Saturday, 4 December 2021

ಗೋಪ ಗೋಪನೆಂಬಾ ಕೋಗಿಲೆ ನಮ್ಮ ಶ್ರೀಪತಿಯ ಕಂಡರೆ ankita hayavadana GOPA GOPANEMBAA KOGILE NAMMA SRIPATIYA KANDARE



ಗೋಪಗೋಪನೆಂಬ ಕೋಗಿಲೆ ನಮ್ಮ 

ಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ||ಪ||


ಮಧುಮಾಸದಿ ಮಾಧವ ಬರಲು 

ಸುದತಿಯರು ಸಮ್ಮೇಳದಿಂದಲಿ

ಒದಗಿ ವಸಂತದಲ್ಲಾಡುವ ಸಮಯದಿ 

ಪದುಮನಾಭನ ಕಂಡರೆ ಬರಹೇಳೆ ಕೋಗಿಲೆ ||೧||


ಅಂಗಜನಯ್ಯನ ಅಗಣಿತನ 

ಮಂಗಳ ಮಹಿಮನ ಮೂರುತಿಯಾ

ಸಂಗೀತ ಸೊಬಗಿನ ಸೊಲ್ಲು ನುಡಿಯಲಿ 

ರಂಗನ ಕಂಡರೆ ಬರಹೇಳೆ ಕೋಗಿಲೆ ||೨||


ಇಟ್ಟಾಡುವ ಶೃತಿಕೃತಿಗಳಾ 

ಬಟ್ಟೆಯ ಕಾಣೆವು ಪರಬೊಮ್ಮನ

ಸೃಷ್ಟಿಯೊಳಗೆ ನಮ್ಮ ಪುರಂದರ ವಿಠಲನ 

ಥಟ್ಟನೆ ಕಂಡರೆ ಬರಹೇಳೆ ಕೋಗಿಲೆ ||೩||

***


gOpagOpaneMba kOgile namma 

shrIpatiya kaMDare barahELe kOgile ||pa||


madhumaasadi maadhava baralu 

sudatiyaru sammELadiMdali

odagi vasaMtadallaaDuva samayadi 

padumanaabhana kaMDare barahELe kOgile ||1||


aMgajanayyana agaNitana 

maMgaLa mahimana mUrutiyaa

saMgIta sobagina sollu nuDiyali 

raMgana kaMDare barahELe kOgile ||2||


iTTADuva shRutikRutigaLaa 

baTTeya kaaNevu parabommana

sRuShTiyoLage namma puraMdara viThalana 

thaTTane kaMDare barahELe kOgile ||3||

***


ಗೋಪಗೋಪನೆಂಬಾ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ಪ 


ಕೆಂಗಾವಳೆಯಾಲೆದಲಿ (?) ಪಾಂಡುರಂಗಮಂಗಳ ಮೂರುತಿಪ್ಪಶೃಂಗಾರವಾದ ಸುರತರುವಿನ ನೆರಳೊಳುರಂಗನಾಥನ ಕಂಡರೆ ಬರಹೇಳೆ ಕೋಗಿಲೆ 1


ಮಧುಮಾಸದಲಿ ಮಾಧವನಿರಲುಚದುರೆ ಗೋಪಿಯರಸ ಮೇಳದಲ್ಲಿಮುದದಿ ವನಂತರನಾಡುವ ಭರದಿಂದಪದುಮನಾಭನ ಕಂಡರೆ ನೀ ಬರಹೇಳೆ 2


ಅಟ್ಟಿ ಅರಸುವ ಶ್ರ್ರುತಿಗಳಿಂದ ಸುಖಬಿಟ್ಟೆವೆಂದರವ ಪರಬ್ರಹ್ಮಸೃಷ್ಟಿಯೊಳು ಉಡುಪಿನ ಹಯವದನ ಸ್ವಾಮಿಯದೃಷ್ಟಿಲಿ ಕಂಡರೆ ಬರಹೇಳೆ ಕೋಗಿಲೆ3

***


No comments:

Post a Comment