ಪುರಂದರದಾಸರು
ರಾಗ ಪಂತುವರಾಳಿ ಅಟತಾಳ
ಕೂಗದೆ ಉಸಿರಿಕ್ಕದೆ, ನೀವು ,
ಬೇಗ ಬೇಗನೆ ಬನ್ನಿ , ರಂಗ ಮನೆಯ ಪೊಕ್ಕ ||ಪ||
ಸೂರಿ ಕೆಳಗೆ ನಿಂದಾರಿಸಿ ತನ್ನ
ವಾರಿಗೆಯ ಮಕ್ಕಳನು ಕೂಡಿಸಿ
ಹಾರಿ ಗೋಡೆಯ ಧುಮುಕಿ ಒಳಗೆ ಪೊಕ್ಕು
ಸೂರೆಗೊಳ್ಳುತಾನೆ ಸುಮ್ಮನೆ ಬನ್ನಿ ||
ಹೆಜ್ಜೆಗಳಿವೆ ನಮ್ಮ ಮನೆಯಲ್ಲಿ , ಕಾಲು-
ಗೆಜ್ಜೆಯ ಧ್ವನಿ ಕೇಳಿ ಬರುತಲಿದೆ
ನಿರ್ಜನರ ಕಂಡು ರಂಗ ಮನೆಯ ಪೊಕ್ಕು
ಮಜ್ಜಿಗೆಲೋಕುಳಿಯಾಡುವನಮ್ಮ ||
ಹಾಲು ಚೆಲ್ಲಿ ಹಳ್ಳ ಮುಂದೆ ಹರಿದಿದೆ
ಮೇಲೆ ಮೊಸರುಕೆನೆ ಚೆಲ್ಲಾಡಿದೆ
ಲೀಲೆ ಹೀಗೆ ಆಡುತಲೈದನೆ
ಬಾಳ ಚೋರ ಗುರು ಪುರಂದರವಿಠಲ ||
***
ರಾಗ ಪಂತುವರಾಳಿ ಅಟತಾಳ
ಕೂಗದೆ ಉಸಿರಿಕ್ಕದೆ, ನೀವು ,
ಬೇಗ ಬೇಗನೆ ಬನ್ನಿ , ರಂಗ ಮನೆಯ ಪೊಕ್ಕ ||ಪ||
ಸೂರಿ ಕೆಳಗೆ ನಿಂದಾರಿಸಿ ತನ್ನ
ವಾರಿಗೆಯ ಮಕ್ಕಳನು ಕೂಡಿಸಿ
ಹಾರಿ ಗೋಡೆಯ ಧುಮುಕಿ ಒಳಗೆ ಪೊಕ್ಕು
ಸೂರೆಗೊಳ್ಳುತಾನೆ ಸುಮ್ಮನೆ ಬನ್ನಿ ||
ಹೆಜ್ಜೆಗಳಿವೆ ನಮ್ಮ ಮನೆಯಲ್ಲಿ , ಕಾಲು-
ಗೆಜ್ಜೆಯ ಧ್ವನಿ ಕೇಳಿ ಬರುತಲಿದೆ
ನಿರ್ಜನರ ಕಂಡು ರಂಗ ಮನೆಯ ಪೊಕ್ಕು
ಮಜ್ಜಿಗೆಲೋಕುಳಿಯಾಡುವನಮ್ಮ ||
ಹಾಲು ಚೆಲ್ಲಿ ಹಳ್ಳ ಮುಂದೆ ಹರಿದಿದೆ
ಮೇಲೆ ಮೊಸರುಕೆನೆ ಚೆಲ್ಲಾಡಿದೆ
ಲೀಲೆ ಹೀಗೆ ಆಡುತಲೈದನೆ
ಬಾಳ ಚೋರ ಗುರು ಪುರಂದರವಿಠಲ ||
***
pallavi
kUgade usirikkade nIvu bEga bEgane banni ranga maneya pokka
caraNam 1
suri keLage nindArisi tanna vArigeya makkaLanu kUDisi
hAri goDeyanu dhumuki oLage pokku sure koLLutAne summane banni
caraNam 2
hejjagaLive namma maneyalli kAlu gejjeya dhvani kELi barutalite
nirjanara kaNDu ranga maneya pokku majjigelOguLiyADuva namma
caraNam 3
hAlu celli haLLa munde haridide mEle mosaru kene cellADive
lIle hIgeyADutalaidane bALa cOra guru purandara viTTala
***
ಕೂಗದೆ ಉಸುರಿಕ್ಕದೆ ನೀವು |
ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಪ
ಹೆಜ್ಜೆಗಳಿವೆಕೋ ಮನೆಯಲಿ-ಕಾಲ |ಗೆಜ್ಜೆಯ ದನಿ ಕೇಳಬರುತಲಿದೆ ||ನಿರ್ಜರಪತಿ ತನ್ನ ಮನಸಿಗೆ ಬಂದಂತೆ |ಮಜ್ಜಿಗೆ ಓಕುಳಿ ಆಡಿಹನಕ್ಕ 1
ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ |ಓರಗೆ ಮಕ್ಕಳುಗಳ ನಿಲ್ಲಿಸಿ ||ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ |ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ 2
ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ |ಮೇಲಿನ ಕೆನೆಗಳು ಬಳಿದಿಹವೆ ||ಬಾಲಚೋರ ಶ್ರೀ ಪುರಂದರವಿಠಲನು |ಚಾಲುವರಿದರಿನ್ನು ಬಿಡಬಾರದಕ್ಕ 3
*****

No comments:
Post a Comment