ ನೀನೆ ಸೃಜಿಸಿದೆಯೊ || ಪ. ||

ಅನಾದಿ ನಿಧಾನ ನೀನೆ ತಿಳಿದು ನೋಡೊ || ಅ.ಪ. ||

ಕೇವಲಾನಂದ ಚಿನ್ಮಯರೂಪ ನೈಜಸ್ವಭಾವ ತ್ಯಜಿಸಿ
ಅನ್ಯ-ಭಾವವಾಶ್ರಯಿಸಲು ಶ್ರೀವರ ನಿನ್ನ ಬಂಧಕಶಕುತಿ
ಆವರಿಸೆನ್ನ ಕಾವಗೊಳಿಸಿ ಈ ವಿಧ ಬನ್ನ ಬಡಿಸುತಿದೆ
ಕೈವಲ್ಯದರಸನೆ ನೀ ವಿಚಾರಿಸಿ ಕಾಯೊ || 1 ||

ಸ್ವತಂತ್ರ ನೀನು ಅಸ್ವತಂತ್ರ ನಾನು
ದೂತನ್ನ ಈ ತೆರಕಾತುರಗೊಳಿಪುದು ಏತರಘನವೊ
ಇದರಿಂದಖ್ಯಾತೇನುಫಲವೊ ಎನ್ನೊಳು ನಿನಗೇತಕೀ ಛಲವೊ
ಭವದಿ ಕೈ-ಸೋತು ಬಿನ್ನೈಸುವೆ ಮಾತುಮನ್ನಿಸಿ ಕಾಯೊ || 2 ||

ಕಕ್ಕಸ ಭವದೊಳು ಠಕ್ಕಿಸಿ ಸಿಗಹಾಕಿ ಸಿಕ್ಕುಬಿಡಿಸದೆ
ನೀ-ನಕ್ಕು ಸುಮ್ಮನಿರಲು ದಿಕ್ಕ್ಯಾರೊ ಎನಗೆ
ದಣಿದು ಮೊರೆ-ಯಿಕ್ಕುವೆ ನಿನಗೆ, ಬಂದು ಬೇಗ
ನೀ ತಕ್ಕೊನೀ ಕೈಗೆ ಎನ್ನವಗುಣ ಲೆಕ್ಕಿಸದಲೆ ಕಾಯ್ಯಬೇಕಯ್ಯ ಕೊನೆಗೆ || 3 ||

ಪ್ರಿಯ ನೀನೆನಗೆಂದು ಅಯ್ಯ, ನಿನ್ನ ನಂಬಲು ಮಯ್ಯ ಮರೆಸಿ
ವಿ-ಷಯದುಯ್ಯಾಲೆಗೊಪ್ಪಿಸಿದೆ ಸಯ್ಯಲೊ ದೊರೆಯೆ ಇಂಥವನೆಂದು
ಅಯ್ಯೊ ಮುನ್ನರಿಯೆ ಕರುಣಿ ಎಂಬೊ ಹಿಯ್ಯಳಿ ಸರಿಯೆ
ಇನ್ನಾದರುಕಯ್ಯ ಪಿಡಿಯಲು ಕೀರ್ತಿ ನಿನಗೆಲೊ ಹರಿಯೆ || 4 ||

ಮೊದಲೆಮ್ಮಾರ್ಯರು ನಿನ್ನ ಪದನಂಬಲವರಘ ಸದೆದು
ಸಮ್ಮುದದಿ ಸಂ-ಪದವ ನೀಡಿದೆಯಂತೆ ಅದನು ಮರೆದೆಯೊ
ಶಕುತಿಯು ಸಾಲದಲೆ ಜ-ರಿದೆಯೊ ಜನರು ಪೇಳಿದ ಮಾತು
ಪುಸಿಯೊ ನಿಜ ತೋರಲು ಬುಧನುತ ಗೋಪಾಲವಿಠಲ ಕೀರುತಿಯೊ || 5 ||
***

Nane Bramisideno vishayadi, mamate nine srujisideyo || pa. ||

Anadi nidhana nine tilidu nodo || a.pa. ||

Kevalananda cinmayarupa naijasvabava tyajisi
Anya-bavavasrayisalu srivara ninna bandhakasakuti
Avarisenna kavagolisi I vidha banna badisutide
Kaivalyadarasane ni vicarisi kayo || 1 ||

Svatantra ninu asvatantra nanu
Dutanna I terakaturagolipudu etaraganavo
Idarindakyatenupalavo ennolu ninagetaki Calavo
Bavadi kai-sotu binnaisuve matumannisi kayo || 2 ||

Kakkasa bavadolu Thakkisi sigahaki sikkubidisade
Ni-nakku summaniralu dikkyaro enage
Danidu more-yikkuve ninage, bandu bega
Ni takkoni kaige ennavaguna lekkisadale kayyabekayya konege || 3 ||

Priya ninenagendu ayya, ninna nambalu mayya maresi
Vi-shayaduyyalegoppiside sayyalo doreye inthavanendu
Ayyo munnariye karuni embo hiyyali sariye
Innadarukayya pidiyalu kirti ninagelo hariye || 4 ||

Modalemmaryaru ninna padanambalavaraga sadedu
Sammudadi sam-padava nidideyante adanu maredeyo
Sakutiyu saladale ja-rideyo janaru pelida matu
Pusiyo nija toralu budhanuta gopalavithala kirutiyo || 5 ||
***

No comments:

Post a Comment