ಶ್ರೀ ವಿಜಯದಾಸಾರ್ಯ ವಿರಚಿತ ಸ್ವತಂತ್ರ ವಿಭಾಗದ ತಾರತಮ್ಯ ಸುಳಾದಿ
ರಾಗ : ಆರಭಿ
ಧೃವತಾಳ
ಆ ಶೂನ್ಯ ನಾಮಕ ಪೂರ್ಣ ಬ್ರಹ್ಮ
ದೋಷ ರಹಿತ ಪೂರ್ಣೈಶ್ವರ್ಯ
ಈಶ ಸಮಗ್ರ ಪೂರ್ಣಾನಂದ
ಭೂಷ ಸ್ವರೂಪ ಭೂತ ಅಪ್ರಾಕೃತ
ಶ್ರೀ ಸತಿನಾಥ ತ್ರಿಗುಣಾ ತೀತ
ದೇಶ ಕಾಲಾ ಸರ್ವಾ ಅವಿನಾ
ಆ ಶೂನ್ಯ ನಾಮಕ ಪೂರ್ಣ ಬ್ರಹ್ಮಾ
ರಾಶಿ ಜೀವಿಗಳನ್ನು ತನ್ನೊಳಗೆ
ಲೇಶಾಯಾಸವಿಲ್ಲದೆ ಪೂರ್ಣ ಶಕ್ತಿ
ಏಸೇಸು ಕಲ್ಪಕೇ ಲೀಲಾ ಮಾತ್ರಾ
ವಾಸ ವಾಗಿಪ್ಪ ನಿರ್ಲಿಪ್ತಾ ಸಂಗ
ವಾಸುದೇವಾದಿ ರೂಪ ಕೇಶವ ಹೃಷೀಕೇಶ
ಕೇಶಾ ಕೇಶಿ ಪಾದಾಂಗುಟ
ಮೀಸಲ ಜ್ಞಾನ ಪೂರ್ಣ ಸಂಪೂರ್ಣ
ಹ್ರಾಸ ವೃದ್ದಿ ವರ್ಜಿತ ವರಗಾತ್ರಾ
ಶಾಶ್ವಿತ ಪರಬೊಮ್ಮ ಪತಿತ ಪರಾ
ಸುಷುಪ್ತಿಯಲ್ಲಿಯೇಕ ಮೇವ
ಕ್ಲೇಶನಾಶನ ಕಾರುಣ್ಯ ಮೂರ್ತಿ
ವಿಶಾಲ ಗುಣಾನಂತ ಜಲಧಿ
ನಾಶರಹಿತ ಯುಗಪದಿ ರೂಪಾ
ವೈಶಮ್ಯ ನೈರ್ಘಣ್ಯ ಜ್ಞಾನಾತ್ಮಕಾ
ಈಸು ಮಹಿಮೆಯುಳ್ಳ ಅಣುಮಹತ್ತು
ಆಶೇಷು ಅಂಶಿ ಅಂಶ ಸರ್ವಪೂರ್ಣ
ಯಶೋದಾ ನಂದನ ವಿಜಯವಿಠಲ ಪ್ರ-
ಕಾಶಾ ಅನ್ಯಪ್ರಕಾಶಾ ಗತ ಗತಿಪ್ರದಾತಾ ॥೧॥
ಮಟ್ಟತಾಳ
ಸಕಲ ಜೀವರನು ಸೃಜಿಸು ಯೆಂದು ಶ್ರೀ-
ಲಕುಮಿ ರೂಪಾ ಅಂಭ್ರಣಿ ದೇವಿ
ಅಖಿಳ ಬಗೆಯಿಂದ ನೋಡಿ ತುತಿಸಲಂದು ಕರುಣದಲಿ
ಮುಕುತಾ ಮುಕ್ತರು ಮುಕ್ತರ ಗಣ ದ್ವಿವಿಧಾ
ಭಕುತಾ ದ್ವೇಷಾ ಜನರ ಸಾಧನಾ
ಅಕಳಂಕ ಸ್ವಾಮಿ ಅನಾದಿ ಪುರುಷ ಪುರುಷ ಬೀಜ ಶ್ರುತಿಗೇಯಾ
ಸುಕುಮಾರ ವಿಜಯವಿಠಲ
ಸುಕೃತ ದುಷ್ಕೃತ ನಿಯಾಮಕಾ
ತಕ್ಕದು ಮಾಳ್ಪ ಯೋಗ್ಯತಾದಂತೆ ॥೨॥
ತ್ರಿವಿಡಿತಾಳ
ಅನಂತಾ ನಂತ ಗುಣ ಸ್ವಾತಂತ್ರಾತ್ಮಕ
ಏನೆಂಬೆ ಸೃಷ್ಟಿಯ ಪ್ರಾರಂಭದಿ
ಜ್ಞಾನಾಮಯವಾದ ಅಭಿನ್ನ ಭಾಗದಿಂದ
ಅನಂತಾಂಶಾತ್ಮಕಗುಣವೆ ಹತ್ತು
ಆನಂದದಿಂದ ತೆಗೆದು ಚತುರ್ಭಾಗವನ್ನೇ ಮಾಡಿ
ಆನಾದಿ ದೇವಾ ಇದರೊಳೇಕಭಾಗ
ತಾ ನೋಡಿ ತೆಗೆದುಕೊಂಡು ಈವೊಂದು ಭಾಗದೊಳು
ಎಣಿಕೆಗೆ ಹತ್ತು ಭಾಗ ಮಾಡಿ
ಪ್ರಾಣಾನಾಯಕನಿಗೆ ನಾಲ್ಕು ಭಾಗ ಚತು-
ರಾನನಗೆ ಐದು ಭಾಗವಿತ್ತು
ಮೇಣು ವುಳಿದ ಭಾಗವೊಂದು
ತನ್ನ ಬಳಿಯಲಿ ಮಾಣದೆ ಇಟ್ಟುಕೊಂಡು
ಪುನಾರಾವರ್ತಿ ವೈನತೇಯ ಗಮನ ವಿಜಯವಿಠಲ ರೇಯಾ
ನಾನಾ ವಿಚಿತ್ರ ಮಹಿಮಾ ಅಚಿಂತ್ಯಾದ್ಭುತ ಶಕ್ತಾ ॥೩॥
ಅಟ್ಟತಾಳ
ಮತ್ತೊಂದು ಸಾಂಶ ಉಳಿದ ಮೂರರೊಳು
ಹತ್ತುಭಾಗ ಮಾಡಿ ಗರುಡಾಹಿರುದ್ರರಿಗೆ
ಇತ್ತನು ವಿಭಾಗ ದ್ವಯ ಮುಂದೆ ಸಾ-
ವಿತ್ರಿ ಭಾರತಿಗೆ ಸಾರ್ಧದ್ವಯ ಅಲ್ಲಿಂದ
ವೃತ್ರಾರಿ ಕಾಮದೇವತಾ ಸಮುದಾಯಕೆ
ಇತ್ತನು ತ್ರಯಭಾಗ ಮೇಲರ್ಧವುಳಿದ
ಇತ್ತ ಲಾಲಿಸಿ ಕೇಳು ಒಂದು ತದರ್ಧವು
ದೈತ್ಯಾವಳಿಗೆಯೆನ್ನಿ ಮಿಕ್ಕಾ ಭಾಗಾವೊಂದು
ಮರ್ತ್ಯ ಗಂಧರ್ವ ಕ್ಷಿತಿಪ ಋಷಿ ಮನು-
ಜೋತ್ತಮ ಸಮಸ್ತ ಪ್ರಾಣಿಗಿತ್ತ
ಉತ್ತಮ ಶ್ಲೋಕ ವಿಜಯವಿಠಲ ರೇಯಾ
ಹತ್ತೆರಡು ಭಾಗ ಈಪರಿ ಹಂಚಿದಾ ॥೪॥
ಆದಿತಾಳ
ಚತುರ ಭಾಗದೊಳೆರಡು
ಮಿತಿಯಾಯಿತು ಈಬಗೆ
ಅತಿಶಯ ಉಳಿದ ಭಾಗ ಮಿ-
ಳಿತದಿಂದ ತ್ರಯ ಭಾಗ ಮಾಡಿ
ಜಿತ ಶರೀರಳಾದ ತನ್ನ ಸತಿ ಲಕುಮಿಗೆ
ಒಂದು ಭಾಗಾ ಹಿತದಿಂದ ಪಾಲಿಸಿದಾ
ಪ್ರತಿ ಪ್ರತಿ ಸೃಷ್ಟಿಗೆ
ಅಚ್ಚುತದೇವ ಸ್ವರೂಪಾಂಶ ಪ್ರಾ-
ಕ್ರತಿ ಪ್ರಕೃತಿ ಬದ್ದರಿಗೆ
ಕೊಡುತಲಿಪ್ಪ ಸ್ವತಂತ್ರ
ಚತುರನಾಗಿ ಸರ್ವ ಜೀವ ಗತನಾಗಿ ತತ್ತತ್ಕಾಲ
ಗತಿಯಂತೆ ಚೇಷ್ಟೆ ಮಾಡಿಸಿ
ಮತಿಕೊಡುವ ಪಾಪಾ ಪುಣ್ಯಕೆ
ತುತಿಪೆಕೇಳು ಉಳಿದ ಭಾಗದಿ
ಕ್ಷಿತಿಯೊಳಗೆ ಅವತಾರಾವೇಶಾ
ಚತುರಾಶ್ಯಮರುತಾ ಸರ-
ಸ್ವತಿ ಶ್ರದ್ಧಾ ಗರುಡಾದಿ ಕಾಮದೇವತಾ ಸಮುದಾಯ
ದಿತಿಜ ಬಳಗ ಮನುಜೋತ್ತಮ ಸರ್ವಾ-
ಇತರ ಜೀವಕ್ಕೆ ತತು ತತು ಉಳಿದಾ ಭಾಗದಿಂದಾ
ರತಿ ಪತಿ ಪಿತಾ ವ್ಯಾಪಾರ ಮಾಡುವ
ಚತುರ ಮೂರುತಿ ವಿಜಯವಿಠಲಾ
ಸತತ ತೂರ್ಯಾ ಜೀವನಾಮಕ ॥೫॥
ಜತೆ
ದತ್ತ ಸ್ವಾತಂತ್ರವೆಂಬೋದಿದೆ ಜೀವರಿಗೆ
ಸತ್ಯ ಸಂಕಲ್ಪ ವಿಜಯವಿಠಲ ನಿಂದಾ ॥೬॥
********
ಸ್ವತಂತ್ರ ವಿಭಾಗದ ತಾರತಮ್ಯ ಸುಳಾದಿಯ ಚಿಂತನೆ
(ಸಂಗ್ರಹ)
ಅನಂತಾತ್ಮಕ ಗುಣ ಸ್ವತಂತ್ರಾತ್ಮಕ ಸೃಷ್ಟಿಯ ಪ್ರಾರಂಭದಿ, ಜ್ಞಾನಮಯವಾದ ಅಭಿನ್ನ ಭಾಗದಿಂದ ಅನಂತಾಂಶಾತ್ಮಕ ಗುಣ ಹತ್ತು ತೆಗೆದು ನಾಲ್ಕು ಭಾಗ ಮಾಡಿದ.
ಈ ನಾಲ್ಕರಲ್ಲಿ ಒಂದು ಭಾಗದೊಳಗೆ 10 ಭಾಗ
a) ಈ ಹತ್ತು ಭಾಗದಲ್ಲಿ
4 ಭಾಗ ಪ್ರಾಣದೇವರಿಗೆ
5 ಭಾಗ ಬ್ರಹ್ಮದೇವರಿಗೆ
1 ಭಾಗ ತನ್ನ ಹತ್ತಿರ
ಒಟ್ಟು 10
b) 2ನೇ ಭಾಗದಲ್ಲಿ ಹತ್ತುಭಾಗ
2 ll ಭಾಗ ಸರಸ್ವತಿ ಭಾರತಿಯರಿಗೆ
3 ಭಾಗ ಗರುಡ ಶೇಷ ರುದ್ರರಿಗೆ
3 ಭಾಗ ಇಂದ್ರ ಕಾಮಾದಿ ದೇವತೆಗಳಿಗೆ
1 ಭಾಗ ಮರ್ತ್ಯ ಗಂಧರ್ವಾರಂಭಿಸಿ ಮನುಷ್ಯೋತ್ತಮನಿಗೆ
1 ll ಭಾಗ ಕಲ್ಯಾದಿ ದೈತ್ಯರಿಗೆ
ಒಟ್ಟು 10
ಸ್ವರೂಪಾಂಶವಾದ ಉಳಿದ 2 ಎರಡು ಭಾಗದಲ್ಲಿ ಮೂರು ಭಾಗ ಮಾಡಿ ಇದರಲ್ಲಿ 1 ಭಾಗ ಶ್ರೀಲಕ್ಷ್ಮೀದೇವಿಗೆ
ಉಳಿದ 2 ಭಾಗದಿ ಕ್ಷಿತಿಯೊಳಗೆ ಅವತಾರ ಆವೇಶ ಚತುರಾಶ್ಯ ಮರುತ ಇತ್ಯಾದಿಗಳಿಗೆ
🙏ಶ್ರೀಕೃಷ್ಣಾರ್ಪಣಮಸ್ತು🙏
******
No comments:
Post a Comment