..
ಕಣ್ಣಿನಾಕರಿರಟ್ಟ ಸುಟ್ಟುಬೂದಿಯ ಮಾಡಿ
ನಿನ್ನ ಈಕ್ಷಿಪ ಶುಭ್ರ ದೃಷ್ಟಿಯ ನೀಡೊ ಪ
ಪುಣ್ಯಪುರುಷನೆ ಬಿಂಬಪೂರ್ಣ ಮಂಗಳ ಶೌರಿ
ಧನ್ಯ ಮಾಡೆನ್ನ ಮುನ್ನ ನಿಲ್ಲಲಿ ಸÉಳಿಯೊ ಅ.ಪ
ವಿಷಯಸುಖ ದುರ್ಗುಣದ ಪಂಕದಲಿ ಮನನೆನೆದು
ವಿಷಕ್ರಿಮಿಯಂತಿಹದೊ ಇದಕೆ ಮದ್ದು
ನಿನ್ನ ಕೃಪೆ ಹೊರತು ಬ್ಯಾರಿಲ್ಲ | ಭಿಷಜೋತ್ತಮ
ಜೀವೇಶ ಸನ್ನುತ ಹರಿಯೆ ವಿರಜ ಮಾಡೊ ಮನವ 1
ಭಾವಸೂತ್ರಗಳಿಂದ ವಿಧಿಭವರೆ ಮೊದಲಾದ
ಜೀವರನು ಆಡಿಸುವ ಶ್ರೀಶ ಎನ್ನ
ಪಾವನ್ನ ಗುಣನಿಧಿಯೆ ಶ್ರೀ ವೇಣುಗೋಪಾಲ
ದೇವ ಅಜಮಿಳಪಾಲ ಪೂತ ಭಾವದಿ ನಿಲಿಸೊ 2
ಕಾತುರವಪಡುತಿಹೆನೊ ಅಸುರಕರ್ಮದಿ ಸಿಕ್ಕಿ
ಪಾತಕಿಗಳ ಸಹವಾಸ ಬಿಡಿಸಿ ಕಾಯೊ
ಆತುಮಕೆ ಅತಿಮಿತ್ರ ಜಯೇಶವಿಠಲ
ನಿನ್ನೊಲುಮೆಪಾತ್ರರಲಿ ಇಟ್ಟೆನ್ನ ಕಾಪಾಡು 3
****
No comments:
Post a Comment