Thursday, 5 December 2019

ಕೊಬ್ಬಿರಲು ಬೇಡವೋ ಹೇ ಮನುಜ purandara vittala

ರಾಗ ಪೂರ್ವಿ. ಅಟ ತಾಳ

ಕೊಬ್ಬಿರಲು ಬೇಡವೋ, ಹೇ ಮನುಜ ||ಪ ||

ಸಿರಿ ಬಂದ ಕಾಲಕೆ ಬಲು ಗರ್ವ ತೋರುತ್ತ
ಬಿರಿ ಬಿರಿ ಕಣ್ಣು ಮೇಲಕ್ಕೆ ನೋಡುವರು
ಸಿರಿ ಹೋದ ಮರುದಿನ ಬಡತನ ಬಂದರೆ
ಹುರುಕು ಕಜ್ಜಿಯ ತುರಿಸಿ ತಿರುಗುವರಯ್ಯ ||

ಒಡವೆ ವಸ್ತುಗಳಿಟ್ಟು ಬಡಿವಾರ ಮಾಡುವರು
ನಡೆಯಲಾರೆವೆಂದು ಬಳುಕುವರು
ಸಿಡಿಲು ಎರಗಿದಂತೆ ಬಡತನ ಬಂದರೆ
ಕೊಡಗಳೆರಡು ಹೊತ್ತು ನೀರ ತರುವರಯ್ಯ ||

ವ್ಯಾಪಾರ ಒಲಿದಾಗ ಕೋಪ ಅನ್ಯಾಯದಿ
ಶಾಪಕೊಂಬರು ಬಡವರ ಕೈಯ
ಶ್ರೀಪತಿ ಪುರಂದರವಿಟ್ಠಲರಾಯನೆ
ವ್ಯಾಪಾರ ಮುಗಿದರೆ ತಿರಿದುಂಬರಯ್ಯ ||
***


pallavi

kobbiralu bEDavO hE manuja

caraNam 1

siri banda kAlake balu garva tOrutta biri biri kaNNu mElakke nODuvaru
siri hOda marudina baDadana bandare hurugu kajjiya turisi tiruguvarayya

caraNam 2

oDave vastugaLiTTu baDivAra mADuvaru naDeyalArevendu baLukuvaru
siDilu eragidante baDatana bandare koDagaLeraDu hottu nIra taruvarayya

caraNam 3

vyApAra balidAga kOpa anyAyadi shApa kombaru baDvara kaiya
shrIpati purandara viTTalarAyane vyApAra mugidare tiridumbarayya
***

No comments:

Post a Comment