ಬಾರೊ ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣ ಮನದಸದನಕೆ ಪ
ತೊರೊ ಕೃಷ್ಣ ತೊರೊಕೃಷ್ಣ ತೊರೊಕೃಷ್ಣ ಚರಣ ಬಡವಗೆ ಅ ಪ
ಶಿರವ ನಿಡುವೆ ಚರಣದಲ್ಲಿದುರಿತಹರಣ ಕರುಣಭರಿತನೆ
ಸಿರಿಯ ರಮಣ ನೀರಜಸುಗುಣಸುರರ
ಪೊರೆವ ಧರಣಿ ಧರಿಪನೆ 1
ಸಿರಿಯಮದದಿ ಮರೆತೆ ನಿನ್ನ ಕರೆದು ಪೊರೆಯೊ ಶರಣರಕ್ಷಕಾ
ಅರಿಯೆ ಮಹಿಮೆ ತರಳನಾನು ತೊರೆಯೆ
ಅಳಿವೆ ಕ್ಷೇಮ ಧಾಮನೆ 2
ವೇದವಿನುತ ಮೋದಭರಿತ ಸಾಧುಚರಿತ ಆದಿ ಕಾರಣಾ
ಮಂದಮತಿಯು ಕುಂದನಳಿದು ತಂದೆ
ಕಾಯೊ ಬಂಧನೀಡ್ವನೇ3
ನೀರಜಾಕ್ಷ ವಾರಿನಿಲಯ ಸೂರಿಗಮ್ಯ ಪೂರ್ಣಧಾಮನೆ
ಸರ್ವನಾಮ ಸರ್ವಕರ್ಮ ಸರ್ವಶ್ರೇಷ್ಟಸರ್ವ ಪ್ರೇರಕಾ 4
ಇಂದಿರೇಶ ನಂದಪೂರ್ಣ ಸುಂದರಾಂಗ ಬಂಧಮೋಚಕ
ಕುಂದುರಹಿತ ವಂದನಾರ್ಹ ಬಿಂದು ಬಿಂಬ ಕಂಧರಾಶ್ರಯ 5
ಭುವನ ವಿತತ ಭುವನಮೂಲ ಭುವನ ಪಾಲ ಭುವನನಾಶಕ
ಭುವನ ಭಿನ್ನ ಸ್ತವನ ಪ್ರೀಯ ಕವನವರಿಯೊ ಕವಿಬಿರೀಡಿತ
ಮುಕುತರೊಡೆಯ ಮುಕುತಿದಾತ ಭಕುತ ಪ್ರೀಯ
ಭಕುತಿದಾಯಕ
ಶಕುತ “ಶ್ರೀಕೃಷ್ಣವಿಠಲ” ಯುಕುತಿ ಗೊಲಿಯ ಲಕುಮಿನಾಯಕ
****
No comments:
Post a Comment