Monday, 2 August 2021

ಯಂತ್ರೋದ್ಧಾರಕನೆ ಪಾಲಿಸೊ ಯಂತ್ರೋದ್ಧಾರಕನೆ ankita gopalakrishna vittala

ಯಂತ್ರೋದ್ಧಾರಕನೆ | ಪಾಲಿಸೊ

ಯಂತ್ರೋದ್ಧಾರಕನೆ ಪ.


ಸಂತತ ತವ ಪದಕ್ರಾಂತಳಾಗಿರುತಿರೆ

ಇಂತು ನಿರ್ದಯವೇಕೊ ಸಂತಸದಲಿ ಪೊರೆ ಅ.ಪ.


ಯತಿಗಳಿಂದ ಸಂಸ್ಥಿತನೆನಿಸುತ ಅ-

ಪ್ರತಿಮ ಮಹಿಮ ಈ ಕ್ಷಿತಿಯೊಳು ನೆಲಸಿಹ 1

ತುಂಗ್ರಭದ್ರ ತೀರ ಮಂಗಳ ಮಹಿಮನೆ

ಕಂಗೊಳಿಸೆನ್ನಂತರಂಗದಲಿ ನೆಲಸುತ 2

ಮಂತ್ರಿವರ್ಯ ಮಾಹಂತ ಹರಿಪ್ರಿಯ

ಎಂತು ವ್ಯಾಸರಿಲ್ಲಿ ಯಂತ್ರದಿ ಬಿಗಿದರೊ 3

ಹನುಮ ಭೀಮ ಶ್ರೀ ಮುನಿ ಮಧ್ವಾರ್ಯನೆ

ಸನುಮತದಲಿ ಎನ್ನ ಮನದಿಚ್ಛೆ ಸಲಿಸೊ 4

ಬೆಟ್ಟದೊಡೆಯ ಬಹು ನಿಷ್ಠೆಯೊಳ್ ಸ್ತುತಿಸುವೆ

ಇಷ್ಟ್ಯಾಕೆ ತಡೆ ಹಂಪೆ ಪಟ್ಟಣವಾಸಿಯೆ 5

ಕಾಮಿತ ಫಲದನೆ ಕಾಮಿನಿಗುಂಗುರ

ನೇಮದಿಂದಿತ್ತೆಯೊ ರಾಮನ ದೂತನೆ 6

ಎಷ್ಟು ಮಾನವೊ ಬೆಟ್ಟೆಲಿ ಜಪಮಣಿ

ದೃಷ್ಟಿಸೊ ಗೋಪಾಲಕೃಷ್ಣವಿಠ್ಠಲ ದಾಸ 7

***


No comments:

Post a Comment