ಸತ್ಯ ಸಂಧ ಗುರುವೆ ಪಾಲಿಪುದೆಮ್ಮ ಚಿತ್ತ ಶುಧ್ಧಿಯ ಮಾಡಿ ಮತ್ತೆ ಮತ್ತೆ ನಿಮ್ಮ ಸೇವಿಪ ಭಾಗ್ಯವ ಇತ್ತು ನೀ ದಯಮಾಡೊ ಸತ್ಯಬೋಧರ ಪ್ರಿಯ||ಪ||
ಪೂರ್ವಾಶ್ರಮದ ನಾಮವು ಹಾವೇರಿಯ ರಾಮಾಚಾರ್ಯರು ಎನ್ನಲು ಸತ್ಯ ಬೋಧರಿಗೆ ಪೂರ್ವಾಶ್ರಮದಿ ಅಳಿಯನಾಗಿರುತಿರಲು ತಾಯ ತಾನು ಸಂತಾನಕೆನುತ ಮಂತ್ರಾಲಯಕೆ ಹೋಗಿ ಸೇವಿಪೆ ತಾವೆ ಪುಟ್ಟುವುದಾಗಿ ತಿಳಿಸಿದ ಸ್ವಪ್ನದಲಿ ಶ್ರೀ ರಾಘವೇಂದ್ರರು||೧||
ಸವಣೂರು ಗ್ರಾಮದಿಂದ ಹೊರಟರು ತಾವು ಸಂಚಾರಕ್ಕೆ ಎನ್ನುತಾ ಮಾರ್ಗ ಮಧ್ಯದಿ ಪಂಡರಪುರ ಸೇರಿ ,ಬ್ರಾಹ್ಮಣ ನೊಬ್ಬನು ಮುದ್ರ ಧಾರಣೆ ಬೇಡೆ ಮರುದಿನವು ದರುಶನವ ಮಾಡಲು ಪಾಂಡುರಂಗನ ದೇಹದಲ್ಲಿ ತಪ್ತ ಮುದ್ರೆಗಳನ್ನ ಕಂಡು ಆಶ್ಚರ್ಯವ ಪೊಂದಿದರು ಅಂದು||೨||
ಸಂಚಾರ ಮಾರ್ಗದಲ್ಲಿ ನಿಂತರು ತಾವು ಅಡವಿಯ ಮಧ್ಯದಲಿ ಮೂಲರಾಮನ ಪೂಜೆಗನಿವಾರ್ಯ ವಾದಂಥ ಪುಷ್ಪವು ದೊರಕದೆ ಖಿನ್ನರಾಗಿರಲು ಬಡ ಬಡನೆ ಬ್ರಾಹ್ಮಣ ನು ಬಂದು ಸಹಸ್ರ ದಳಗಳ ಕಮಲ ತಂದು ಕಾಂತಿಯುತ ಪುಷ್ಪಗಳ ಕಂಡರೆ ಕಣ್ಮರೆಯಾದ ಬ್ರಾಹ್ಮಣ ನು ಅಂದು||೩||
ಭಕ್ತಿಯಿಂದಾ ಹೊರಟು ಮುಂದೆ ಮತ್ತೆ ಗಯಾಕ್ಷೇತ್ರವನೆ ಸೇರಲು ಗಯಾವಾಸಿಗಳು ತಾವು ವರಹರ ಕೊಡದಿರೆ ವಿಷ್ಣುಪಾದದರುಶನ ಆಗದೆಂದು ಬಿಂಕದಲಿ ಬೀಗವನು ಹಾಕಲುಜಂಕದಲೆ ಸ್ವಾಮಿಯನು ಬೇಡಲು ಕಳಚಿ ಬಿದ್ದವು ಬೀಗ ಮುದ್ರೆಯು ಬೆದರುತಲಿ ಕರೆದೊಯ್ದರಂದು||೪||
ಸತ್ಯವರ ತೀರ್ಥರಿಗೆ ಆಶ್ರಮಕೊಟ್ಟು ಅನುಗ್ರಹ ಮಾಡುತ್ತಲಿ ಆನಂದ ಸಂವತ್ಸರ ಜ್ಯೇಷ್ಟ ಬಹುಳ ಬಿದಿಗಿ ದಿನ ಪ್ರಯಾಣ ಮಾಡಿ ವಿಶೇಷವಾಗನುಗ್ರಹೀಸಿ ಮಧ್ವೇಶಕೃಷ್ಣ ನ ಪಾದ ಸೇರಿ ಮಹಿಷಿ ಕ್ಷೇತ್ರದಿ ಮೆರೆದ ಗುರುವೆ ಪೋಷಿಸೆಮ್ಮನು ಅನುದಿನದಿ ನೀ||೫||
*****
No comments:
Post a Comment