Monday, 20 December 2021

ಕೃಷ್ಣ ನೀ ಬೇಗನೆ ಬಾರೋ ankita shree krishna KRISHNA NEE BEGANE BAARO




RAGA YAMANKALYANI TALA MISHRACHAPU



ಕೃಷ್ಣಾ ನೀ ಬೇಗನೆ ಬಾರೋ 
ಬೇಗನೆ ಬಾರೋ ಮುಖವನ್ನು ತೋರೋ        ।।ಪ।।

ಕಾಲಲಂದುಗೆ ಗೆಜ್ಜೆ ನೀಲದ ಬಾವುಲಿ 
ನೀಲವರ್ಣನೆ ನಾಟ್ಯವನಾಡುತ ಬಾರೋ        ।।೧।।

ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ 
ಕೊರಳೊಳು ಧರಿಸಿದ ವೈಜಯಂತಿ ಮಾಲೆ      ।।೨।।

ಕಾಶಿಪೀತಾಂಬರ ಕೈಯಲ್ಲಿ ಕೊಳಲು 
ಪೂಸಿದ ಶ್ರೀಗಂಧ ಮೈಯೊಳಗಮ್ಮ                 ।।೩।।

ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ 
ಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕ್ರಷ್ಣ     ।।೪।।
****


ರಾಗ : ಯಮನ್ ಕಲ್ಯಾಣಿ   ತಾಳ : ಛಾಪು (raga, taala may differ in audio)

Krishna nee begane baaro
Begane baaro mukavannu toro||

Kaalaal landhige gejje niladha baavuli
Nilavarnane naatya vaaduta baaro||

Odiyalli Odigejje beralalli ongura
Koralalli haakida vajayantimaale||1||

Kaasi peetambara kaiyalli kolalu
Pushida shreegandha mayaolu gamma||2||

Taayige baayalli jagavannu torida
Jagadhodhaaraka namma udupi shree Krishna ||3||
***
rendered by
shrI Ananda rAo, srIrangam
to aid learning the dAsara pada for beginners


Lyrics:

rAga: yamunA kaLyANi
tALa: misra cApu

kRShNA nI bEgane bArO |
bEgane bArO mukhavanne tOrO ||

kAshi pItAmbara kaiyalli koLalu |
pUsida shrI gandha maiyoLagamma || kRShNA ... ||

uDiyalli uDigejje beraLalli u~Ngura | 
koraLoLu hAkida vaijayanti mAle || kRShNA ... ||

kAlAlandige gejje nIlada bAvuli |
nIla varNane nATya ADuta bArO || kRShNA ... ||

tAyige bAyalli jagavanne tOrida |
jagadOddhAraka namma uDupi shrI kRShNa || kRShNA ... ||
***

pallavi

krishna nee bEganE baarO

anupallavi

bEganE baarO mukhavannu tOrO
(krishna nee bEganE baarO)

caraNam 1

kaalaalandhugE gejje nIlada baavuli
nIlavarNane naaTya vaaduta baarO
(krishna nee bEganE baarO)

caraNam 2

Udiyalli udigejje beraLalli ungura
koraLalli haakida vaijayantiya maalE
(krishna nee bEganE baarO)

caraNam 3

kaashi peethambara kaiyalli koLalu
pUsida shreegandha mayyOLagamma!
(krishna nee bEganE baarO)

caraNam 4

taayige baayalli jagavannu torida
jagadhOddhaaraka namma uDupi shree krishna
(krishna nee bEganE baarO)
***

Meaning:
pallavi: krishna nee bEganE baarO - Krishna ! Come hither soon !

anupallavi: bEganE baarO mukavannu tOrO - Come hither soon! Show (me) your face!

caraNam 1: kaalaalandhigE gejje niladhabaavuli - Beautiful anklets adorn your feet! Sapphire bracelets (on your arms)!
nilavarNane naaTya maaduta baarO - "(Oh!)Blue coloured one.. (Please) come hither dancing !

caraNam 2: Odiyalli odigejje beraLalli ongura - Waistbands with bells adorn your waist! Ring(s) on your finger(s) !
koraLalli haakita vajayantimaalE - "The (divine)Vaijayanthi necklace garlands your neck !
caraNam 3: kaasi peeTambara kaiyalli koLalu - (Sacred)Saffron cloth from Kashi (covers you) ! (a) flute in your hand(s)!
pushita shreegandha mayallOLagamma! - Oh dear! Your body is anointed with sandal paste !
caraNam 4: taayige baayalli jagavannu torita - The one who showed his mother the universe in his mouth
jagadhOdhaaraka namma uDupi shree krishna - (that)Benefactor of the world (Is) our Udupi Shri Krishna !
Contributed by Jayaram Suryanarayana.
***

Other information: "Bhava darpana" by S. Jayaram Uparna.

Saint Vyasaraya reaches his devotional pinnacle in this song. There is hardly anyone who is not moved when he hears this song being rendered correctly. Here the Saint calls out to Krishna and implores him to come to him . He launches into a devotional trance where he sees Krishna at a distance. Krishna's immaculate dressing and exquisite beauty makes the Saint detail them in this evergreen song. The amalgamation of genuine Bhakti with touchingly simple composition, sets one thinking whether is Krishna who is decorated with the ornaments, or the other way around.

There is a more profound philosophical meaning to this song. The anklets are worn in India with a belief that the bells attached to them would create a sound which beckon good fortune and drive away demons. When the Saint describes Krishna, he allocates a first place to this ornament, thus requesting Krishna to ward off all the demons of ignorance in our heart and bestow all his divine mercy on us.

The next in line is the armlet. The armlet (popularly called as Baajuband in the northern parts of India), is an ornament in the upper portion of the arm. The Armlet is an ornament that restricts the free movement of the hand, it has a tight grasp and is a constant reminder of its presence. Ideologically, this ornament is considered to be a symbol of restraint and control, of what is called as 'SaMyama'. Hence, the Saint calls out to the Lord to grant the benign qualities of restraint and control, to his devotees. Not only does the Saint ask Krishna to come, but He also implores the Lord to come dancing ..... a symbol of pure, unadulterated joy.

WaistBands are worn mostly by the affluent, aristocratic families in India, and the mention of these here has profound significance. The Waistbands worn on children, apart from their other mundane practical purposes, is supposed to disenchant and protect the young one. Since Krishna's beauty is above all, it is as if the Saint is imploring the Lord to not forget to wear the waistband, so that the evil eye cast by his devotees on him (when they see His lotus like face), does not affect him...!

Rings have always been associated with the show of dedication all over the world ( be it the royal insignia, the Seal or even the wedding ring). The Saint implores Krishna to bless him with dedicated unflinching devotion, so that he may never stray from the path of Love towards the Supreme.

The Vyjayanthi Mala, a divine necklace born during the churning of the KsheeraSagara (Milk Ocean), is a sacred and potent ornament. It is said to bestow unrestricted victory to anyone who wears it (hence the name Vaijayanti -- Vijayee Kurvanti iti Vaijayanti ). The Saint describes the Lord wearing this ornament, so that the Love for the Lord (Bhakti) in the devotees heart always emerges victorious over the other emotions that ravage the human heart.

Kaashi is one of the oldest inhabited cities in the world, and for the Hindus, it is the sacred city of death. Every devout Hindu aspires to breath his last in this city for it is believed that one who does so attains salvation without doubt. Kashi, also called as Benares, is very famous for the rich golden silk cloth that is made there. The Saint remembers the City through its famous silk, imploring the Lord to bestow him with the ultimate goal of any living entity .. the remembrance of Krishna while passing away.

The Flute is a unique musical instrument. Utterly mellifluous and demystifyingly simplistic and practical, the flute is Krishna's favorite instrument. The flute not only soothes the humans listening to it, but even the beasts have been known to slow down, calm and be subdued at the sound of the Flute. Metaphorically speaking, Krishna's flute is remembered here to defeat the beasts in us and to congregate the saintly ( the cow has always been associated with a saintly nature, and Krishna's flute always calls the cows together).

After all the ornaments and instruments, the Saint directs his attention to the most revered of all beautifying agents - Sandal Paste. The Sandal tree is a unique tree. It gives itself up, and though it undergoes pain and torture when it is rubbed together vigorously, it endures it all and perfumes even the hand that caused it the suffering. The Sandal has always been a symbol of sacrifice and total submission. Devotees of the highest grade have been compared to the Sandalwood. Hence, by mentioning the aromatic Sandal paste here, the Saint cautions one towards the ideal of complete submission to and absolute dependency on, Krishna.

Lest the devotee take Krishna's love in jest, the Saint reminds him of the famous episode from Krishna's childhood when he shows the entire universe in his lotus like mouth to his startled mother. By this Krishna shows to the devotee that he is the be all and end all of everything. He is the originator, benefactor and ultimate destroyer of everything. The Devotee is cautioned that he should never take Bhakti lightly, for that may sound the death knell of his existence...and the pure devotee is spirited away into remembrance of the splendid world of Krishna Leela. A befitting end to a glorious song. Shri KrishNArpaNam astu. Some corrections from Harish.
***

ಕೃಷ್ಣ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೇ ತೋರೋ

ಹುಟ್ಟಿದೂ ಮಧುರೆಲಿ ಬೆಳೆದಿದ್ದು ಗೋಕುಲ
ಜಲಕ್ರಿ ಡೆಯಾಡಿದ್ದು ಯಮುನೆಯಾ ತೀರ

ಕಾಶಿ ಪಿತಾ೦ಬರ ಕೈಯಲಿ ಕೊಳಲು
ಪೂಸಿದ ಶ್ರೀಗಂಧ ಮೈಯಳಗಮ್ಮ

ಉಡಿಯಲಿ ಉಡಿಗೆಜ್ಜೆ ಬೆರಳಲಿ ಉ೦ಗುರ
ಕೊರಳಲಿ ಹಾಕಿದ ಹುಲಿಯುಗುರಮ್ಮ

ತಾಯಿಗೆ ಬಾಯಲಿ ಜಗವನ್ನೇ ತೋರಿದ
ಜಗದೊದ್ಧರಕ ನಮ್ಮ ಉಡುಪಿಯ ಶ್ರೀಕೃಷ್ಣ
****


vakhyana by ಡಾ ವಿಜಯೇಂದ್ರ ದೇಸಾಯಿ

ಜಗದೋದ್ಧಾರ 

ಕೃಷ್ಣಾ ನೀ ಬೇಗನೆ ಬಾರೋ ಮುಖವನ್ನೇ ತೋರೋ
ಕಾಶಿಪೀತಾಂಬರ  ಕೈಯಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಮ್ಮಾ
ಉಡಿಯಲಿ ಉಡಿಗೆಜ್ಜೆ ಬೆರಳಲಿ ಉಂಗುರ 
ಕೊರಳಲಿ ಹುಲಿಯುಗುರು
ತಾಯಿಗೆ ಬಾಯಿಯಲಿ ಜಗವ ತೋರಿದ
ಜಗದೋದ್ಧಾರ ಉಡುಪಿಯ ಶ್ರೀ ಕೃಷ್ಣ.||

ಜ್ಞಾನಿವರೇಣ್ಯ ಯತಿವರೇಣ್ಯ ವ್ಯಾಸರಾಜರ ಕೃತಿ.
ಯಶೋಧೆ ಬಾಲಕೃಷ್ಣನಿಗೆ ಸೊಂಟಕ್ಕೆ ಗೆಜ್ಜೆ ಉಡದಾರ ಕಟ್ಟಿದಳು.
ಕಾಶಿಪೀತಾಂಬರ ಉಡಿಸಿದಳು.
ಕೈಯಲ್ಲಿ ಕೊಳಲು ಕೊಟ್ಟಳು.
ಕೃಷ್ಣನ ಮೈಗೆ ಶ್ರೀಗಂಧ ಪೂಸಿದಳು.
ಬೆರಳಿಗೆ ಉಂಗುರ ತೊಡಿಸಿದಳು.
ಕೊರಳಲ್ಲಿ ಹುಲಿಯುಗುರು ಹಾಕಿದಳು.
ಭೂತಭಯ, ಭೂತ ಚೇಷ್ಟೆ ಆಗಬಾರದು ಎಂದು. ಆತನಾದರೋ ಸಕಲಭೂತನಾಥ. ಜಗದ ಭೂತ ಬಿಡಿಸುವವ.
ಇಷ್ಟೆಲ್ಲ ಸೇವೆ ಮಾಡಿದ ತಾಯಿಗೆ ಬಾಯಿಯಲ್ಲಿ ಬ್ರಹ್ಮಾಂಡವನ್ನೇತೋರಿದ.
ವಿಶ್ವ ರೂಪ ತೋರಿದ ಜಗದೋದ್ಧಾರಕನಾದ ಕೃಷ್ಣ.
ಇಂಥ ಉಡುಪಿ ಶ್ರೀಕೃಷ್ಣನೇ ಬೇಗನೆ ಮುಖದರ್ಶನ ಕೊಟ್ಟು ಅನುಗ್ರಹಿಸು ಎಂಬದು ರಾಜರ ಪ್ರಾರ್ಥನೆ.
ಇದು ಒಂದು ಸರಳ ಅರ್ಥ.

ಇದರಲ್ಲಿ ವ್ಯಾಸರಾಜರು ಅಧ್ಯಾತ್ಮಿಕ ಅಡಗಿಸಿದ್ದಾರೆ. ಹರಿ ಮಹಾತ್ಮೆ ಸಂದೇಶಿಸಿದ್ದಾರೆ. ಅದನ್ನು ತಿಳಿಯುವ ಜಿಜ್ಞಾಸೆ. 
ಕೃಷ್ಣಾ ಮುಖವನ್ನೇ ತೋರು ಎಂದರು. 
ಏನು ಸೂಚನೆ? 
ತೋರಿದರೆ ಅವನ ಮುಖ ನೋಡುವ ಯೋಗ್ಯತೆ ನಮಗೆಲ್ಲಿ? 
ಅದಕ್ಕಾಗಿ -
ವರದೋನ್ಮುಖನಾಗು. ಪ್ರಸನ್ನ ಮುಖನಾಗಿ ನಮ್ಮನ್ನು ಅನುಗ್ರಹಿಸು ಎಂಬ ಪ್ರಾರ್ಥನೆ.
ಮುಖ ಎಂದರೆ ಮುಖ್ಯ. ಮುಖಿಯಾ ಎಂದರೆ ನೇತಾ. ಮುಖ ದೇಹಕ್ಕೆ ಮುಖ್ಯ. ಮುಖ ದೇಹದ ನೇತಾನೂ ಹೌದು.
ಮುಖದ ಮುಖ್ಯತ್ವ ನೋಡಿ. --
ಪಂಚ ಜ್ಞಾನೇಂದ್ರಿಯಗಳು ಇಲ್ಲಿವೆ.
ಕಿವಿಗಳು - 
ಶ್ರವಣ ಮನಕಾನಂದವೀವುದು. ಸದಾ ಹರಿಮಹಾತ್ಮೆ ಕೇಳುವದು.
ಕಣ್ಣು - 
ಹರಿಮೂರ್ತಿ ನೋಡಲು. ಅಪ್ರತಿಮ ಪ್ರತಿಮೆ ವೀಕ್ಷಿಸಲು.
ಅಧ್ಯಯನ. ಸಕಲ ಶಾಸ್ತ್ರ ಓದಿ ತಿಳಿಯಲು.
ನಾಸಿಕ - 
ಹರಿ ನಿರ್ಮಾಲ್ಯದ ಗಂಧ ಗ್ರಹಿಸಲು.
ವಿದ್ಯೆ ಗಂಧದಿಂದ ಸೂಚಿತ. ಹೇಗೆ? 
ಅವನಿಗೆ ವಿದ್ಯೆಯ ಗಂಧವೇ ಇಲ್ಲ ಎನ್ನುತ್ತೇವೆ. ಹೀಗೆ ಗಂಧ ಎಂದರೆ ವಿದ್ಯೆ.
ವಿದ್ಯೆ ಎಂದರೆ ಪರವಿದ್ಯೆ. ಪರಮಾತ್ಮನ ಮಹಾತ್ಮೆ ತಿಳಿಯುವದು.
ನಾಲಿಗೆ -
ಹರಿನೈವೇದ್ಯದ ರುಚಿ ಗ್ರಹಣ. 
ರುಚಿಯೇ ರಸ. ರಸವೇ ಸಾರ.
ಸಾರರಸವೇ ಪರಮಾತ್ಮ.
ಪರಮಾತ್ಮನ ಸಾರರಸವೇ ಆತನ ಮಹಾತ್ಮೆ.
ಜ್ಞಾನವೆಂಬ   ಹರಿ ನೈವೇದ್ಯದ ರಸಗ್ರಹಿಸಿ ರಸನೇಂದ್ರಿಯ ನಮಗೆ ಕೊಡಲಿ.
ಬಾಯಿ -
ಮಾತುಗಾರಿಕೆ. 
 ಶಾಸ್ತ್ರ ಕೇಳಿದ್ದನ್ನು ಓದು. 
ಓದಿದ್ದನ್ನು ತಿಳಿ. 
ತಿಳಿದಿದ್ದನ್ನು  ತಿಳಿಸು.  - ಅಧ್ಯಾಪನ.
ವದನದಿ ಹರಿ ಭಜನೆ ಮಾಡೋ ನಿರಂತರಾ.
ಹೀಗೆ ಹರಿಮಹಾತ್ಮೆ ತಿಳಿಯುವ ತಿಳಿಸುವ ಇಂದ್ರಿಯಗಳು ಮುಖದಲ್ಲಿವೆ. ಅಷ್ಟೇ ಅಲ್ಲ,
ಈ ಜ್ಞಾನವನ್ನು ಮನನ ಮಾಡಿ ಇದಮಿತ್ಥಂ ಎಂದು ನಿಶ್ಚಯಿಸುವ 
ಮನ ಮತ್ತು ಬುದ್ಧಿಗೂ ಶಿರವೇ ಆಶ್ರಯ.
ಇಷ್ಟೆಲ್ಲ ಕೇಂದ್ರ ಸ್ಥಾನಗಳು ಮುಖದಲ್ಲಿವೆ.
ಅದಕ್ಕಾಗಿ ಮುಖ ಮುಖ್ಯ.
ಅದಕ್ಕಾಗಿ ರಾಜರು ಮುಖವ ತೋರೋ. ವರದೋನ್ಮುಖನಾಗು ಎಂದು ಪ್ರಾರ್ಥಿಸಿ ದ್ದಾರೆ.
ಮತ್ತೆ ಬೇಗನೇ ಮುಖ ತೋರು ಎಂದಿದ್ದಾರೆ. ಯಾಕೆ?
ಸ್ವಾಮಿ ಶ್ರೀ ಕೃಷ್ಣಾ, ಈಗಾಗಲೇ ವಿಳಂಬ ವಾಗಿದೆ. ಎಂಬತ್ತನಾಲ್ಕು ಲಕ್ಷ ಯೋನಿ ದಾಟಿ ಬಂದಿದ್ದಾನೆ ಈ ಜೀವ. ದಣಿದಿದ್ದಾನೆ. ಬಳಲಿದ್ದಾನೆ. ಹಿರಿದಾದ ಮಾನವ ಜನ್ಮ ಸಿಕ್ಕಿದೆ. ಅಪರೂಪದ ವೈಷ್ಣವ ದೀಕ್ಷೆ.
ಸಾಧನೆಗೆ ಮತ್ತೇನು ಬೇಕು? ಇನ್ನೇಕೆ ವಿಳಂಬ? 
ಸ್ವಾಮಿ, ಬೇಗನೇ ಅನುಗ್ರಾಹಕ ದರ್ಶನ ಕೊಡು. ಎಂದು ರಾಜರ ಪ್ರಾರ್ಥನೆ.
ಇನ್ನು ಮುಂದಿನ ಸಾಲು.
ಕಾಶಿಪೀತಾಂಬರ, ಕೈಯಲ್ಲಿ ಕೊಳಲು, ಪೂಸಿದ ಶ್ರೀ ಗಂಧ ಮೈಯೊಳು.
ಕಾಶಿ ಪೀತಾಂಬರ -
ಶ್ರೇಷ್ಠ ಪೀತ ಅಂಬರ -
ಪೀತ ಎಂದರೆ ಹಳದಿಬಣ್ಣ - ಬಂಗಾರದ ವರ್ಣ. - ಸುವರ್ಣ.
ಅಂಬರ = ಆಕಾಶ, ಮತ್ತೆ ಬಟ್ಟೆ ಆಚ್ಛಾದನ.
ಸುವರ್ಣ = ಸು + ವರ್ಣ
ವರ್ಣ ಅಂದರೆ ಅಕ್ಷರ. 
ಸು ಎಂದರೆ ಉತ್ತಮ ಅಂದರೆ ದೋಷವಿಲ್ಲದ
ದೋಷವಿಲ್ಲದ ಅಕ್ಷರಗಳ ಶಬ್ದ ರಾಶಿಯೇ
ವೇದ.
ಸುವರ್ಣ ಶಬ್ದಗಳಿಗೆ ಆಕಾಶವೇ ಆಶ್ರಯ. 
ವೇದಗಳಿಗೆ ಆಶ್ರಯ ಶ್ರೀ ಕೃಷ್ಣ.
ಆಶ್ರಯತ್ವೇನ ಸರ್ವವೇದ ಪ್ರತಿಪಾದ್ಯ ಕೃಷ್ಣ.
ಮತ್ತೆ ಪೀತಾಂಬರ ಕೃಷ್ಣನನ್ನು ಆಚ್ಛಾದಿಸಿದೆ.
ಈ ರೀತಿಯೂ ಸರ್ವವೇದ ಕೃಷ್ಣನ ಸುತ್ತ.
'ವೇದೈಶ್ಚ ಸರ್ವೈಹಿ ಅಹಮೇವ ವೇದ್ಯಃ' -
ಗೀತೆಯ ಮಾತು.
ಕೈಯಲಿ ಕೊಳಲು -
ಕೊಳಲಿನಲ್ಲಿ ಲಕ್ಷ್ಮೀ ಸಾನಿಧ್ಯ. ವೇಣು ನಾದ. ನಾದ‌ಎಂದರೆ ಶಬ್ದ. ಶಬ್ದರಾಶಿಯೇ ವೇದ.
ಲಕ್ಷ್ಮಿಯೇ ವೇದಾಭಿಮಾನಿನಿ.
ಕೊಳಲಿನದನಿ - ವೇದಗಾನ - ಕೃಷ್ಣನ 
ಸುತ್ತ ಮುತ್ತವೇ ಸುತ್ತುವದು.
ತಥ್ಯ ಸರ್ವವೇದ  ಮಧುರ ಮಧುರವಾಗಿ  ವೇಣುನಾದದಂತೆ ಕೃಷ್ಣನನ್ನು ಹಾಡಿ ಹೊಗಳುವದು.
ಪೂಸಿದ ಶ್ರೀಗಂಧ -
ಕೃಷ್ಣನ ಮೈ ತುಂಬ ಮಹಾತ್ಮೆಯ ಶ್ರೀ ಗಂಧ.
ಈ ವಿದ್ಯೆಯಗಂಧ ನಮಗೆ ದೊರೆಯಲಿ.
ಉಡಿಯಲ್ಲಿ ಉಡಿಗೆಜ್ಜೆ -
ಯಶೋಧೆ ಕೃಷ್ಣನ ಸೊಂಟಕ್ಕೆ ಗೆಜ್ಜೆ ಉಡದಾರ ಕಟ್ಟಿದಳು.
ಅವಳು ದಾಮ - ಹಗ್ಗದಿಂದಲೂ ಕೃಷ್ಣನನ್ನು ಕಟ್ಟಲು ಪ್ರಯತ್ನಿಸಿದ್ದಳು. ಎರಡು, ಮೂರು ಬೆರಳಿನಷ್ಟು  ಕಡಿಮೆ ಬಿತ್ತು. ಜ್ಞಾನ, ಭಕ್ತಿ, ವಿರಕ್ತಿ ಬೇಕು ತನ್ನನ್ನು ಕಟ್ಟಲು ಎಂದು ತೋರಿದ. ಕೃಷ್ಣಾವತಾರದ ಸ್ಮರಣೆ.
ಬೆರಳಲ್ಲಿ ಉಂಗುರ -
ಕೈಬೆರಳಲ್ಲಿ  ಗಿರಿಧರ. ಬೆರಳತುದಿಯಲ್ಲಿ ಗೋವರ್ಧನಗಿರಿ ಪೊತ್ತ. ಗೋಕುಲ ಜನರ ರಕ್ಷಿಸಿದ. ಕೃಷ್ಣ ಮಹಾತ್ಮೆ ಸ್ಮರಣೆ. 
ಬೆರಳಲ್ಲಿ ಉಂಗುರ - ಚಕ್ರ. - ಸುದರ್ಶನ ಚಕ್ರ.
ಚಕ್ರದಿ ನಕ್ರವ ತರೆದ. ಗಜರಾಜನ ರಕ್ಷಿಸಿದ.
ಶಿಶುಪಾಲ, ದಂತವಕ್ರರಾದಿ ದೈತ್ಯರ ಸಂಹಾರ.
ದುಷ್ಟ ಶಿಕ್ಷೆ,  ಶಿಷ್ಟ ರಕ್ಷೆ.
ಕೊರಳಲ್ಲಿ ಹುಲಿಉಗುರು -
ಹುಲಿಉಗುರು ಅಭಯದ ಸಂಕೇತ. ಮಕ್ಕಳಿಗೆ ಹಾಕುತ್ತಾರೆ.
ಜಗದ ಜನ ಕೃಷ್ಣನ ಮಕ್ಕಳು.  
ಕೃಷ್ಣ ಅಭಯ ಕೊಟ್ಟ.
'ನಾಸತೋವಿದ್ಯತೆಭಾವಃ ನಾಭಾವೋ ವಿದ್ಯತೆ ಸತಃ' ಗೀತೆಯ ಮಾತು.
'ಸತ್ಯಕ್ಕೆ ಧರ್ಮಕ್ಕೆ ಸುಖ, 
ಸುಳ್ಲಿಗೆ ಅಧರ್ಮಕ್ಕೆ ದುಃಖ'
ಕೃಷ್ಣ ಭಯ ಪರಿಹರಿಸಿದ.
ಯಾತರ ಭಯ? - ಭವಭಯ.
ಕೃಷ್ಣ ಭವಭಯಹರ.
ತಾಯಿಗೆ ಬಾಯಲ್ಲಿ ಜಗವ ತೋರಿದ -
ಮಗನ ಸೇವೆ ಎಷ್ಟೆಲ್ಲ ಮಾಡಿದಳು ಯಶೋಧೆ! 
ಒಬ್ಬರ ಭಿಡೆ ಬೇಡದ ಕೃಷ್ಣ. 
ಅಲ್ಪಕ್ಕೆ ಅನಂತ ಕೊಡುವವ.
ಕೃಷ್ಣ ಮಣ್ಣು ತಿಂದ - ಬಾಲಕೃಷ್ಣನ ಗೆಳೆಯರ ತಕರಾರು ಯಶೋಧಗೆ.
'ಬಾಯಿ ತೆಗೆ' ಯಶೋಧೆ.
ಕೃಷ್ಣ ಬಾಯಿ ತೆರೆದ.
ಯಶೋಧೆ ನೋಡುತ್ತಾಳೆ -
ಪುಟ್ಟ ಬಾಯಲ್ಲಿ ಬ್ರಹದ್ ಬ್ರಹ್ಮಾಂಡ.
ಅಲ್ಲಿ ಹದಿನಾಲ್ಕು ಲೋಕಗಳು. 
ಮತ್ತೆ ಭೂಲೋಕ ಕಂಡಳು.
ಅಲ್ಲಿ ಗೋಕುಲ ಕಂಡಳು. 
ಗೋಕುಲದಲ್ಲಿ ತನ್ನ ಮನೆ.
ಮನೆಯಲ್ಲಿ ತಾನು.
ತನ್ನ ಎದುರು ಬಾಯಿತೆರೆದ ಬಾಲಕೃಷ್ಣ.
ದಿಗ್ಭ್ರಾಂತಳಾದಳು. ಮೂಕವಿಸ್ಮಿತೆ. 
 ಮೈ ಬೆವರಿತು. ಕಂಪನ. ಗರ ಬಡೆದಂತೆ ಯಶೋಧೆ.
ಸಾಕೆಂದ ಕೃಷ್ಣ. ಬಾಯಿ ಮುಚ್ಚಿದ.
'ಮಮ ಮಾಯಾ ದುರತ್ಯಯಾ'
ಮತ್ತೆ ಕೃಷ್ಣನ ಮೋಹ. ತನ್ನ ಮಗನೆಂದು ತಿಳಿದಳು‌. ಆಡಸಿದಳು ಯಶೋಧೆ ಜಗದೋದ್ಧಾರನ!
.ಜಗದೋದ್ಧಾರ - ಯಾಕೆ?
ಶ್ರೀ ಕೃಷ್ಣನೇ ಪರಮಾತ್ಮ. ಆತ ತನ್ನ ಸಕಲ ಅವತಾರಗಳಲ್ಲೆಲ್ಲ ಜಗದ ಉದ್ಧಾರವನ್ನೇ ಮಾಡಿದ್ದಾನೆ.
ದಶಾವತಾರ - 
ಮತ್ಸ್ಯನಾದ. ದೈತ್ಯನ ಸಂಹರಿಸಿದ. 
ಕದ್ದ ವೇದವ ಮರಳಿ ತಂದ.
ಕೂರ್ಮನಾಗಿ ಮಂದರಧರ. ಸಮುದ್ರ ಮಂಥನ. ಅಮೃತ ಸಿಂಚನ.
ವರಾಹನಾದ. ದೊಡ್ಡ ದೈತ್ಯನ ಕೊಂದ. 
ಭೂಮಿಯ ತಂದ.
ವಾಮನ - ಬಲಿಯ ಪಾತಾಳಕ್ಕೆ ತಳ್ಳಿದ.
ದೇವತೆಗಳ ಉದ್ಧಾರ.
ಪರಶು ಹಿಡಿದ. ಪರಶುರಾಮನಾದ. 
ದುಷ್ಟ ಕ್ಷತ್ರಿಯ ರಾಜರ ಸಂಹಾರ. ಜಗದ ಉದ್ಧಾರ 
ಶ್ರೀ ರಾಮನಾದ. ರಾವಣಾದಿ ದೈತ್ಯರ ಸಂಹಾರ. ಲೋಕೋದ್ಧಾರ.
ಕಂಸ, ಜರಾಸಂಧ, ಶಿಶುಪಾಲ, 
ದುರ್ಯೋ ಧನಾದಿ ಕೌರವರ ನಾಶ. ಅಧರ್ಮ ನಿವಾರಣೆ. ಧರ್ಮ ಸ್ಥಾಪನೆ.
ಜಗದ ಉದ್ಧಾರ ಮಾಡಿದ. ಜಗದ್ ವಂದ್ಯ ಕೃಷ್ಣನಾದ.
ಇಂತೆಯೇ ಸಕಲ ಅವತಾರಗಳಲ್ಲಿ ಮಾಡಿದ್ದು
ಜಗದ ಉದ್ಧಾರ. ಅದಕ್ಕಾಗಿ ಜಗದೋದ್ಧಾರ.
ಉಡುಪಿಯ ಶ್ರೀ ಕೃಷ್ಣನೇ - ಯಾಕೆ?
ಉಡು + ಪ = ಉಡುರಾಟ್ = ನಕ್ಷತ್ರಗಳ ರಾಜ - ಎಲ್ಲರಿಗಿಂತ ಹೆಚ್ಚಿನ ಪ್ರಕಾಶದ ಚಂದ್ರ.
ಹಾಗೆಯೇ  ದೇವತಾನಕ್ಷತ್ರಗಳ ರಾಜ, ಸರ್ವರ ಒಡೆಯ, ಸರ್ವೋತ್ತಮ ಶ್ರೀಕೃಷ್ಣ. ಅದಕ್ಕಾಗಿ ಉಡುಪಿ.
- ಮತ್ತೆ
ಕೃಷ್ಣ ಹುಟ್ಟಿದ್ದೇ ಉಡುಪ -  ಚಂದ್ರ ವಂಶ. ಅದಕ್ಕಾಗಿ ಉಡುಪಿ ಶ್ರೀ ಕೃಷ್ಣ.
-ಅಷ್ಟೇ ಅಲ್ಲ ಮತ್ತೆ
ಜೀವೋತ್ತಮರಾದ ಶ್ರೀ ಮಧ್ವಾಚಾರ್ಯರು ಬೇಡಿ ಬಯಸಿ ಪಡೆದ ಸರ್ವೋತ್ತಮ ಕೃಷ್ಣನ ಮೂರ್ತಿ.ಪ್ರತಿಷ್ಠಾಪಿಸಿ ಆರಾಧಿಸಿದ ಮೂರ್ತಿ. ಆಚಾರ್ಯರ ಪ್ರೀತಿಯ ಒಡೆಯ ಕೃಷ್ಣ.
ಕೃಷ್ಣನ ಪ್ರೀತಿಯ ಭಕ್ತ ಆಚಾರ್ಯರು.
ಅದಕ್ಕಾಗಿ ಕೃಷ್ಣನ ವಿಶೇಷ ಸಾನಿಧ್ಯ.
ಆರಾಧಿಸುವ ಆಚಾರ್ಯರ ಸದಾ ಸಾನಿಧ್ಯ.
ಇಂತಿರಲು ಸದವಕಾಶ ಬಿಟ್ಟಾರೆಯೇ ಶ್ರೀ ವ್ಯಾಸರಾಜತೀರ್ಥರು?
ಅದಕ್ಕಾಗಿ ಉಡುಪಿ ಶ್ರೀ ಕಷ್ಣ.
ತಥ್ಯ -
ಮೊದಲ ಸಾಲು ಮುಖದ ಮುಖ್ಯತ್ವ.
ಎರಡನೇಯದು 'ಸರ್ವವೇದ ಪ್ರತಿಪಾದ್ಯ ಶ್ರೀಕೃಷ್ಣ'
ಮೂರನೇಯ ಸಾಲು - ಕೃಷ್ಣಾವತಾರ ಸ್ಮರಣೆ.
ನಾಲ್ಕನೇ ಸಾಲು‌-
ಪುಟ್ಟ ಬಾಯಿಯಲ್ಲಿ ಬೃಹದ್ ಬ್ರಹ್ಮಾಂಡ.
'ಅಣೋರಣೀಯಾನ ಮಹತೋ ಮಹೀಯಾನ್'
- ಹದಿನಾಲ್ಕು ಲೋಕ ಸರ್ವತ್ರ ವ್ಯಾಪ್ತತ್ವ.
-ಇಂಥ ಸಾಮರ್ಥ್ಯದ ಸರ್ವೋತ್ತಮ ಶ್ರೀ ಕೃಷ್ಣ.
-ದಶಾವತಾರಗಳಲ್ಲಿ ಸರ್ವಾವತಾರಗಳಲ್ಲಿ ಜಗದೋದ್ಧಾರ.
-ಅಪ್ಯಾಯಮಾನ ಉಡುಪಿ ಶ್ರೀಕೃಷ್ಣ.
ಇಂತು ಕೃತಿ ಕಿಂಚಿತ್ ಅರ್ಥೈಸುವ ಪ್ರಯತ್ನ.

ಡಾ ವಿಜಯೇಂದ್ರ ದೇಸಾಯಿ.
ಶ್ರೀ ವ್ಯಾಸರಾಜರ ಅಂತರ್ಗತ 
ಮುಖ್ಯ ಪ್ರಾಣಾಂತರ್ಗತ 
ಶ್ರೀ ಕೃಷ್ಣಾರ್ಪಣಮಸ್ತು.🙏🙏
**

No comments:

Post a Comment