Saturday, 28 December 2019

ಸ್ಮರಿಸು ವರಘಹರ ರಾಘವೇಂದ್ರ ಗುರು ankita gurugovinda vittala

ಸ್ಮರಿಸುವರಘಹರ ರಾಘವೇಂದ್ರ ಗುರು
ಆರುಮೊರೆ ಇಡುವೆನು ತವಪದದಲ್ಲೀ ಪ

ಸುರತರು ನಿನ್ನನು | 
ನಿರುತದಿ ನುತಿಸುವವರವನೆ ಕರುಣಿಸು | 
ಗುರು ರಾಘವೇಂದ್ರ ಅ.ಪ.

ಕೃತ ಯುಗದೊಳು ತಾ | 
ಮುನಿ ಕಶ್ಯಪನಸುತನಲಿ ಮೋದದಿ | 
ಸುತನಾಗಿ ಜನಿಸುತ |ಪಿತನತಿ ಬಾಧೆಗೆ | 
ಅಳುಕದೆ ಮನ್ಮಥಪಿತನಧಿಕೆಂದು ಬಹು | 
ಸಾರಿದೆ ಗುರುವರ 1

ಜನಪ ಪ್ರತೀಪನ | 
ಸುತ ವರನೆನಿಸುತಜನಿಸುತ ಪ್ರೀತಿಲಿ | 
ದ್ವಾಪರದಲ್ಲೀ |ಘನಬಲ ಬಾಹ್ಲೀಕ | 
ನೆನಿಸುತ ನೀನೂಅನಿರುದ್ಧ ಮೂರ್ತಿಯ | 
ಸೇವಿಸಿ ಮೆರೆದೆ 2

ನ್ಯಾಯಾ ಮೃತ ಚಂ | 
ದ್ರಿಕೆಗಳ ರಚಿಸುತಮಾಯ ಮತವನು | 
ಪರಿಪರಿ ಜೆರೆಯುತ |
ಕಾಯ ಜನಯ್ಯನ | 
ಕೀರ್ತಿಯ ಬೀರುತತೋಯಜಾಕ್ಷ ಹರಿ | 
ಅಧಿಕೆಂದು ಸಾರಿದೆ 3

ಸಂಗವ ತೊರೆದು | 
ಸುಧೀಂದ್ರರ ಕರಜನೆತಂಗಾತೀರದಿ | 
ಮಂತ್ರಾಲಯದಲಿ |
ಮಂಗಳ ಮಹಿಮನ | 
ಧ್ಯಾನವ ಗೈಯುತತುಂಗ ವಿಕ್ರಮ ಹರಿ | 
ಪರನೆಂದು ಸಾರಿದೆ 4

ವಾತನ ಮತ ವಿ | 
ಸ್ತರಿಸಿದ ಧೀರನೆದ್ವೈತ ದುಂದುಭಿಯ | 
ಮೊಳಗಿಸಿದಾತನೆ |
ದೂತರ ಪ್ರಿಯ ಗುರು | 
ಗೋವಿಂದ ವಿಠಲನಪ್ರೀತಿಲಿ ಭಜಿಸುವ | 
ದಾಸಾಗ್ರಣಿಯೇ 5
***

No comments:

Post a Comment