Monday, 6 September 2021

ಗುರುರಾಘವೇಂದ್ರರಾಯನೆ ಬಾರೋ ಕರುಣವ ಬೀರೋ ankita tandevenkatesha vittala ವೃತ್ತನಾಮ vruttanama

 ankita ತಂದೆವೆಂಕಟೇಶವಿಠಲ

ರಾಗ: ಫರಜು ತಾಳ: ಆದಿ


ಗುರು ರಾಘವೇಂದ್ರರಾಯನೆ ಬಾರೋ

ಕರುಣವ ಬೀರೋ ತವರೂಪ ತೋರೋ


ಶ್ಲೋಕ 

ಶ್ರೀ ಮಧ್ವಾಖ್ಯ ಸುಮಾರುತ ಸುರಸ್ತೋಮಾರ್ಚಿತಾಂಘ್ರಿದ್ವಯ

ಪ್ರೇಮಾಂಭೋನಿಧಿ ವ್ಯಾಸಕೃಷ್ಣ ನೃಹರೀ ರಾಮಾದಿ ರೂಪಾಹ್ವಯ

ಭೂಮ್ಯಾಕಾಶ ದ್ವಿಸಪ್ತಲೋಕಮಹಿತ ಹೇಮಾಂಡವ್ಯಾಪ್ತಾದ್ವಯ

ಶ್ರೀಮಾನಿತಮಾನದಾಂಘ್ರಿಭ್ರಮರಂ ಶ್ರೀಮಂತ್ರಸದ್ಮಂ ಭಜೇ

ಪದ

ಕರ್ಮ ಭುವಿಯ ಕುಂಭಕೋಣದಿ | ಜನ್ಮ ತಾಳಿದಿ | ವೇಣಿವೆಂಕಟಾಖ್ಯದಿ |

ಮರ್ಮವರಿತು ವಿಷ್ಣುಧ್ಯಾನದಿ | ದೈನಂದಿನದಿ | ಪುಣ್ಯಪರಿಪಾಕಕತದಿ|

ಕರ್ಮಗ್ರಂಥಿಯ ಹರಿದು ಮೋದದಿ | ಗುರುಪೀಠದಿ | ಸುಧೀಂದ್ರಜನಾದಿ|

ಪೇರ್ಮೆಯಿಂದಲಿ ಮಧ್ವಶಾಸ್ತ್ರಾಬ್ಧಿ | ಮೀನನೆನಿಸಿದಿ | ಅಜಾತಪ್ರತಿವಾದಿ | 1

ಶ್ಲೋಕ 

ಪೂರ್ವಾಚಲಪುಣ್ಯಕ್ಷೇತ್ರನಿಲಯಾ ಸರ್ವೋತ್ತಮೂರ್ವಿಭೃತ

ಶರ್ವಾಹಿಪ ತಾಕ್ಷ್ರ್ಯ ವೇಧ ಲಕ್ಷ್ಮೀ ಗೀರ್ವಾಣ ಸಂಸೇವಿತಾ

ನಿರ್ವಾಹಿತಸರ್ವಕರ್ಮ ಶುಭದ ಸರ್ವಸ್ಥ ಸಾರಭೋಕ್ತ

ಸರ್ವಜ್ಞಾರ್ಚಿತಪಾದಪದ್ಮಭ್ರಮರಂ ಶ್ರೀ ವ್ಯಾಸರಾಜಂ ಭಜೇ 

ಪದ

ದಂಡ ಕಮಂಡಲುಧಾರಕಾ | ದುರಿತಹಾರಕ | ಜ್ಞಾನ ಭಕ್ತಿ ವಿವರ್ಧಕ |

ಪುಂಡರೀಕಾಂಬಕಪದಕೋಕ | ನದ ಸೇವಕ ವಿವರ್ಜಿತಕಾಮ ಶೋಕ |

ಖಂಡಾರ್ಥ ವಿವೃತ್ತಿದೀಪಿಕಾ | ಗ್ರಂಥ ಕರ್ತೃಕ | ಸೀತಾರಮಣಾರಾಧಕ |

ಪಂಡಿತತಂಡಚಕೋರಕ | ಶಶಧಾರಕ ರಾಘವೇಂದ್ರನಾಮಕ | 2

ಶ್ಲೋಕ 

ವಿಷ್ವಭುಗ್ಚಾಪವಿಭಂಜನಕರಾ ಝಶಕೇತುಮತಾವರ

ಋಷಿಯಾಗ ಸುಕರ್ಮಪಾಲನ ಪರ ಇಷುಚಾಪಧೃತ ಶ್ರೀಕರ

ಹೃಷೀಕೇಶಾಭಿಧ ಮತ್ಸ್ಯಕೂರ್ಮ ಕುಧರದ್ವೇಷೀವಿಪಾಟನಕರ

ಭೈಷ್ಮೀವಲ್ಲಭಪಾದಪದ್ಮಮಧುಪಂ ವಿಭೀಷಣಂ ಪಾಹಿಮಾಂ 

ಪದ

ಅಶೇಷಪಂಡಿತ ಪಾಮರ | ಜನಕುಪಕಾರ | ಮಾಡಿದ ಉದಾರ |

ವಿಶೇಷಸನ್ಮಹಿಮ ವಾನರ | ಸನ್ಮತಸಾರ | ವಿಸ್ತ್ರುತಗೈದ ಧೀರ | 

ವಸುಧೆಯೊಳ್ ದ್ವಾದಶವತ್ಸರ | ನರಪಗಾಹಾರ | ವಿತ್ತ ಕರುಣಾಕರ |

ಶಿಶು ಚೂತರಸದೊಳು ಗತಿಸಿರ | ಲದಪರಿಹಾರ | ಗೈದ ದಯಾಪಾರಾವಾರ| 3

ಶ್ಲೋಕ

ಕೋಟ್ಯಾವಧಿಕೋಟಿಜನ್ಮಘಟಿತಾ ಪಾಪಾಟವೀಪಾವಕ

ಪಾಠೀಣಾಕೃತಿ ಕೂರ್ಮ ಕ್ರೋಢ ನೃಹರೀ ವಟು ಭೃಗುಜ ಹತತಾಟಕಾ

ಖೇಟಸ್ಕಂದವಿಹಾರಿ ತ್ರಿಪುರೋತ್ಪಾಟನ ಹಯಾರೋಹಕ

ಹಾಟಕಾಂಬರಶ್ರೀಚರಣಸೇವಕ ಗುರುರಾಟ್ ರಾಘವೇಂದ್ರಂ ಭಜೇ

ಪದ

ಗರ್ಭಿಣಿ ಪ್ರಸವಿಸೆ ಮರಳಲ್ಲಿ | ಉದಕವನಲ್ಲಿ | ತೋರಿ ಪುಳಿನಕಳಸದಲೀ |

ದುರ್ಭರಾತಪಕೆ ಕಂಗೆಡುತಲಿ | ಶಿಶುವಿರಲಲ್ಲಿ | ಬಾಧೆ ಬಿಡಿಸಿ ಚೈಲದಲೀ |

ನಿರ್ಭರದಿ ಆಮೀಷಾದಿಗಳಲ್ಲಿ | ಮಂತ್ರ ಜಲದಲ್ಲಿ | ನಿರ್ಮಿಸಿ ಪುಷ್ಪ ಕದಳೀ | 

ಸರ್ಬರ ಆನಂದ ಕಡಲಲ್ಲಿ| ಮುಳುಗಿಸುವಲ್ಲೀ| ನಿನ್ನ ಸಮರಿಲ್ಲೀಕ್ಷಿತಿಯಲ್ಲೀ| 4

ಶ್ಲೋಕ

ಸಿಂಧೂರಾಜಸುತಾಸುನೇತ್ರಾರವಿಂದಾಂಬರಸ್ಥಿತಮಣಿ

ಸಾಂದೀಪದ್ವಿಜಕುವರಪೋಷಕ ಚಿದಾನಂದಾತ್ಮ ದಿವಿಭಮಣಿ

ಸಿಂಧೂರಕ್ಲೇಶನಾಶಕ ಮಹಾನಂದತೀರ್ಥಾರ್ಚಿತಘೃಣಿ

ಬೃಂದಾರಕವಂದ್ಯನಂಘ್ರಿಶರಣಬೃಂದಾರ್ಚಿತ ಯತಿಮಣಿ

ಪದ

ತಾರತಮ್ಯಜ್ಞಾನ ಬೋಧಿಸಿ | ಶಾಸ್ತ್ರ ಶೋಧಿಸಿ | ಮಿಥ್ಯಾಸಮಯ ಖಂಡಿಸೀ |

ತಾರಕ ಹರಿಯೆಂದು ಸ್ಥಾಪಿಸಿ | ಮರುತನೊಪ್ಪಿಸಿ | ದಿಗ್ದೇಶದಿ ಮೆರೆಸೀ |

ಸಾರಿದವರಿಷ್ಟಾರ್ಥ ಪೂರ್ತಿಸಿ | ಆಶೀರ್ವದಿಸಿ ಮನ್ರೋಗೊಲಿದ ವಿಲಾಸೀ |

ನೂರೆಂಟ ಬೇಡೆನಿದನಾಲಿಸಿ | ಪಂಥ ಪಾಲಿಸಿ | 

ಭಕ್ತಿ ಬೆಳೆಸೋಸಂನ್ಯಾಸೀ | 5

ಶ್ಲೋಕ

ಕೇಶೀಭಂಜನ ಶ್ವಸನಹೃದಯಾಕಾಶಾಭಿರಾಜಿತರವೀ

ಕ್ಲೇಶಾಜ್ಞಾನ ವಿಮೋಹ ವಿಹ್ವಲ ಭಯ ದೋಷಾಗಪಾಟನಪವೀ

ದಾಸೀಕೃತ ಸರ್ವಜೀವನಿಚಯ ಆಶಸ್ಥ ನತಶಾಂಭವೀ

ವ್ಯಾಸಾದ್ಯನಂತರೂಪಗಮಹಾಶ್ರೀಪಾದಭಜಕಂ ಭಜೇ

ಪದ

ಕೃತಮಹಾಯುಗದಲ್ಲಿ ಪ್ರಹ್ಲಾದ | ನಾಗಿ ಪಿತೃಮೇಧ |

ಗೈಸಿ ಕಂಡೆ ಹರಿಪಾದ |

ದ್ವಿತೀಯಾದೊಳ್ ರಾಕ್ಷಸಾಧಮನಾದ | ರಾವಣವಧ | 

ಗೈದ ರಘುಜ ಪ್ರಿಯನಾದ |

ತ್ರುತಿಯಯುಗದಿ ಬಾಹ್ಲೀಕನಾದ | ಕಲಿವಪುವಧ |

ಕಾರಿಚರಣಷಟ್ಪದ |

ಅತಿಶಯಕಲಿಯೊಳು ಯತಿಯಾದ | ಮಾಯಾಮತವಧ |

ಗೈದು ಮಧ್ವೇಶಗರ್ಪಿಸಿದ | 6

ಶ್ಲೋಕ

ಹೇಮಾಕ್ಷಾರಿ ಸುದಾಮ ಸುಮನಸ್ತೋಮಾಬ್ಜಮಿತ್ರೋದಯಾ

ಪ್ರೇಮಾಂಭೋರುಹಲೋಚನಯುಗ ಧೀಮಂತಜನ ಸಂಪ್ರಿಯಾ

ಸೀಮಾತೀತ ವಿಚಿತ್ರಚರ್ಯ ನಿಗಮಸ್ತೋಮಾರ್ಚಿತಾಂಘ್ರಿದ್ವಯಾ

ಭಾಮಾವರಸಾರಸಾಂಘ್ರಿಭ್ರಮರಂ ಶ್ರೀಮಂತ್ರನಿಲಯಂ ಭಜೇ

ಪದ

ಸಕಲಪುಣ್ಯಕ್ಷೇತ್ರ ಚರಿಸೀದೆ | ಕೀರ್ತಿ ಮೆರೆಸೀದೇ | ಕೃತಾರ್ಥನೆನಿಸೀದೆ|

ವಿಕಲದುರ್ಮತಗಳನೊರೆಸೀದೆ | ಭಕ್ತಿ ಬೆಳೆಸೀದೇ | ಇಷ್ಟಾರ್ಥಪ್ರದನಾದೆ|

ಮುಕುತಿಚಾರ್ವಂಗಿಯನೊಲಿಸೀದೆ | ತಾಪದಹಿಸೀದೇ | ದಾಸದೀಕ್ಷೆ ವಹಿಸೀದೆ|

ಸುಕಲಾಭಿಜ್ಞನೆ ಯೋಗವಾರಿಧೆ | ಮಂತ್ರನಿಲಯದೇ | ದೇಹತ್ಯಾಗಮಾಡಿದೆ | 7

ಶ್ಲೋಕ

ಗೋಪಾಲಕ ಗೋಪ ಗೋಪಿವನಿತಾತಾಪಾಪಹಾರಕವರ 

ತಾಪತ್ರಯನಾಶಕ ದುರ್ವಿಭಾವ್ಯ ಸ್ವರತಾ ಕೂಪಾರಸುಗುಣಾಗರ

ಕಾಪಾಲೀ ದಿವಿಜೇಶ ಚಿತ್ಸುಖಪ್ರಾಪಕ ಕ್ಷಮಾಶ್ರೀವರಾ

ರೂಪಾಭಿದಾನಂತ ಪೂರ್ಣಮಹಿಮಶ್ರೀಪಾದಭಜಕಂ ಭಜೇ

ಪದ

ಸುವಿರೋಧಿವರ್ಷ ಶ್ರಾವಣಮಾಸಾ | ಸಿತ ಕವಿದಿವಸ | 

ಬೃಂದಾವನದಿಪ್ರವೇಶಾ |

ಪವಿಧರನಗರಿಗೆ ಸಮಭಾಸಾ | ಯಾಗಪ್ರದೇಶ | 

ಮಂತ್ರಾಲಯಮುಕ್ತಿಕೋಶಾ |

ನವನವಮಹಿಮೆಯು ಅಹರ್ನಿಶಾ | ಉತ್ಸವ ಘೋಷ | 

ನಮ್ಮ ತಂದೆವೆಂಕಟೇಶ |

ಶ್ರೀವಿಠಲಕೊಡಿಸುವ ವರ ಜಸ | ಸಪ್ತಶತವರ್ಷ |

ಸಾಕ್ಷೀ ಹಯಾಸ್ಯ | 8

***

ಹೇಮಾಂಡ=ಬ್ರಹ್ಮಾಂಡ; 

ಶ್ರೀಮಾನಿತಮಾನದಾಂಘ್ರಿ=ಶ್ರೀಲಕ್ಷ್ಮೀದೇವಿಯಿಂದ 

ವಂದ್ಯನಾದ ಸಕಲರ ಮಾನ ಸಂರಕ್ಷಕನಾದ 

ಪರಮಾತ್ಮನ ಪಾದಗಳು; 

ಪರಿಪಾಕಕತದಿ=ಪೂರ್ವ ಪುಣ್ಯ ಪಕ್ಷದ ನಿಮಿತ್ತ; 

ಕರ್ಮ ಗ್ರಂಥಿ=ಕರ್ಮದ ಗಂಟು; 

ಊರ್ವಿಭೃತ= ಭೂಮಿಯನ್ನು ಹೊತ್ತ ವರಾಹ ದೇವರು; 

ಶರ್ವಾಹಿಪ=ಶೇಷ, ಶಿವ; 

ತಾಕ್ಷ್ರ್ಯ=ಗರುಡ; ವೇಧ=ಬ್ರಹ್ಮ; 

ಗೀರ್ವಾಣ=ದೇವತೆ; ; 

ಶಶಧಾರಕ=ಚಂದ್ರ; 

ವಿಷ್ವಭುಗ್ಚಾಪ=ಶೈವ ಧನುಸ್ಸು (ಶ್ರೀರಾಮನು ಮುರಿದದ್ದು); 

ಇಷು ಚಾಪಧೃತ=ಬಾಣ ಬಿಲ್ಲು ಹಿಡಿದಿರುವ; 

ವಿಪಾಟನಕರ=ಕೊಂದ; ವಸುಧೆಯೊಳ್ ದ್ವಾದಶ 

ವತ್ಸರ ನರಪಗಾಹಾರವಿತ್ತ=ರಾಜನ ಕೋರಿಕೆಯಂತೆ 

12 ವರ್ಷ ಕ್ಷಾಮವಿಲ್ಲದಂತೆ ರಕ್ಷಿಸಿದ; 

ಸಿಂಧೂರಾಜಸುತಾ=ಶ್ರೀ ಲಕ್ಷ್ಮೀದೇವಿ; 

ಕೇಶೀ=ಕಂಸನ ಹಸ್ತಕನಾದ ಒಬ್ಬ ದೈತ್ಯ; 

ಭಂಜನ=ನಾಶ; ಶ್ವಸನ=ವಾಯುದೇವರು; 

ವಿಹ್ವಲ=ಹತಾಶ; ದೋಷಾಗಪಾಟನಪವೀ=ದೋಷಗಳೆಂಬ 

ಬೆಟ್ಟಗಳನ್ನು ಸೀಳುವ ವಜ್ರಾಯುಧ; 

ಕಲಿ ವಪು ವಧಕಾರಿ=ಭೀಮಸೇನ; 

ಹೇಮಾಕ್ಷಾರಿ=ಹಿರಣ್ಯಾಕ್ಷನ ಶತ್ರು-ವರಾಹ ದೇವರು; 

ಸುದಾಮ=ವೈಕುಂಠ (ವೈಕುಂಠವೇ ಮನೆಯಾಗುಳ್ಳ); 

ಸುಮನ ಸ್ತೋಮಾಬ್ಜ ಮಿತ್ರೋದಯಾ=ದೇವತೆಗಳ 

ಸಮೂಹವೆಂಬ ಕಮಲಕ್ಕೆ ಉದಯ ಸೂರ್ಯನಂತಿರುವ; 

ಭಾಮಾವರ=ಸತ್ಯಭಾಮೆಯ ಗಂಡ ಶ್ರೀಕೃಷ್ಣ;; 

ಮುಕುತಿ ಚಾರ್ವಂಗಿ=ಮುಕ್ತಿ ಎಂಬ ಸುಂದರ ಕನ್ಯೆ; 

ಸುಕಲಾಭಿಜ್ಞ=ಅನೇಕ ಕಲೆಗಳಲ್ಲಿ ಪಂಡಿತರಾದವರು; 

ಪವಿಧರ ನಗರ=ಇಂದ್ರನ ಅಮರಾವತಿ; ಜಸ=ಕೀರ್ತಿ;


No comments:

Post a Comment