ರಾಗ ಕೇದಾರಗೌಳ ತ್ರಿಪುಟತಾಳ
ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ
ಒಂದೊಂದು ಕ್ಷಣಕೆ ಅನಂತ ದುಃಖ ||ಪ||
ಬಸಿರಿನೊಳಗೆ ದುಃಖ ಶಿಶುತನದಲಿ ದುಃಖ
ಎಸೆವ ಕೌಮಾರ ಯೌವನದ ದುಃಖ
ವಶವಲ್ಲದ ದುಃಖ ವಾರ್ಧಿಕ್ಯದ ದುಃಖ
ಸತಿ ಸುತ ಮಿತ್ರರು ಕಾಡುವ ದುಃಖ ||
ಅಷ್ಟ ಭೋಗದ ದುಃಖ ಆರರಿಗಳ ದುಃಖ
ಕಷ್ಟ ದಾರಿದ್ರ್ಯ ಕಾಡುವ ದುಃಖ
ಮೃಷ್ಟಾನ್ನವು ಇಲ್ಲದೆ ಮಿಡುಕುವ ದುಃಖ
ದುಷ್ಟರಿಂದ ನುಡಿ ಕೇಳುವ ದುಃಖ ||
ತನಗಿಂತಲಧಿಕರನನುಸರಿಸುವ ದುಃಖ
ತನಗಿಂತ ಬಡವರು ಕಾಡುವ ದುಃಖ
ತನ್ನ ಸರಿಯರ ಮಾತು ಕೇಳುವ ದುಃಖ
ತನ್ನವರು ತನಗಿನ್ನು ಆಗದ ದುಃಖ ||
ಗತಿ ನೀನೇಯೆಂದು ಹಂಗಿನ ಕೂಳಿನ ದುಃಖ
ಪ್ರತಿ ಉಪಕಾರ ಮಾಡುವ ದುಃಖ
ಶ್ರುತಿ ವಚನಗಳಿಲ್ಲದೆ ಇಹದಲಿ ದುಃಖ
ಅತಿ ಸ್ನೇಹದವರನ್ನು ಬಿಡುವ ದುಃಖ ||
ಇಂದಿಹ ಸುಖ ದುಃಖ ದೇಹ ಗೇಹವೆ ಸಾಕು
ಶಂಕರನೊಡೆಯ ಶ್ರೀ ಹರಿಯೆ ಕಾಯೊ
ಸಂತತ ಸಿರಿಪುರಂದರವಿಠಲ ಲಕ್ಷ್ಮೀ-
ಕಾಂತನ ನೆನೆದು ನಿಶ್ಚಿಂತನಾಗು ಮನವೆ||
***
ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ
ಒಂದೊಂದು ಕ್ಷಣಕೆ ಅನಂತ ದುಃಖ ||ಪ||
ಬಸಿರಿನೊಳಗೆ ದುಃಖ ಶಿಶುತನದಲಿ ದುಃಖ
ಎಸೆವ ಕೌಮಾರ ಯೌವನದ ದುಃಖ
ವಶವಲ್ಲದ ದುಃಖ ವಾರ್ಧಿಕ್ಯದ ದುಃಖ
ಸತಿ ಸುತ ಮಿತ್ರರು ಕಾಡುವ ದುಃಖ ||
ಅಷ್ಟ ಭೋಗದ ದುಃಖ ಆರರಿಗಳ ದುಃಖ
ಕಷ್ಟ ದಾರಿದ್ರ್ಯ ಕಾಡುವ ದುಃಖ
ಮೃಷ್ಟಾನ್ನವು ಇಲ್ಲದೆ ಮಿಡುಕುವ ದುಃಖ
ದುಷ್ಟರಿಂದ ನುಡಿ ಕೇಳುವ ದುಃಖ ||
ತನಗಿಂತಲಧಿಕರನನುಸರಿಸುವ ದುಃಖ
ತನಗಿಂತ ಬಡವರು ಕಾಡುವ ದುಃಖ
ತನ್ನ ಸರಿಯರ ಮಾತು ಕೇಳುವ ದುಃಖ
ತನ್ನವರು ತನಗಿನ್ನು ಆಗದ ದುಃಖ ||
ಗತಿ ನೀನೇಯೆಂದು ಹಂಗಿನ ಕೂಳಿನ ದುಃಖ
ಪ್ರತಿ ಉಪಕಾರ ಮಾಡುವ ದುಃಖ
ಶ್ರುತಿ ವಚನಗಳಿಲ್ಲದೆ ಇಹದಲಿ ದುಃಖ
ಅತಿ ಸ್ನೇಹದವರನ್ನು ಬಿಡುವ ದುಃಖ ||
ಇಂದಿಹ ಸುಖ ದುಃಖ ದೇಹ ಗೇಹವೆ ಸಾಕು
ಶಂಕರನೊಡೆಯ ಶ್ರೀ ಹರಿಯೆ ಕಾಯೊ
ಸಂತತ ಸಿರಿಪುರಂದರವಿಠಲ ಲಕ್ಷ್ಮೀ-
ಕಾಂತನ ನೆನೆದು ನಿಶ್ಚಿಂತನಾಗು ಮನವೆ||
***
pallavi
ondalla eraDalla nonda jIvake dukka ondondu kSaNake ananta dukka
caraNam 1
basiriLoLage dukkha shishu tanadali dukka eseva kaumAra yauvanada dukka
vashavallada dukkha vArdigyada dukka sati suta mitraru kADuva dukka
caraNam 2
aSTa bOgada dukkha ArarigaLa dukka kaSTa dAridrya kADuva dukka
mrSTAnnavu illade miDukuva dukka duSTarinda nuDi kELuva dukka
caraNam 3
tanagintaladhikrananu sarisuva dukka tanaginta baDavaru kADuva dukka
tanna sariyara mAtu kELuva dukka tannavaru tanaginnu Agada dukka
caraNam 4
gati nInEyendu hangina kULina dukka prati upakAra mADuva dukka
shruti vacanagaLillade ihadali dukka ati snEhadavarannu biDuva dukka
caraNam 5
indiha sukha dukkha dEha gEhava sAku shankaranoDeya shrI hariye kAyo
santata siri purandara viTTala lakSmIkAntana nenedu nishcintanAgu manave
***
No comments:
Post a Comment