Wednesday, 4 August 2021

ದಿಗ್ವಿಜಯವಂತೆ ಬಂದಳು ರುಕ್ಮಿಣಿ ದೂತೆ ಶೀಘ್ರದಿಂದ ಕೃಷ್ಣರಾಯ ankita ramesha

ದಿಗ್ವಿಜಯವಂತೆ ಬಂದಳು ರುಕ್ಮಿಣಿ ದೂತೆ ಶೀಘ್ರದಿಂದ ಕೃಷ್ಣರಾಯ ಮಾರ್ಗನೋಡ್ಯಾನೆಂಬೊ ಭಯದಿ ಪ.


ಕೃಷ್ಣರಾಯನ ಬಿಟ್ಟುಎಷ್ಟು ಹೊತ್ತು ಆಯಿತೆಂದುಸಿಟ್ಟು ಬರಧಾಂಗೆ ಸುರರಿಗೆ ಎಷ್ಟು ಸಲುಹಲಿ ಎನುತ 1

ವೀಕ್ಷಿಸಿ ಎನ್ನ ಮಾರಿಯನುಲಕ್ಷ್ಮಿಯರು ಕೋಪಿಸದಿರಲಿಲಕ್ಷ ಕೋಟಿದ್ರವ್ಯ ದಾನಈ ಕ್ಷಣ ಕೊಡುವೆನೆ ಎನುತ2

ಮದನಜನೈಯ್ಯನ ದಯವುಮೊದಲ್ಹಾಂಗೆ ಇದ್ದರೆ ನಾನು ಅದ್ಬುತದ್ರವ್ಯ ದಾನ ಬುಧರಿಗಿತ್ತೇನೆ ಎನುತ3

ಚಿತ್ತಜನೈಯನ ದಯವುಅತ್ಯಂತವಾದರೆ ನಾನು ವಿತ್ತ ಕೋಟಿ ದಾನವನ್ನು ಮತ್ತೆಕೊಡುವೆನೆ ಎನುತ4

ಇಂದಿರೇಶಗೆ ಅಂಜಿಕೊಂಡುಚಂದ್ರ ಸೂರ್ಯರು ತಿರಗೋರಮ್ಮಚಂದಾದ ನಕ್ಷತ್ರ ಬಂದುಅಂಜಿ ಹೋಗಿವೆ ಎನುತ 5

ಹರಿಗೆ ಅಂಜಿಕೊಂಡು ಶರಧಿಮರ್ಯಾದಿಲೆ ಇರುವೋ ನಮ್ಮದೊರೆಗೆ ಅಂಜಿಕೊಂಡು ವಾಯುತಿರುಗಾಡುವನಮ್ಮ ಎನುತ 6

ಅಗ್ನಿಅಂಜಿ ತನ್ನ ದರ್ಪತಗ್ಗಿಸಿ ಕೊಂಡಿಹ ನಮ್ಮಭಾಗ್ಯದರಸು ಅಂಜಿ ಮಳೆಯುಶೀಘ್ರದಿ ಗರೆಯುವನು ಎನುತ 7

ಹಾಸಿಗ್ಯಾಗುವ ಶೇಷ ಅಂಜಿದಾಸಿ ಆಗುವಳಂಜಿ ಲಕುಮಿದೇಶಕಾಲ ಅಂಜಿ ಒಂದುಲೇಸು ಮೀರ್ಯಾವೆ ಎನುತ 8

ವರಗಿರಿ ವಾಸಗೆ ಅಂಜಿಶೇಷ ಜಗವ ಪೊತ್ತಿಹನಮ್ಮಗರಿಯ ಹರವಿ ಗರುಡ ಅಂಜಿಹರಿಯ ಧರಸಿಹನೆ ಎನುತ9

ಸಂಖ್ಯವಿಲ್ಲದ ಗಜಗಳಂಜಿಫಕ್ಕನೆ ನಿಂತಿಹ ವಮ್ಮದಿಕ್ಪಾಲಕರು ಅಂಜಿ ತಮ್ಮದಿಕ್ಕು ಕಾಯುವರು ಎನುತ 10

ನದ ನದಿಗಳಂಜಿಕೊಂಡು ಒದಗಿಮುಂದಕ್ಕೆ ಹರಿವೋವಮ್ಮಸುದತೆ ವೃಕ್ಷ ಅಂಜಿಪುಷ್ಪಫಲವ ಕೊಡುವೊವೆ ಎನುತ 11

ಕಂತು ನೈಯನ ಅರಸುತನಎಂಥದೆಂದು ಬೆರಗುಬಟ್ಟುನಮ್ಮಂಥಾ ಒಣ ಬಳಗಅಂಜಿಲಿವೋದು ಕಾಂತೆ ಅರುವನೆ ಎನುತ 12

ರಮಿ ಅರಸಗಂಜಿಕೊಂಡು ಬ್ರಮ್ಹ ಸೃಷ್ಟಿ ಮಾಡೋನಮ್ಮಸುಮ್ಮನೆ ಸುರರೆಲ್ಲ ಕೂಡಿದಮ್ಮಯ್ಯ ಎನಲೆಂದು ಹರಿಗೆ13

***

No comments:

Post a Comment