ರಾಗ - : ತಾಳ -
ಏಳು ಭುಂಜಿಸು ನಮ್ಮ ಬಾಲಕೃಷ್ಣ
ಶ್ರೀಲಕ್ಷ್ಮೀಸಹ ಧನುಷ ಕಾಲದೂಟವನು ll ಪ ll
ಅನ್ನ ಪಾಯಸ ಭಕ್ಷ ಬೆಣ್ಣೆ ದಧಿ ಘೃತ ಪಾಲು
ಸಣ್ಣ ಹುಳಿದೋಸೆ ಮುದ್ಗಾನ್ನ ಸೂಪ ll
ಚಿನ್ಹಧರಿವಾಣದಲಿ ನಿನ್ನ ತಾಯಿಯು ಗೋಪಿ
ಧನ್ಯ ಬಡಿಸುತಲಿಹಳು ಘನ್ನ ಮಹಿಮ ll 1 ll
ಬುತ್ತಿ ಬಹು ಶಾಖಗಳು ಕಿತ್ತಳಿ ಖರ್ಜೂರ
ಉತ್ತುಮುಪ್ಪಿನಕಾಯಿ ಚಿತ್ರಾನ್ನವು ll
ಹೊತ್ತರರುಣೋದಯದಿ ಭಕ್ತಿಂದ ಬಡಿಸುವಳು
ರತ್ನಪೀಠದಿ ಕೂತು ವಕ್ತ್ರತೊಳಿಯೊ ll 2 ll
ಮತ್ಸ್ಯ ಕೂರ್ಮನೆ ವರಹ ಮರ್ತ್ಯಮೃಗ ವರವಟುವೆ
ಕ್ಷತ್ರರಿಪು ರಾಮ ಹಯವಕ್ತ್ರ ವ್ಯಾಸ ll
ದತ್ತ ಮೊದಲವತಾರ ದೈತ್ಯ ಮೋಹನ ವಿಪ್ರ
ಪುತ್ರಿಂದಿರೇಶ ಕರವೆತ್ತಿ ಪ್ರಾರ್ಥಿಸುವೆ ll 3 ll
***
No comments:
Post a Comment