Saturday, 11 December 2021

ಬಾದರಾಯಣದೇವ ಭಕುತ ಬಂಧೋ ankita sundara vittala

 kruti- gorebalu hanumantaraya

ರಾಗ - : ತಾಳ -


ಬಾದರಾಯಣದೇವ ಭಕುತ ಬಂಧೋ

ವೇದವೇದ್ಯನೆ ದಯದಿ ಸಂದರ್ಶನವನಿತ್ತೆ ll ಪ ll


ಬೆಳಗುಝಾವದ ಸ್ವಪ್ನ ಕಳವಳಗೊಳಸಲ್ಲ l

ತಳಿರು ತೋರಣಾಲಂಕೃತ ಪರಿಮಳೋದ್ಯಾನ ll

ದೊಳಗೆ ತರುವೇದಿಕೆ ದಶರವಿಯ ದೀಪ್ತಿಯಲಿ l 

ಕುಳಿತು ಋಷಿಗಳ ಮಧ್ಯ ಉಪದೇಶ ಗೈಯ್ಯುತಲಿ ll 1 ll


ಪೊಳೆವ ಜಟಾಜೂಟ ಪೊಂಬಣ್ಣದಂತೆಸೆಯೆ l

ನಳಿನಾಕ್ಷ ನಾ ನಿಮಗೆ ನಮನ ಗೈಯಲು ಪರಸಿ ll

ಒಳಿತೆ ಈ ಭಿತ್ತಿಯಲಿ ಬರೆದುದನು ಓದೆನಲು l

ಸಲೆ ಬಾರದೆನ್ನೆ ಛಾಂದೋಗ್ಯ ಶ್ರುತಿಗಳ ಪೇಳ್ದೆ ll 2 ll


ವರಶೃತಿಗಳೆನ್ನಿಂದ ಉಚ್ಚರಿಸಿ ಅದರರ್ಥ l 

ಅರುಹಿರೈ ಭೃಗುಜಋಷಿಯೆ ಬ್ರಹ್ಮ ಕುಲಮಾನಿ ಎನೆ ll

ಮರುಳೆ ಮರೆತೆಯೊ ಎಂದು ಎರಡು ಶ್ರುತ್ಯರ್ಥಗಳ l 

ತರತಮಭಾವ ವಿಸ್ತರಿಸಿ ಪೇಳಿಸಿದ ದೊರೆ ll 3 ll


ಇಪ್ಪತ್ತನೇ ವಯದಿ ಓದಿದೀ ಗುರುಗಳಲಿ l

ಎಪ್ಪತ್ತನೆ ವಯದ ಮುಪ್ಪಿನಾ ಮರಹೇನೋ ll 

ಅಪ್ಪನೀಂ ಮೆರೆಸಿದರೆ ನಾಮರೆದೆನೋ ಸ್ವಾಮಿ l

ತಪ್ಪು ಎನದಲ್ಲ ಗುರುಗಳ ಸಾಕ್ಷಿ ಬಿನ್ನೈಪೆ ll 4 ll


ಇಂತನುಗ್ರಹಿಸಿ ಶ್ರೀಮಂತ್ರ ಮಂದಿರದಯಕೆ l 

ಸಂತತದಿ ಪಾತ್ರ ಬ್ರಹ್ಮ ವಿದ್ಯಾ ಗುರುಗಳ ll

ಮುಂತೆ ನಿಶ್ಚಯಲಭ್ಯ ರಘುಕಾಂತ ತೀರ್ಥರ ಪಾದ l

ಸಂತಸದಿ ತೋರ್ದ ತೈಜಸನೆ ಸುಂದರವಿಟ್ಠಲ ll 5 ll

***


No comments:

Post a Comment