Friday, 6 December 2019

ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲು purandara vittala

ರಾಗ ಶಂಕರಾಭರಣ ಅಟತಾಳ 

ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲು
ಕೊಳಲನೂದಿ ಭ್ರಾಜಿಸುವ
ಚೆಲುವ ಕೃಷ್ಣರಾಯನ ನೋಡಿ ||ಪ||

ಹೊಳೆವ ಹೊಂಬಣ್ಣ ದಟ್ಟಿ ಚಲ್ಲಣ ಅಳವಡಿಸಿದ ನೀಲಿಯ ಬಿಗಿದು
ಹಲವು ರನ್ನದ ಉಂಗುರನಿಟ್ಟು ಚೆಲುವ ಬೆರಳ ನಟಿಸುತ
ಲಲಿತ ವಾಮತೋಳಿನ ಮೇಲೆ ಹೊಳೆವ ವಾರೆ ದೃಷ್ಟಿಯೆಸೆಯೆ
ಬಲದ ಪಾದ ಎಡಕೆ ಚಾಚಿರೆ ಜಲಜದಂದದಿ ಹೊಳೆಯಲು ನೋಡಿ ||

ಗುಲಗುಂಜಿಸರ ಕಲ್ಲಿಯ ಚಿಕ್ಕ ಗಜಗಿನ ಚೀಲ ಶಳೆಗೋಲಾಮಚಿ
ಘಲ್ಲುಕೆಂಬಾ ಪೆಂಡೆ ಘಮ್ಮಘಮ್ಮಿಸುವ ಮಲಯಜಾಮಿತ ಲೇಪಿತ
ಮಲ್ಲಿಗೆ ಮಾಲತಿ ಬಳ್ಳಿಯ ದಳಿಲು ಹಲವು ಸರಗಳೊಲಿವುತಿರಲು
ತಳಿತ ಕಲ್ಪವೃಕ್ಷದ ನೆಳಲೊಳು ಗೆಳೆಯ ಗೋಪರಿಂದಾಡಲು ||

ಮಾರವ ದೇಶಿ ಗುರ್ಜರಿ ಭೈರವಿ ಗೌಳಿ ನಾಟಿ ಸಾವೇರಿ ಆಹೇರಿ
ಪೂರ್ವಿ ಕಾಂಭೋಜ ಪಾಡಿ ದೇಶಾಕ್ಷಿ ಶಂಕರಾಭರಣ ಮಾಳವಿ
ವರಾಳಿ ಕಲ್ಯಾಣಿ ತೋಡಿ ಮುಖಾರಿ ಯರಳಿ ವಸಂತ ಬೌಳಿ ಧನಶ್ರೀ
ಸೌರಾಷ್ಟ್ರ ಗುಂಡಕ್ರಿಯ ರಾಮಕ್ರಿಯ ಮೇಘ ಕುರಂಜಿಯು ಪಾಡಲು ನೋಡಿ ||

ಹರುಷದಿಂದ ವನದಿ ಸುವಾರವ ಪುರದ ಸತಿಯರೆಲ್ಲರು ಕೇಳಿ
ಮರೆತು ಮನೆಯ, ಮಕ್ಕಳ ಜರೆದು , ನೆರೆದು ಹರಿಯ ಒಲಿಸುತ
ಹರಿಣ ಕರಿಯು ಕೇಸರಿವೃಂದ ತುರಗ ಮಹಿಷ ಉರಗ ಮೂಷಕ
ಹರಿಯ ಕೊಳಲ ರವಕೆ ಮೋಹಿಸಿ ಮರೆತಿರೆ ಜಾತಿವೈರವ ||

ಕರಗಿ ಕಲ್ಲು ನೀರಾಗಿ ಹರಿಯೆ ತೆರೆಗಳಿಂದುಕ್ಕಿ ಹರಿಯೆ ಯಮುನೆ
ತುರು ಖಗ ಬರ್ಹಿ ಸ್ತ್ರೀಯರು ಚಿತ್ರದಿ ಬರೆದ ಪ್ರತಿಮೆಯಂತಿರೆ
ಸುರರು ನಭದಿ ನೋಡಿ ಕುಸುಮಗರೆಯೆ ಭೇರಿ ದುಂದುಭಿ ಮೊರೆಯೆ
ಪುರಂದರವಿಠಲಗೋಕುಲದಿ ವೇಣುನಾದ ಮಾಡಲು ನೋಡಿ ||
***

pallavi

naLinajANDa taleya tUgi mOhisutiralu koLalanUdi bhrAjisuva celuva krSNarAyana nODi

caraNam 1

hoLeva hombaNNa daTTi callaNa aLavaDisida nIliya bigidu halavu rannada unguraniTTu celuva beraLa
naTisuta lalita vAmatOLina mEle hoLeva vAre drSTiyeseye balada pAda eDake sAsira jalajadandadi hoLeyalu nODi

caraNam 2

gulugunji sara kalliya cikka gajagina cIla shaLegOlAmaci khalugembA peNDe ghammaghammisuva malayajAmita lEpita
mallige mAlati baLLiya daLilu halavu saragaLolivutiralu taLita kalpavrkSada neLaloLu geLeya gOparindADalu

caraNam 3

mAravi dEshi gurjari bhairavi geLaLi nATi sAvEri AhEri pUrvi kAmbhOji pADi dEshAkSi shankarAbharaNa mALava
varALi kalyANi tODi mukhAriyaraLi vasanta bauLi dhanyAsi saurASTra guNDakriya rAmakriye mEgha kuranjiyu pADalu nODi

caraNam 4

haruSadinda manadi susvara purada satiyarellaru kELi maredu maneya makkaLu jaredu neredu hariya olisida
hariNa kariyu kEsari vrnda turaga mahiSa uraga muSaka hariya koLla ravake mOhisi maredire jAtivairava

caraNam 5

karagi kallu nIrAgi hariye teragaLindukki hariye yamune turu khaga barhi strIyaru citradi bareda pratimeyantire
suraru nabhadi nODi kusuma kareya bhEri dundubhi moreye purandara viTTalagOkuladi vENunAda mADalu nODi
***

No comments:

Post a Comment