ಯಾಕೆನ್ನನಿಲ್ಲಿಗೆ ಎಳೆ ತಂದ್ಯೊ ಹರಿ ತಪ್ಪೇನನೆಸಿಗಿದೆನೊ ಪ.
ಜೋಕೆಯಿಂದಲಿ ಎನ್ನ ಕಾಯಬೇಕಲ್ಲದೆ
ನೂಕಿದರೆನ್ನನು ಸಾಕುವರ್ಯಾರೊ ದೊರಿ ಅ.ಪ.
ಯಾರಿಗೇನೆಸಗಿದೆ ಆರ ನಾ ದೂಷಿಸಿದೆ
ಆರ ನಾ ನಿಂದಿಸಿದೆನೊ
ಆರ ನಾ ವಂಚಿಸಿದೆ ಆರನು ನಾನಹಂ
ಕಾರದಿ ನೋಡಿದೆನೊ ಈ ರೀತಿ ನೊಂದೆನು 1
ಪದದಿಂದ ಚ್ಯುತಿಪೊಂದಿ ವಿಧಿ ಬರಹದೊಳಿನ್ನು
ವಿಧಿಪಿತ ನಿನ್ನ ಕಾಣಲಿಲ್ಲ
ಮದಗರ್ವ ಬಿಡಿಸೆನ್ನ ಸದಮಲ ಹೃದಯದಿ
ಪದ ಪದುಮವ ತೋರಿ ಉದ್ಧರಿಸೆನ್ನನು 2
ಸೃಷ್ಟಿಕರ್ತನೆ ಕೇಳೊ ಕಷ್ಟವಪಡಲಾರೆ
ದೃಷ್ಟಿಲಿ ನೋಡಿ ಕಾಯೊ
ಎಷ್ಟು ಬೇಡಲೊ ನಾನು ಬೆಟ್ಟದೊಡೆಯ ಹರಿ
ವೃಷ್ಣೀಶ ಗೋಪಾಲಕೃಷ್ಣವಿಠ್ಠಲ ದೊರಿ3
****
No comments:
Post a Comment