Wednesday 1 September 2021

ಇದೇ ನಮ್ಮ ಶ್ರೀ ಹರಿ ಕೀರ್ತನಿ ಸಾಧು ಸಜ್ಜನರ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಇದೇ ನಮ್ಮ ಶ್ರೀ ಹರಿ ಕೀರ್ತನಿ ಸಾಧು ಸಜ್ಜನರ ಮೃತಸಂಜೀವನಿ ಸದ್ಗೈಸುವ ದಿವ್ಯ ಸುಸಾಧನಿ ಸದ್ಗುರು ಸುಮೂರ್ತಿ ಪ್ರಾರ್ಥನಿ ಧ್ರುವ ಶಮದಮವೆಂಬೆರಡು ತಾಳಗೂಡಿ ಪ್ರೇಮ ಭಾವನೆ ಧ್ರುಪÀದಿಗಳ ಮಾಡಿ ಸಮರಸವೆ ಮೃದಂಗವಿದು ನೋಡಿ ಸಮದೃಷ್ಟಿಲಿವೆ ನಾಮ ಕೊಂಡಾಡಿ 1 
ಸಾವಧಾನವೆಂಬ ನಿರೋಪಣಿ ನಿವಾಂತ ಕೇಳು ವಿಚಾರಣಿ ಈ ವಾಕ್ಯಬಲ್ಲ ಲಕ್ಷಕೊಬ್ಬ ಙÁ್ಞನಿ ಭಾವ ಬಲ್ಲುದೆ ಮುಖ್ಯ ಸಾಧನಿ 2 
ಮನಸ್ವಸ್ತ ಮಾಡಿ ನೀವಿನ್ನು ಕೇಳಿ ಅನುಮಾನ ಬಿಟ್ಟಿ ಇಕ್ಕಿ ಚಪ್ಪಾಳಿ ಗನಗುರು ಪಾದದಲ್ಯೊಮ್ಮೆ ಹೊರಳಿ ಹಣಿಗ್ಹಚ್ಚಿಕೊಂಬಾ ಗುರುಪಾದಧೂಳಿ 3 
ಚಿತ್ತ ಚಂಚಲಾಗ ಬಾರದು ನೋಡಿ ವಸ್ತು ಬಾಹುದು ಬ್ಯಾಗೆ ಕೈಗೂಡಿ ಮಿಥ್ಯಾ ಪ್ರಪಂಚ ಈಡ್ಯಾಡಿ ನಿತ್ಯ ನಿರ್ಗುಣಾನಂದ ಸ್ತುತಿಪಾಡಿ 4 
ಪುಣ್ಯಕೀರ್ತನೆ ಕೇಳಿ ಸಂಭ್ರಮ ಧನ್ಯ ಧನ್ಯ ಕೇಳಿದವರ ಜನ್ಮ ಕಣ್ಣಾರೆ ಕಾಂಬುವ ನಿಜವರ್ಮ ಚಿಣ್ಣ ಮಹಿಪತಿಗಾನಂದೋ ಬ್ರಹ್ಮ 5
***

No comments:

Post a Comment