Tuesday 10 November 2020

ಎಚ್ಚತ್ತು ಇರು ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ankita vijaya vittala

ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | 

ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ


ಆಡದಿರಪವಾದಗಳನು ಕೊಂ |

ಡಾಡದಿರಿನ್ನು ಚಿಲ್ಲರೆ ದೈವತಗಳನು ||

ಬೇಡದಿರು ಭಯ ಸೌಖ್ಯವನು ನೀ |

ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು||1||


ನರಜನ್ಮ ಬರುವದೆ ಕಷ್ಟ ಇದ- |

ನರಿದು ನೋಡು ವಿಪ್ರಾದಿ ಶ್ರೇಷ್ಠ ||

ಮರಳಿಬಾಹುದು ಉತೃಷ್ಟ |

ಮರುತ ಮತವ ಪೊಂದುವದು ದುರ್ಘಟ ||

ಕೇಳೆಲವೊ ಮರ್ಕಟ ||2||


ಹಾಳು ಹರಟೆಗೆ ಹೋಗಬೇಡ ನೀ ಕಂಡ |

ಕೂಳನು ತಿಂದು ಒಡಲ್ಹೊರಿಯಬೇಡ ||

ಕಾಲ ವ್ಯರ್ಥ ಕಳಿಯ ಬೇಡ ನಮ್ಮ |

ಪ್ರಾರಬ್ಧ ಭೋಗಕ್ಕೆ ಮನ ಸೋಲಬೇಡ ||

ಶ್ರೀ ಹರಿಯ ದಯಮಾಡ ||3||


ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ |

ಮಣ್ಣುಕೂಡಿದವರ ನೀ ನೋಡಾ ||

ಅನ್ಯ ಶಾಸ್ತ್ರವನೋದಬೇಡಾ ನಮ್ಮ |

ಪೂರ್ಣಪ್ರಜ್ಞರ ಬೋಧ ತಿಳಿದಕೊ ಗಾಢಾ ||

ಮೈ ಮರೆತಿರಬೇಡಾ ||4||


ಗೋ ವಿಪ್ರರ ಸೇವೆ ಮಾಡು ಸೋಹಂ |

ಭಾವಗಳನು ಬಿಟ್ಟು ದಾಸತ್ವ ಕೊಡು ||

ಕೇವಲ ವೈರಾಗ್ಯ ಮಾಡು ವಿಜಯ ||

ಝಾವಗಳಲ್ಲಿ ಶ್ರೀ ಹರಿಯ ಕೂಡ್ಯಾಡೊ ||

ಲಜ್ಜೆಯ ಈಡ್ಯಾಡೊ||5||


ನಾನು ಎಂಬುದು ಬಿಡು ಕಂಡ್ಯ ಎನ್ನ |

ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ ||

e್ಞÁನಿಗಳ ಒಳಗಾಡು ಕಂಡ್ಯ ವಿಷಯ |

ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ ||

ಬೀಳುವಿ ಯಮಗೊಂಡಾ ||6||


ಕಷ್ಟ ಪಡದೆ ಸುಖಬರದು ಕಂ- |

ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು ||

ದುಷ್ಟ ವಿಷಯ ಆಶೆ ಜರಿದು ವಿಜಯ- |

ವಿಠ್ಠಲರಾಯನ ಹೊರತು ಮುಕ್ತಿ ಬಾರದು ||

ಕೂಗೆಲವೊ ಬಾಯಿ ತೆರೆದು ||7||

***


pallavi


yaccattu iru kaNdya manavE ajyutananghrigaLanu nene kaNDya manavE


caraNam 1


ADadira pavADagaLanu koNDADadirinnu cillafe daivagaLanu bEDadiru

bhaya saukhyavanu nI mADidirinnu durjana sEvayannu sajjana dvEshavanu


caraNam 2


narajanma baruvade kaSTa idanaridu nODu viprAdi shrESTa maraLi

bAhudu utkraSTa maruta matava ponduvadu durghaTa kELaelavO markaTa


caraNam 3


hALu horatage hOga bEDa nI kaNDya pULanu tindu vaDaloriya bEDa kAla

vyartha kaLeya bEDa namma prAabdha bhOgakke mana sOlabEDa shrI hari dayamADa


caraNam 4


anya striyara nODa bEDa hinde maNNu kUDidavara nI nODA anya shAstravanOda

bEDA namma pUrNa prajnara bOdha tiLidukO ghADA maimaratira bEDA


caraNam 5


gO viprare sEveya mADu sOham bhAvagaLanu biTTu dAsatvakUDu kEvala

vairAgyamADu eNTu jhAvagaLalli shrI hariya hUDyADO lajjeyanu iDyADO


caraNam 6


nAnu embudu bidu kaNDya ninna mAnApamAnake hariyennu kaNDya jnAnigaLa

oLagADu kaNDya iSaya jEnendu meddare adu viSa kaNDyA bILuvi yamagoNDA


caraNam 7


kaSTapaDade sukha bradu kangeTTa mElennu kaSTa tiiLiyOdu duSTa viSaya

buddhi jaridu vijayaviThalanendu kUgade mukti bAradu kUgelavO bAya teredu

***





No comments:

Post a Comment