Sunday, 17 November 2019

ಶರಣು ಶರಣು ಜಯ ಮುನಿರಾಯ ankita prasannavenkata

by ಪ್ರಸನ್ನವೆಂಕಟದಾಸರು
ಶರಣು ಶರಣು ಜಯ ಮುನಿರಾಯ ಸ್ವಾಮಿಶರಣಾಗತ ತಾತ್ವಿಕ ಪ್ರಿಯ ಪ.

ಶ್ರೀ ಮಧ್ವಗುರು ದಯವನು ಪಡೆದು ಅದೇ ಮಹಿಮನ ಮನೆಯೊಳು ಬಂದುನೇಮದಿ ತುರ್ಯಾಶ್ರಮ ಬಲಿದೆ ಈಭೂಮಿಗಿಂದ್ರನಪರಿ1

ಅಶ್ರುತ ಪ್ರಭೆ ಬುಧರೊಳು ಬೀರಿ ನಾನಾ ಶ್ರುತಿಯರ್ಥ ಪ್ರಕಟದೋರಿಶಾಶ್ವತಕ್ಷಾದಿ ತ್ರಿಪ್ರಮಾಣವ ನಿಜಾಶ್ರಿತರಿಗೆ ಪೇಳಿದೆ ಅನುವ 2

ವೇದಾಂಬುಧಿಯೊಳು ಸುಧೆದೆಗೆದೆ ರಾಮಪಾದಕರ್ಪಿಸಿ ಬುಧಜನಕೆರೆದೆಕೈದುಗಳಂತೆ ಪ್ರಮೇಯಾರ್ಥವಿಡಿದೆ ಜಯನಾದದಿಂ ದುರ್ವಾದಿಗಳನ್ಯೆಚ್ಚಿದೆ 3

ಮರುತಮತದ ವಿಬುಧರ ನೆರಹಿಸಿಮೂರೇಳರಿ ಬಲವ ಜರಿದಟ್ಟಿದೆಅವರಬಿರುದು ಸೀಳಿದೆ ಈ ಧರೆಯ ವೈಷ್ಣವರಭಯವ ಕಳೆದೆ4

ಈ ಕ್ಷೋಣಿಯೊಳು ಪ್ರತಿವರ್ಜಿತನೆ ಶ್ರೀಅಕ್ಷಯಪ್ರಜÕ ಕೃಪಾನ್ವಿತನೆಅಕ್ಷೋಭ್ಯತೀರ್ಥರ ತನಯನೆವಿಶ್ವಕುಕ್ಷಿಪ್ರಸನ್ನವೆಂಕಟಪ್ರಿಯನೆ5
*******

No comments:

Post a Comment