Friday 27 December 2019

ವಾದಿರಾಜ ಗುರುರಾಜರ ಚರಣಕೆರಗಿ ankita prasannashreenivasa vadiraja stutih

by ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಭಾವಿಸಮೀರವಾದಿರಾಜ ಗುರುಗಳ ಸ್ತೋತ್ರ

ವಾದಿರಾಜ ಗುರುರಾಜರ ಚರಣಕೆರಗಿರೋಸಂದೇಹಇಲ್ಲದೇ ಇವರ ಭಜಿಸಿ ಬದುಕಿರೋ ಪ

ಗೌರಿಗದ್ದೆ ಕ್ಷೇತ್ರದಲ್ಲಿ ರಾಮಾಚಾರ್ಯ ಸರಸ್ವತೀ |ವಿಪ್ರಶ್ರೇಷ್ಠರ ನಿಮಿತ್ತೀಕರಿಸಿ ಇಳೆಯಲಿ ತೋರಿಹರು 1

ಯೋಗೀವಾಗೀಶತೀರ್ಥರಕರ ಕಮಲಜಾತ ||ಗಾಗಿ ವಾದಿರಾಜ ತೀರ್ಥರಾದ ವಾದಿಗಜಸಿಂಹ 2

ವೀರಭದ್ರೋಪಬಲಿ ನಾರಾಯಣ ಭೂತರಾಜ |ಪರಿಪರಿವಿಧದಿ ಇವರಿಗೆ ಸೇವೆ ಮಾಡುವರು3

ವಾದಿರಾಜರ ಭಕ್ತರ ಸರ್ವ ಬಾಧೆಗಳ ಪರಿಹರಿಸೆ |ಒದಗುವರು ಭಾವಿರುದ್ರರು ಭೂತರಾಜರು 4

ಯುಕ್ತಿ ಮಲ್ಲಿಕಾದಿ ದಿವ್ಯ ಶ್ರುತಿಸ್ಮøತಿ ಯುಕ್ತಯುತ |ಗ್ರಂಥಗಳ ಕುಮತ ಭಂಜಕ ಜ್ಞಾನ ಪುಂಜವು 5

ತ್ರಿವೃನ್ನಾಮ ತ್ರಿವಿಕ್ರಮನ ಸೋದೆಯಲ್ಲಿ ನಿಲ್ಲಿರಿಸಿದ |ಭಾವಿ ಸಮೀರರ ನೇಮಿಸಿ ಕ್ಷೇಮಾಕಾಂಕ್ಷಿಗಳು 6

ಧವಳಗಂಗೆಯಲಿ ವೇದವ್ಯಾಸನ ಮುಂದೆಪವಿತ್ರ ವೃಂದಾವನದಿ ಇಹರ ನೋಡಿ ಧನ್ಯರು ನಮಸ್ಕರಿಸುತ 7
*******

No comments:

Post a Comment