..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಧರ್ಮಪುರಿ ಕ್ಷೇತ್ರ ಪರವಾಸುದೇವ ಸ್ತೋತ್ರ
ಶರಣು ಹೊಕ್ಕೆನೋ ನಿನ್ನ |
ಪರವಾಸುದೇವನೇ ಪಾಲಿಸೆನ್ನಲಿ ಕೃಷ್ಣ |
ಕರಿರಾಜವರದನೇ ಶರಣ ವತ್ಸಲ ಘನ್ನ |
ಭಕ್ತಜನ ಪ್ರಸನ್ನ |
ಉರುಗುಣಾರ್ಣವ ವೇದವೇದ್ಯನೆ |
ಶಿರಿ ಕರಾಂಬುರುಹಾಚೀತಾಂಘ್ರಿ |
ಸರೋಜ ವಿಧಿ ಶಿವಾದ್ಯಮರ ವಂದ್ಯನೆ ಸರ್ವಕರ್ತಾ
ಶರಣುಹೊಕ್ಕೆನೋ ನಿನ್ನ|| ಪ
ಮೀನ ಕೂರ್ಮ ವರಾಹ | ಚಿನ್ಮಾತ್ರವಪುಷವೀರಭದ್ರ ನೃಸಿಂಹ ||
ಬಲಿರಾಯಗೊಲಿದು ಕೆಡಹಿದೈತ್ಯ ಸಮೂಹ ||
ದುಷ್ಟನೃಪರ ಸೀಳಿ ಬಿಸುಟು ಬ್ರಹ್ಮ | ಕುಲವರವಾಯು ಮಹಾರ್ಹ
ಹನುಮಪ್ರಿಯರವಿ ಸುತ ವಿಭೀಷಣರಿಗೆ ನೀ ಅಭಯನೀಡಿ ಪಾಂಡು -
ತನಯರು ದ್ರೌಪದೀ ವಿದುರ ಉದ್ಧವ ಇನ್ನು
ಬಹು ಸಜ್ಜನರಿಗೊಲಿದು ||
ಜನಜನೆನಿಸಿದಿ ದೈತ್ಯಮೋಹಕ ಸುರಸುಬೋಧಕ ಬುದ್ಧಶರಣು |
ಕ್ಷೋಣಿಯಲ್ಲಿ ಚೋರರಾಜರ ಸದೆದು -
ಧರ್ಮಸ್ಥಾಪಿಸಿದಿ ಹೇ ಕಲ್ಕಿ ನಮೋ ನಮೋ ಪಾಹಿ ಸಂತತ 1
ಸರ್ವಗತ ಸರ್ವೇಶ | ಸರ್ವೇಶ್ವರನು ನೀನೇ ಕಾಲವಸ್ತುದೇಶ ||
ಸರ್ವತ್ರಒಳಹೊರ ವ್ಯಾಪ್ತನಾಗಿಹ ಶ್ರೀಶ ||
ಶ್ರೀತತ್ವ ನಿನ್ನಲಿ ಓತಪ್ರೋತಮಹೇಶ | ಅಕರನೇನಿರ್ದೋಷ ||
ಸಚ್ಚಿತ್ ಸುಖಮಯ ಆತ್ಮಾಪ್ರೇದಕ್ಕೂ ಅಮಿತ ಸತ್ಕಲ್ಯಾಣಗುಣನಿಧೇ ||
ಸರ್ವಜಗಚ್ಚೇಷ್ಟೆಯನು ಗೈಸುತಿ ಸ್ವಪ್ರಯೋಜನ ರಹಿತಸ್ವಾಮಿಯೇ |
ಅಜಿತರುಚಿರಾಂಗದನೇ ಸ್ವಾಸ್ಯನೇ ಸರ್ವಭೂತಾಂತರಾತ್ಮನೇ ||
ಅಚ್ಯುತನೇ ಸಂಪೂರ್ಣ ಕಾಮನೇ ಅತಿಜ್ಞಾನ ವೈರಾಗ್ಯ ಸಂಪತ್‍ದಾತ
ಕರುಣಿ | ಗುರುವೇಂಕಟ || ಶರಣು || 2
ಧರ್ಮಪುರಿಯಲ್ಲಿರುತ್ತಿ | ಶೇಷಶಯನನೇ
ನಮೋ ಪರವಾಸುದೇವ ಪ್ರಮೋದಿ ||
ಮದ್ದೋಷ ಕಳೆದು ಸದ್ಧರ್ಮದಲಿ ಇಡು ದಯದಿ |
ವೃಷಾತಪಿಯೇ ಕಪಿತನಾಮಕನಮೋ ಆನಂದಿ ನಂದಾ ನಂದನ ನಂಹಿ
ಜಗದಾಧಾರ ಶ್ರೀಕೂರ್ಮನಭ ಅರ್ಕಾದಿ ಧಾರಕ ಶಿಂಶುಮಾರನೇ
ಸಾಗರವು ಭೂಮಿಯನು ನುಂಗದೇ ಹಿಂದೆ ಸೆಳೆದು ಧರೆಯರಕ್ಷಿಪ ||
ಸಾಗರದಲ್ಲಿರುವ ವಡವಾವತ್ತಅಗ್ನಿನೀನು ಸವತ್ರ ಹರವು |
ಮುಖ್ಯ ರಕ್ಷಕ ವೇಧತಾತ ಪ್ರಸನ್ನ ಶ್ರೀನಿವಾಸ ಶ್ರೀಪತಿಗರುಡಕೇತನ
ಶರಣು ಹೊಕ್ಕೆನೋನಿನ್ನ 3
***
No comments:
Post a Comment