Thursday, 26 December 2019

ಗುರುಗಳನನುದಿನ ನೆನೆವೆ ನಾ ದುರಿತ ದಟ್ಟುಳಿ guru parampara rayara mutt ankita pranesha vittala

ಗುರುಗಳನನುದಿನ ನೆನೆವೆ ನಾ
ದುರಿತ ದಟ್ಟುಳಿ ಸಾರೆ ಬಂದೀತಿನ್ನೇನಾ || ಪ ||

ಪಾರ್ಥ ರಕ್ಷಕನ ಸೇ  ವಾರ್ಥ ಖಳರ ಕೊಂದು
ಕೀರ್ತಿ ಪಡೆದ ಸುಖ  ತೀರ್ಥರೆಂತೆಂಬಾ || 1 ||

ನೀ ಪಾಲೀಸೆಂದೆನಲಾಪತ್ತು ಬಿಡಿಸುವ
ಮಾಪತಿ ನಿಜದೂತ  ಶ್ರೀ ಪದ್ಮನಾಭ || 2 ||

ಕರಿಪತಿ ಬಳಿಯಿಂದ  ಧರಿಜ ಪತಿಯ ತಂದು
ಗುರುಗಳಿಗಿತ್ತೀಹ  ನರಹರಿ ತೀರ್ಥಾ || 3 ||

ಬಾದರಾಯಣ ದಿವ್ಯ  ಪಾದ ಜಲಜ ಭೃಂಗ
ಭೂದೇವ ವಂದಿತ  ಮಾಧವ ತೀರ್ಥ || 4 ||

ಇಕ್ಷುಚಾಪನ ಮ್ಯಾಳ  ಲಕ್ಷ್ಮೀ ಇಲ್ಲದೆ ಬಲು
ಪೇಕ್ಷೆ ಮಾಡಿದ  ಅಕ್ಷೊಭ್ಯ ಮುನಿಪ || 5 ||

ದಯಮಾಡಿರೆಂದು ವಿ  ನಯದಿಂದ ಭಜಿಪರ
ಬಯಕೀ ಪೂರೈಸುವ  ಜಯತೀರ್ಥರೆಂಬ || 6 ||

ಅದ್ವೈತ ಗಜ ಸಿಂಹ  ಮಧ್ವ ಮತೋದ್ಭವ
ಸದ್ವೈಷ್ಣವ ಪ್ರೀಯ  ವಿದ್ಯಾಧಿರಾಜ || 7 ||

ಸಂದೇಹವಿಲ್ಲದೇ  ವಂದೀಪ ಜನರಾಸೆ
ತಂದುಕೊಡುವ ದಯ  ಸಿಂಧು ಕವೀಂದ್ರಾ || 8 ||

ರಾಗ ವರ್ಜಿತ ಭಾಗವತರ ಪಾಲ
ಯೋಗಿ ಶಿರೋಮಣಿ  ವಾಗೀಶ ಮುನಿಪ || 9 ||

ಸಾರಿದ ಭಕುತರ  ಘೋರಿಪ ಅಘಗಳ
ದೂರ ಓಡಿಸುತಿಪ್ಪ  ಶ್ರೀ ರಾಮಚಂದ್ರ || 10 ||

ಕು ಭವದೊಳಿರುವಾರ  ಸೊಬಗಿನಿಂದಲಿ ನೋಡಿ
ಅಭಯ ಕೊಡುತಿಪ್ಪ  ವಿಬುಧೇಂದ್ರ ತೀರ್ಥ || 11 ||

ಭ್ರಾಮಕ ಜನ ಶಿಕ್ಷ  ಧೀಮಂತ ಜನ ಪಕ್ಷ
ಹೇಮ ವರಣಾಂಗ ಜಿ  ತಾಮಿತ್ರ ಮುನಿಪಾ || 12 ||

ಬಗೆ ಬಗೆ ಭಜಿಸಲು  ಇಗಡ ಜನರನೊಲ್ಲ
ಬಗಿವಾನು ಸುಜನರ  ರಘುನಂದನಾರ್ಯ || 13 ||

ಪೊಂದಿದವರ ನೋಯ  ದಂದದಿ ಸಲಹುವ
ಎಂದೆಂದು ಬಿಡದ ಶ್ರೀ ಸು  ರೇಂದ್ರಾಖ್ಯ ಮುನಿಪ || 14 ||

ನಿಜಭಕ್ತಿಯಲಿ ಪಾದ  ಭಜಿಸುವ ಅಗಣಿತ
ಸುಜನರ ಸಲಹುವ  ವಿಜಯಿಂದ್ರ ಮುನಿಪ || 15 ||

ವೀಂದ್ರ ವಾಹನ ಯಾದ  ವೇಂದ್ರಾಂಘ್ರಿ ಭಜಿಸುವ
ಸಾಂದ್ರ ಭಕ್ತಿಯಲಿ ಸು  ಧೀಂದ್ರಾಖ್ಯ ಮುನಿಪಾ || 16 ||

ಧಾರುಣಿಯೊಳಗತಿ  ಚಾರು ವೃಂದಾವನ
ದೀ ರಾಜಿಸುತಿಪ್ಪ  ಶ್ರೀ ರಾಘವೇಂದ್ರಾ || 17 ||

ಶ್ಲಾಘೀನ ಗುಣನಿಧಿ  ಮಾಗಧ ರಿಪು ದಾಸ
ರಾಘವೇಂದ್ರರ ಪುತ್ರ  ಯೋಗೀಂದ್ರ ತೀರ್ಥ || 18 ||

ವೈರಾಗ್ಯ ಗುಣದಿಂದ  ಮಾರಾರೀಯಂದದಿ
ತೋರುವರನು ದಿನ  ಸೂರೀಂದ್ರ ತೀರ್ಥ || 19 ||

ಕುಮತವೆಂಬಗಣೀತ  ತಿಮಿರ ಓಡಿಸುವಲ್ಲಿ
ಕಮಲಾಪ್ತನಂತೀಹ  ಸುಮತೀಂದ್ರ ತೀರ್ಥ || 20 ||

ಸಲ್ಲಾದ ಸುಖಗಳ  ನೆಲ್ಲಾವು ಜರಿದು ಶ್ರೀ
ನಲ್ಲಾನ ಭಜಿಸಲು  ಬಲ್ಲ ಉಪೇಂದ್ರಾ || 21 ||

ಮೋದ ಮುನಿ ಮತ ಮ  ಹೋದಧಿ ಚಂದ್ರ ವಿ
ದ್ಯಾದಿ ದಾನಾಸಕ್ತ  ವಾದೀಂದ್ರ ತೀರ್ಥ || 22 ||

ಬಿಸಜನಾಭನ ದೂತ  ವಸುಧಿಯೊಳಗೆ ಖ್ಯಾತ
ಕಿಸಲಯೋಪಮ ಪಾದ  ವಸುಧೀಂದ್ರ ತೀರ್ಥ || 23 ||

ಪರ ಮತೋರಗ ವೀಪ  ಕರುಣಿ ವಿಗತ ಕೋಪ
ವರ ವೇದ ಸುಕಲಾಪ  ವರದೇಂದ್ರ ಭೂಪ || 24 ||

ವಿರಕ್ತಿ ಮತಿ ಪಾಲಿಪ  ವಾದಿ ವಿಜಯ ಧೀರ
ವರದಾ ತೀರಸ್ಥ  ಧೀರೇ೦ದ್ರ ತೀರ್ಥ || 25 ||

ಸುವಿವೇಕಿಗಳಿಗಿಷ್ಟ  ತವಕದಿಂದಲಿ ಈವ
ಕವಿಭಿರೀಡಿತ ಪಾದ  ಭುವನೇಂದ್ರ ತೀರ್ಥ || 26 ||

ಶಬರೀ ವಲ್ಲಭನಂಘ್ರಿ  ಅಬುಜಾಳಿ ಸೂರ್ಯ ಸ
ನ್ನಿಭ ವಾದಿ ಗಜಸಿಂಹ ಸುಬೋಧೇಂದ್ರ ತೀರ್ಥ || 27 ||

ಪ್ರಾಣೇಶ ವಿಠಲನ  ಕಾಣಬೇಕಾದರೆ
ಈ ನಮ್ಮ ಗುರುಗಳ  ಧ್ಯಾನದೊಳಿಹದೂ || 28 ||
***


gurugaLananudina neneve nA
durita daTTuLi sAre bandItinnEnA || pa ||

pArtha rakShakana sE vArtha KaLara kondu
kIrti paDeda suKa tIrtharenteMbA || 1 ||

nI pAlIsendenalApattu biDisuva
mApati nijadUta SrI padmanABa || 2 ||

karipati baLiyinda dharija patiya tandu
gurugaLigittIha narahari tIrthA || 3 ||

bAdarAyaNa divya pAda jalaja BRunga
BUdEva vandita mAdhava tIrtha || 4 ||

ikShucApana myALa lakShmI illade balu
pEkShe mADida akShoBya munipa || 5 ||

dayamADirendu vi nayadinda Bajipara
bayakI pUraisuva jayatIrthareMba || 6 ||

advaita gaja siMha madhva matOdBava
sadvaiShNava prIya vidyAdhirAja || 7 ||

sandEhavilladE vandIpa janarAse
tandukoDuva daya sindhu kavIndrA || 8 ||

rAga varjita BAgavatara pAla
yOgi SirOmaNi vAgISa munipa || 9 ||

sArida Bakutara GOripa aGagaLa
dUra ODisutippa SrI rAmachandra || 10 ||

ku BavadoLiruvAra sobaginindali nODi
aBaya koDutippa vibudhEndra tIrtha || 11 ||

BrAmaka jana SikSha dhImanta jana pakSha
hEma varaNAnga ji tAmitra munipA || 12 ||

bage bage Bajisalu igaDa janaranolla
bagivAnu sujanara raGhunandanArya || 13 ||

pondidavara nOya dandadi salahuva
endendu biDada SrI surEndrAKya munipa || 14 ||

nijaBaktiyali pAda Bajisuva agaNita
sujanara salahuva vijayindra munipa || 15 ||

vIndra vAhana yAda vEndrAnGri Bajisuva
sAndra Baktiyali su dhIndrAKya munipA || 16 ||

dhAruNiyoLagati cAru vRundAvana
dI rAjisutippa SrI rAGhavEndrA || 17 ||

SlAGIna guNanidhi mAgadha ripu dAsa
rAGhavEndrara putra yOgIndra tIrtha || 18 ||

vairAgya guNadinda mArArIyandadi
tOruvaranu dina sUrIndra tIrtha || 19 ||

kumataveMbagaNIta timira ODisuvalli
kamalAptanantIha sumatIndra tIrtha || 20 ||

sallAda suKagaLa nellAvu jaridu SrI
nallAna Bajisalu balla upEndrA || 21 ||

mOda muni mata ma hOdadhi chandra vi
dyAdi dAnAsakta vAdIndra tIrtha || 22 ||

bisajanABana dUta vasudhiyoLage KyAta
kisalayOpama pAda vasudhIndra tIrtha || 23 ||

para matOraga vIpa karuNi vigata kOpa
vara vEda sukalApa varadEndra BUpa || 24 ||

virakti mati pAlipa vAdi vijaya dhIra
varadA tIrastha dhIrEndra tIrtha || 25 ||

suvivEkigaLigiShTa tavakadindali Iva
kaviBirIDita pAda BuvanEndra tIrtha || 26 ||

SabarI vallaBananGri abujALi sUrya sa
nniBa vAdi gajasiMha subOdhEndra tIrtha || 27 ||

prANESa viThalana kANabEkAdare
I namma gurugaLa dhyAnadoLihadU || 28 ||
***

No comments:

Post a Comment