ಸುಮ್ಮನಹುದು ನೋಡಿ ಸ್ವಾತ್ಮ ಸುಖದನುಭವ ಹಮ್ಮಳಿದು ತನ್ನೊಳು ತಾ ತಿಳಿಯದನಕ ಪ
ಏನು ಕೇಳಿದರೇನು ಏನು ಹೇಳಿದರೇನು ಖೂನದೋರದು ತಾನು ಸ್ವಾನುಭವದ ನಾನೆಂಬುದೆನಲಿಕ್ಕೆ ಏನು ಮಾಡಿದರೇನು ಜ್ಞಾನ ಗಮ್ಯವಸ್ತು ತಾನೊಲಿಯದನಕ 1
ಕನಸು ಮನಸಿನ ಕಲಿಯು ಕಲಿತು ಕೆಟ್ಟಿರಲಿಕ್ಕೆ ಅನುಮಾನಗಳಿಯದಪಭ್ರಂಶಗಳಿಗೆ ಅನುದಿನದಲಾಶ್ರಯಿಸಿ ಘನಗುರು ಶ್ರೀಪಾದವನು ನೆನೆನೆನೆದು ಸುಖವು ನೆಲೆಗೊಳ್ಳದನಕ 2
ಮಹಾ ಮಹಿಮೆಯುಳ್ಳ ಗುರುದಯ ಪಡಕೊಂಡು ಮನೋಜಯಸುದಲ್ಲದೆ ಘನಮಯ ಹೊಳೆಯದು ಮಹಿಪತಿಯ ಸ್ವಾಮಿ ಸದ್ಗುರು ಭಾನುಕೋಟಿ ತೇಜ ಬಾಹ್ಯಾಂತ್ರ ಪರಿಪೂರ್ಣ ತಾನಾಗದನಕ 3
***
No comments:
Post a Comment