ರಾಗ - : ತಾಳ -
ಧೊರೆ ಧೊರೆ ವೆಂಕಟೇಶ l ನೀನೆ l
ಧೊರೆ ಧೊರೆ ವೆಂಕಟೇಶ ll ಪ ll
ಸಂಕಟವೆಲ್ಲವ ಪರಿಹರಿಸು l
ವೆಂಕಟೇಶ ಧೊರೆ ಧೊರೆ ll ಅ ಪ ll
ಎತ್ತಿನ ಪೆಸರುಳ್ಳ ಮತ್ತೆ ರಕ್ಕಸ ತನ್ನ l
ಕುತ್ತಿಗೆ ತೆಗೆದಿಡಲು ಉತ್ತಮ ಗತಿಯಿತ್ತೆ ll 1 ll
ಅಂಜನೆ ಎಂಬುವಳ್ಮಂಜು ಬಿಸಲಿಗೆ l
ಅಂಜದೆ ತಪಿಸಲು ಸಂಜೀವನವ ಕೊಟ್ಟ ll 2 ll
ಸಾಸಿರ ಮುಖವುಳ್ಳ ಶೇಷನಹಂಕಾರ l
ಶ್ವಸನನ ಕೈಯಿಂದ ನಾಶ ಮಾಡಿಸಿದಂಥ ll 3 ll
ಮಾಧವ ಮಾದಿಗ ಹಾದಿಯ ಮೆಟ್ಟಲು l
ಮೋದದಿ ಉದ್ಧರಿಸಿದ ಮಾಧವ ಸಲಹೆನ್ನ ll 4 ll
ಮೇರುಗಿರಿಯ ಮಗನು ಈರೆರಡು ಯುಗದಲಿ l
ಮೂರೊಂದಭಿದ ಬೀರಿದ ಶ್ರೀನಿಧಿವಿಟ್ಠಲ ll 5 ll
***
No comments:
Post a Comment