Wednesday, 4 December 2019

ಏಕೆ ಗೋಪಾಲ ಕರೆಯುತಾನೆ purandara vittala

ಪುರಂದರದಾಸರು
ರಾಗ ಶಂಕರಾಭರಣ. ಆದಿ ತಾಳ

ಏಕೆ ಗೋಪಾಲ ಕರೆಯುತಾನೆ, ಎಲೆ ಸಖಿಯೆ ಎನ್ನ
ಏಕೆ ಗೋಪಾಲ ಕರೆಯುತಾನೆ ||ಪ||

ಕಣ್ಣು ಸನ್ನೆಯ ಮಾಡುತಾನೆ ಮಾತು ಬಗೆಬಗೆ ,
ಹಣ್ಣು ಕೈಯಲಿ ತೋರುತಾನೆ , ಎನ್ನ ಚೆಲುವಿಕೆ
ಬಣ್ಣಿಸುತಲಿ ತಿರುಗುತಾನೆ, ಇವ ನೂರು ವರಹ
ಕಾಣಿಕೆ ಕೊಟ್ಟು ಎನ್ನ ಮದುವೆಯಾಗಿಹನೇನೆ ||

ಹವಳ ಸರವ ತೋರುತಾನೆ, ದುಂಡು ಮುತ್ತಿನ
ಧವಳಹಾರವ ಬೀಸುತಾನೆ, ಒಂದ್ಹಾಸಿಗೆ ಮೇಲೆ
ಇವ ಹಗಲೆ ಬಾರೆಂದು ಕರೆಯುತಾನೆ, ಕಾಮನಾಟಕೆ
ಹವಣಿಪುದು ಕಂಡರೆ ನಮ್ಮವರು ಸುಮ್ಮನೆ ಇಹರೇನೆ ||

ಬಗಲು ಬಿಗಿದಪ್ಪುತಾನೆ ನೋಡೆ, ಬಟ್ಟ ಬಯಲೊಳು
ಮೊಗಕೆ ಮೊಗವಿಟ್ಟು ಮುದ್ದಿಸುತಾನೆ, ಎನ್ನ ಮನಸು
ಧಿಗಿಲುಧಿಗಿಲೆಂದು ನಡುಗಿತು ಕಾಣೆ, ಪುರಂದರವಿಠಲನೆ
ಮಿಗಿಲಾಗಿ ಮನ್ನಿಸಿ ನನ್ನ ಮಗನಾಣೆ ಇಟ್ಟು ಮರಳಿ |
***


pallavi

Eke gOpAla kareyutAne ele sakhiye enna Eke gOpAla kareyutAne

caraNam 1

kaNNu sanneya mADutAne mAtu bage bage haNNu kaiyali tOrutAne enna celuvike
baNNIsutali tirugutAne iva nUru varaha kAnike koTTu enna maduveyAgihanEne

caraNam 2

havaLa sarava tOrutAne duNDu muttina dhavaLa hArava bIsutAne ondahAsige mEle iva
hagale bArendu kareyutAne kAma nATake havaNivudu kaNDare nammavaru summane iharEne
pagalu bigidapputAne nODe baTTa bayaloLu mogage mogaviTTu muddisutAne enna manasu dhigilu
dhigilendu naDugidu kANe purandara viTTalane migilAgi mannisi nanna maganANe iTTu maraLi
***

ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ |
ಏಕೆ ಗೋಪಾಲ ಕರೆಯುತಾನೆ ? ಪ

ಕಣ್ಣ ಸನ್ನೆ ಮಾಡುತಾನೆ - ಮತ್ತೆ ಬಗೆ ಬಗೆ |ಹಣ್ಣ ಕೈಯಲಿ ತೋರುತಾನೆ - ಎನ್ನ ಚೆಲುವಿಕೆ ||ಬಣ್ಣಿಸುತಲಿ ತಿರುಗುತಾನೆ - ಇವನೇನೆ |ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ 1

ಹವಳ ಸರವ ತೋರುತಾನೆ - ದುಂಡು ಮುತ್ತಿನ - |ಧವಳಹಾರವ ನೀಡುತಾನೆ - ಹಾಸಿಗೆಯ ಮೇಲೆ ||ಪವಡಿಸಬೇಕೆನುತಾನೆ - ಇವನೊಡನಿರಲು ನ-|ಮ್ಮವರು ಸುಮ್ಮನೆ ಇಹರೇನೆ - ಎಲೆ ಸಖಿಯೆ 2

ಬಟ್ಟಲ ಪಿಡಿದು ಬರುತಾನೆ - ಹಗಲೆ ಬಾ ಎಂದು -|ಬಟ್ಟ ಬಯಲೊಳು ಕರೆಯುತಾನೆ - ಎನ್ನ ಮನದೊಳು ||ದಟ್ಟು ಧಿಗಿಲು ಎನ್ನದೇನೆ - ಪುರಂದರವಿಠಲ - |ಇಟ್ಟು ಕೊರಳಾಣೆ ಈಗ ಬಾ ಎಂಬುವನೆ - ಎಲೆ ಸಖಿಯೆ 3
*******

No comments:

Post a Comment