Thursday 12 December 2019

ಕಷ್ಟ ಸಂಸಾರವೆಂಬ ಅಟ್ಟುಳಿಗೆ ನಾ ಅರೆ gopala vittala

on ರಾಘವೇಂದ್ರ ಗುರುಗಳು
ಕಷ್ಟ ಸಂಸಾರವೆಂಬ ಅಟ್ಟುಳಿಗೆ ನಾ ಅರೆ
ಕೃಷ್ಣೋಪಾಸಕ ರಾಘವೇ೦ದ್ರ            || ಪ ||
ವರ್ಣಿಸಲು ಕುಳಿತರೆ ವಶವಲ್ಲ ಇದಕ೦ತ್ಯ
ವನ್ನು ಕ೦ಡವರ ಈಗ ಕಾಣೆ
ಎನ್ನ೦ತೆ ಬಳಲುವರು ಇಲ್ಲ ಯೋಚಿಸಿ
ನಿನ್ನ ತೋರುವರು ಆರಿಲ್ಲ
ದಣಿದು ಹಣ್ಣು ಹಣ್ಣಾದೆ ನಾಯೆಲ್ಲ ಅಯ್ಯಾ
ನಿನ್ನ ಹೊರತಾಗಿನ್ನು ಎನ್ನ ದಾಟಿಸುವರ
ಇನ್ನು ನಾ ಕಾಣೆ ತ೦ದೆ – ಮು೦ದೆ            || ೧ ||
ಮೂರುಗುಣ ಪ್ರವಾಹ ಸುಳಿಯೊಳಗೆ ಬಿದ್ದು ನಾ
ಏರಲು ದಡವ ಕಾಣೆನಯ್ಯಾ
ಆರರಿಗಳೆ೦ಬಹಿಯಕಾಟಕೀಳು
ನಾರಿಸ೦ತರ ಕೂಟ ಸಿಲ್ಕಿ
ಪಾರುಗಾಣೆ ಉಪಾಯ ದಾಟಿ ಚೆಲ್ವ
ನಾರಾಯಣನ ಮುಖ್ಯಕಾರುಣ್ಯಕೆ ಪಾತ್ರ
ಸಾರಿದೆನು ನಿನಗೆ ವೇಗ – ಈಗ        || ೨ ||
ಒಮ್ಮೆ ಮುಣುಗುವೆನಯ್ಯಾ ಒಮ್ಮೆ ತಳಕೆಳನಾಹೆ
ಒಮ್ಮೆ ತಲೆ ಎತ್ತುವೆನು ನಲಿವೆ
ಅಮ್ಮಮ್ಮ ಎನ್ನ ಆಯಾಸವ ತರಿದು
ನಿಮ್ಮ ಚರಣಗಳ ಸೇವಿಸುವ ಲಾಭ
ಸನ್ಮತಿಯನಿತ್ತು ಸ೦ತೋಷವಾ ಚಲ್ವ
ರಮೆಯರಸ ನಮ್ಮ ಗೋಪಾಲವಿಠ್ಠಲ ಪರ
ಬೊಮ್ಮನ ಅರ್ಚಿಸುವ ಸುಮ್ಮನಸ – ಪಾ೦ಸಾ        || ೩ ||
***********

No comments:

Post a Comment