RESTART MOBILE IF AUDIO IS NOT PLAYING
CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama/ CLICK-> HOME
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||
ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ
ಕಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||
ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೋಭಿತನೆ ಶ್ರೀರಂಗಶಾಯಿ ||
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||
ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||
***
ಎಷ್ಟು ದೂರವೋ ಎನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||
ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ
ಕಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||
ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೋಭಿತನೆ ಶ್ರೀರಂಗಶಾಯಿ ||
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||
ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||
***
Pallavi
Iṣṭu dina ī vaikuṇṭha
Eṣṭu dūravō enutalidde
Dṛṣṭiyindali nānu kaṇḍe
Sṛṣṭigīśanē Srīraṅgaśāyi
Charana 1
Eṇṭu ēḷanu kaḷedudarinda
Baṇṭaraivara tuḷidudarinda
Kaṇṭakanobbana taridudarinda
Baṇṭanāgi bandanō Srīraṅgaśāyi
Charana 2
Vana upavanagaḷinda
Ghana sarōvaragaḷinda
Kanaka gōpuragaḷinda
Ghanasōbhitane Srīraṅgaśāyi
Charana 3
Vajra vaiḍūryada tolegaḷa kaṇḍe
Prajvalipa mahādvārava kaṇḍe
Nirjarādi munigaḷa kaṇḍe
Durjanāntakane Srīraṅgaśāyi
Charana 4
Rambhe ūrvaśiyara mēḷava kaṇḍe
Tumburu muni nāradaranu kaṇḍe
Ambujōdbhava rudrara kaṇḍe
Śambarāripitane Srīraṅgaśāyi
Charana 5
Nāgaśayanana mūrutī kaṇḍe
Bhōgibhūṣaṇa śivananu kaṇḍe
Bhāgavatara sammēḷava kaṇḍe
Kāgineleyādikēśava Srīraṅgaśāyi
***
Pronunciation Guide
Vowels: "a" (cup), "ā" (father), "i" (pin), "ī" (see), "u" (put), "ū" (boot), "e" (bed), "o" (go).
Consonants: 'ṭ/ḍ' are retroflex (tongue to roof of mouth); 'ṅ' is nasal "ng" as in "song".
Soft Sounds: 'ś' is a soft "sh" sound; 'j' is as in "joy"; 'g' is always hard as in "go".
Rhythm: Recite with a tone of wonder, revelation, and deep devotional joy.
Aspiration: Ensure clear 'bh', 'dh', 'gh', 'ph' for the correct phonetic weight.
***
ಸಾರಾಂಶ
ಈ ಕೃತಿಯಲ್ಲಿ ಕನಕದಾಸರು ಶ್ರೀರಂಗಕ್ಷೇತ್ರವೇ ಸ್ವತಃ ವೈಕುಂಠ ಎಂದು ಬಣ್ಣಿಸಿದ್ದಾರೆ. ವೈಕುಂಠವು ಎಲ್ಲೋ ದೂರದಲ್ಲಿದೆ ಎಂದುಕೊಂಡಿದ್ದ ತನಗೆ, ಶ್ರೀರಂಗನಾಥನ ಸನ್ನಿಧಿಯಲ್ಲಿ ಅಂತಹ ದಿವ್ಯ ವೈಭವವು ಕಣ್ಣೆದುರೇ ಕಂಡುಬಂದಿದೆ ಎಂದು ಸಂತಸಪಡುತ್ತಾರೆ. ದೈವಿಕ ಲೋಕದ ಸಕಲ ಐಶ್ವರ್ಯಗಳು, ದೇವಾನುದೇವತೆಗಳು, ಮುನಿಗಳು ಮತ್ತು ಭಕ್ತರ ಸಮ್ಮೇಳನವನ್ನು ಶ್ರೀರಂಗದಲ್ಲಿ ದರ್ಶಿಸಿ, ಆ ಪರಮಾತ್ಮನನ್ನೇ ಸಾಕ್ಷಾತ್ಕಾರ ಮಾಡಿಕೊಂಡ ಕೃತಾರ್ಥತೆಯನ್ನು ಈ ಹಾಡು ವ್ಯಕ್ತಪಡಿಸುತ್ತದೆ.
ಪದ್ಯದ ಅರ್ಥ (ಕನ್ನಡ)
ಪಲ್ಲವಿ:
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ |
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||
ಅರ್ಥ: ವೈಕುಂಠವು ಎಲ್ಲೋ ದೂರದಲ್ಲಿದೆ ಎಂದು ಅಂದುಕೊಂಡಿದ್ದೆ, ಆದರೆ ಇಂದು ನನ್ನ ಕಣ್ಣಾರೆ ಶ್ರೀರಂಗ ಕ್ಷೇತ್ರದಲ್ಲಿ ಅದನ್ನು ಕಂಡೆ. ಸೃಷ್ಟಿಕರ್ತನಾದ ಆ ಭಗವಂತನೇ ಶ್ರೀರಂಗಶಾಯಿಯಾಗಿ ಇಲ್ಲಿ ನೆಲೆಸಿದ್ದಾನೆ.
ಚರಣ 1:
ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ |
ಕಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||
ಅರ್ಥ: ಎಂಟು ಪ್ರಕೃತಿಗಳು ಮತ್ತು ಏಳು ಲೋಕಗಳನ್ನು ದಾಟಿ, ಐವರು ಬಂಟರಾದ (ಕಾಮ, ಕ್ರೋಧ, ಲೋಭ, ಮೋಹ, ಮದ) ಅರಿಷಡ್ವರ್ಗಗಳನ್ನು ಗೆದ್ದು, ಕಂಟಕನಾದ ಅಹಂಕಾರವನ್ನು ಅಳಿಸಿದ ಭಕ್ತನಿಗೆ ಶ್ರೀರಂಗಶಾಯಿ ಒಲಿಯುತ್ತಾನೆ.
ಚರಣ 2:
ವನ ಉಪವನಗಳಿಂದ
ಘನ ಸರೋವರಗಳಿಂದ |
ಕನಕ ಗೋಪುರಗಳಿಂದ
ಘನಶೋಭಿತನೆ ಶ್ರೀರಂಗಶಾಯಿ ||
ಅರ್ಥ: ಸುಂದರವಾದ ವನಗಳು, ಉಪವನಗಳು, ವಿಶಾಲವಾದ ಸರೋವರಗಳು ಮತ್ತು ಚಿನ್ನದ ಗೋಪುರಗಳಿಂದ ಶೋಭಿಸುತ್ತಿರುವ ಶ್ರೀರಂಗಕ್ಷೇತ್ರವು ಅತ್ಯಂತ ವೈಭವೋಪೇತವಾಗಿದೆ.
ಚರಣ 3:
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ |
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||
ಅರ್ಥ: ವಜ್ರ ವೈಢೂರ್ಯಗಳಿಂದ ಕೂಡಿದ ದಿವ್ಯ ಮಂಟಪಗಳು, ಪ್ರಜ್ವಲಿಸುವ ಮಹಾದ್ವಾರಗಳು ಮತ್ತು ದೇವತೆಗಳು ಹಾಗೂ ಮುನಿಗಳನ್ನು ಶ್ರೀರಂಗದಲ್ಲಿ ಕಂಡೆ. ದುಷ್ಟರನ್ನು ಸಂಹರಿಸುವ ಶ್ರೀರಂಗಶಾಯಿ ನೀನು ಅಪ್ರತಿಮ.
ಚರಣ 4:
ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ |
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||
ಅರ್ಥ: ರಂಭೆ, ಊರ್ವಶಿಯರ ನೃತ್ಯ, ತುಂಬುರು-ನಾರದರ ಗಾನ, ಬ್ರಹ್ಮ ಮತ್ತು ಶಿವನ ಸಾನ್ನಿಧ್ಯವನ್ನು ಕಂಡೆ. ಅಂತಹ ಮಹಿಮಾನ್ವಿತ ಶ್ರೀರಂಗಶಾಯಿ ನೀನು.
ಚರಣ 5:
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ |
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||
ಅರ್ಥ: ನಾಗಶಯನನಾದ ಶ್ರೀರಂಗನಾಥನ ದಿವ್ಯಮೂರ್ತಿ, ಅವನ ಭಕ್ತನಾದ ಶಿವ ಮತ್ತು ಭಾಗವತರ ಸಮೂಹವನ್ನು ಕಂಡೆ. ಕಾಗಿನೆಲೆಯ ಆದಿಕೇಶವನಾದ ಶ್ರೀರಂಗಶಾಯಿಯೇ ನೀನು.
***
Summary
In this composition, Kanaka Dasa describes how he realized that Srirangam is Vaikuntha itself. He had always believed that Vaikuntha was a distant place, but seeing the grandeur of Srirangam, he acknowledges that the Supreme Lord resides there. He vividly portrays the divine architecture, the presence of celestial beings, sages, and the assembly of devotees, concluding that the Lord he worships as Adikeshava of Kaginele is none other than the Lord of Srirangam.
Meaning Stanza by Stanza (English)
Pallavi:
Iṣṭu dina ī vaikuṇṭha
Eṣṭu dūravō enutalidde |
Dṛṣṭiyindali nānu kaṇḍe
Sṛṣṭigīśanē Srīraṅgaśāyi ||
Meaning: For so long, I wondered how far away Vaikuntha was. Today, I have seen it with my own eyes—the Lord of Creation Himself resides here as Srirangashayi.
Charana 1:
Eṇṭu ēḷanu kaḷedudarinda
Baṇṭaraivara tuḷidudarinda |
Kaṇṭakanobbana taridudarinda
Baṇṭanāgi bandanō Srīraṅgaśāyi ||
Meaning: By transcending the eight elements and seven worlds, conquering the five senses, and destroying the thorn of ego, the Lord comes to the devotee as Srirangashayi.
Charana 2:
Vana upavanagaḷinda
Ghana sarōvaragaḷinda |
Kanaka gōpuragaḷinda
Ghanasōbhitane Srīraṅgaśāyi ||
Meaning: Oh Srirangashayi, You are magnificently adorned with lush forests, gardens, deep lakes, and golden gopurams (towers).
Charana 3:
Vajra vaiḍūryada tolegaḷa kaṇḍe
Prajvalipa mahādvārava kaṇḍe |
Nirjarādi munigaḷa kaṇḍe
Durjanāntakane Srīraṅgaśāyi ||
Meaning: I saw the diamond and gem-studded beams, the resplendent grand entrance, and the celestial beings and sages. Oh destroyer of the wicked, You are truly Srirangashayi.
Charana 4:
Rambhe ūrvaśiyara mēḷava kaṇḍe
Tumburu muni nāradaranu kaṇḍe |
Ambujōdbhava rudrara kaṇḍe
Śambarāripitane Srīraṅgaśāyi ||
Meaning: I witnessed the gathering of Rambha and Urvashi, heard Tumburu and Narada, and saw Brahma and Rudra. Oh Father of Manmatha, You are Srirangashayi.
Charana 5:
Nāgaśayanana mūrutī kaṇḍe
Bhōgibhūṣaṇa śivananu kaṇḍe |
Bhāgavatara sammēḷava kaṇḍe
Kāgineleyādikēśava Srīraṅgaśāyi ||
Meaning: I beheld the idol of the Lord reclining on the serpent, I saw Lord Shiva, and I witnessed the gathering of Your devotees. Oh Adikeshava of Kaginele, You are Srirangashayi!
***
iShTu dina I vaikuMTha
eShTu dUravo ennutalidde
dRuShTiyiMdali naanu kaMDe
sRuShtigIshane shrIraMgashaayi ||pa||
eMTu ELanu kaLedudariMde
baMTaraivara tuLidudariMde
kaMTakanobbana taridudariMde
baMTanaagi baMdeno shrIraMgashaayi ||2||
vana upavanagaLiMda
ghana sarOvaragaLiMda
kanaka gOpuragaLiMda
ghanashobhitane shrIraMgashaayi ||3||
vajra vaiDUryada tolegaLa kaMDe
prajvalipa mahaadwaarava kaMDe
nirjaraadi munigaLa kaMDe
durjanaaMtakane shrIraMgashaayi ||3||
raMbhe Urvashiyara mELava kaMDe
tuMburu muni naaradaranu kaMDe
aMbujOdbhava rudrara kaMDe
shaMbaraaripitane raMgashaayi ||4||
naagashayanana mUruti kaMDe
bhOgibhUShaNa shivananu kaMDe
bhaagavatara sammELava kaMDe
kaagineleyaadikEshava shrIraMgashaayi ||5||
***
Ishtu dina I vaikuntha eshtu duravo ennutalidde
Drushtiyindali naanu kande srushtigishane shrirangashaayi ||pa||
Entu elanu kaledudarinde bantaraivara tulidudarinde
Kantakanobbana taridudarinde bantanaagi bandeno shrirangashaayi ||1||
Vana upavanagalinda ghana sarovaragalinda
Kanaka gopuragalinda ghanashobhitane shrirangashaayi ||2||
Vajra vaiduryada tolegala kande prajvalipa mahaadwaarava kande
Nirjaraadi munigala kande durjanaantakane shrirangashaayi ||3||
Rambhe Urvashiyara melava kande tumburu muni naaradaranu kande
Ambujodbhava rudrara kande shambaraaripitane rangashaayi ||4||
Naagashayanana muruti kande bhogibhushana shivananu kande
Bhaagavatara sammelava kande kaagineleyaadikeshava shrirangashaayi ||5||
***
ಎಷ್ಟು ದೂರ!
ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನುಕಂಡೆ
ಸೃಷ್ಟಿಗೀಶನೆ ಶ್ರೀ ರಂಗಶಾಯಿ |ಪ|
ಎಂಟು ಏಳನು ಕಳೆದುದರಿಂದ
ತುಂಟರೈವರ ತುಳಿದುದರಿಂದ
ಕಂಟಕೊಬ್ಬನ ಅಳಿದುದರಿಂದ
ಭಂಟನಾಗಿ ಬಂದೇ ಶ್ರೀ ರಂಗಶಾಯಿ ||1||
ವನ ಉಪವನಗಳಿಂದ
ಘನ ಸರೋವರಗಳ ನದ
ಕನಕ ಗೋಪುರಗಳಿಂದ
ಘನ ಶೋಭಿತನೆ ಶ್ರೀ ರಂಗಶಾಯಿ ||2||
ವಜ್ರ ವೈಢೂರ್ಯ ತೊಲೆಗಳ ಕಂಡೆ.
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕ ಶ್ರೀ ರಂಗಶಾಯಿ ||3||
ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ನಾರದರ ಕಂಡೆ
ಅಂಬುಜೋದ್ಭವ ಪ್ರಮುಖರ
ಶಂಬರಾರಿ ಪಿತನೆ ಶ್ರೀ ರಂಗಶಾಯಿ ||4||
ನಾಗಶಯನ ಮೂರತಿ ಕಂಡೆ
ಭೋಗಿಭೂಷಣ ಶಿವನನು
ಭಾಗವತರ ಸಮ್ಮೇಳನವ
ಕಾಗಿನೆಲೆ ಆದಿಕೇಶವ ಶ್ರೀ ರಂಗಶಾಯಿ ||5||
***
artha by dr. vijendra desai
ದಾಸವರೇಣ್ಯರು ಕನಕದಾಸರು.
ಅವರ ಪ್ರಸಿದ್ಧ ದೇವರ ನಾಮ.
ಮೇಲು ನೋಟಕ್ಕೆ ಸರಳ. ಸುಂದರ.
ಅಷ್ಟೇ ಕಠಿಣ. ಬಹು ಅರ್ಥ ಗರ್ಭಿತ.
ವೈಕುಂಠಕ್ಕೇ ಕರೆದೊಯ್ಯುತ್ತಾರೆ.
ವೈಕುಂಠದ ಘನ ವೈಭವ ನೋಡಿ.
ಶ್ರೀ ರಂಗಶಾಯಿಯ ದರ್ಶನ ಮಾಡಿ.
ಭಾಗವತರು ಕೇಳುತ್ತಾರೆ -
'ದಾಸರೇ, ವೈಕುಂಠದ ದಾರಿ ನಿಮಗೆ
ಹೇಗೆ ದೊರೆಯಿತು?'
ದಾಸರ ಉತ್ತರ --
ಹೌದು ಸಜ್ಜನರೇ.
ವೈಕುಂಠ ದೂರ.
ದಾರಿ ದುರ್ಗಮ.
ಹರಿ ದರ್ಶನ ಅಸಾಧ್ಯ.
ಇದು ನನ್ನ ಇಷ್ಟು ದಿನದ ಅರಿವು.
ಇದೀಗ ಬದಲು.
ಈಗೇನಾಯಿತು?
ಗುರು ಸಿಕ್ಕ.
ನಿಷ್ಠೆ ಇಟ್ಟೆ.
ಫಲವಾಯಿತು.
ಅನುಗ್ರಹ ದೊರೆಯಿತು.
ಗುರು ಪ್ರಸಾದೋ ಬಲವಾನ್|
'ಇದೇ ದಾರಿ ವೈಕುಂಠಕ್ಕೆ.
ವೈಕುಂಠಪತಿ ದರ್ಶನಕ್ಕೆ.'
ಗುರು ಸರಿ ದಾರಿ ತೋರಿದ.
ಅದಕ್ಕಾಗಿ
ಇಷ್ಟು ದಿನ ಎಷ್ಟು ದೂರವೋ ಎನಿಸಿದ ವೈಕುಂಠ
ಇಂದು ಇಷ್ಟೇ ದೂರವಾ ಎನಿಸುತ್ತಿದೆ.
ದೂರದ ಊರು ನೆರೆ ಮನೆಯಾಯ್ತು.
ಮತ್ತೆ ದಾಸರು ವೈಕುಂಠದ ದಾರಿ ಎಂತು,
ಮುಟ್ಟುವ ಬಗೆ ಹೇಗೆ, ಹೇಳುತ್ತಾರೆ.
ತಾವು ಕಟ್ಟಿದ ಬುತ್ತಿ, ಇಟ್ಟ ಹೆಜ್ಜೆ,
ಕ್ರಮಿಸಿದ ದಾರಿ, ಕಂಡ ವಭವ ವರ್ಣಿಸುತ್ತಾರೆ.
ಕೈ ಮುಗಿದು ಕೇಳೋಣ.--
ಎಂಟು ಏಳನ್ನು ಕಳೆಯ ಬೇಕು.
ತುಂಟ ಐವರ ತುಳಿಯ ಬೇಕು.
ಕಂಟಕೊಬ್ಬನ ಅಳಿಯ ಬೇಕು.
8+7+5+1 = 21
ಪಂಚಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ, ಪಂಚಭೂತ, ಪಂಚತನ್ಮಾತ್ರ
ಮತ್ತೆ ಮೆಲೆ ಮನಸ್ಸು ಈ ಇಪ್ಪತ್ತೊಂದು ತತ್ವಗಳು.
ಅವುಗಳ ಉಪಯೋಗ ಸರಿಯಾಗ ಬೇಕು. ಅಂದರೆ ಸಾಧನೆಯತ್ತ ಮುಖ.
ತಪ್ಪಿದರೆ ಅಧೋಮುಖ.
ಜ್ಞಾನೇಂದ್ರಿಯ, ಕರ್ಮೇಂದ್ರಿಯ ತಪ್ಪು
ದಾರಿ ಹಿಡಿಯ ಬಾರದು.
ಇಂದ್ರಿಯಗಳ ವಶ ನಾವಲ್ಲ.
ನಮ್ಮ ವಶದಲ್ಲಿ ಇಂದ್ರಿಯಗಳು.
ಇದು ಇಂದ್ರಿಯ ಜಯ.
ಪಂಚಭೂತ,ಮಾತ್ರಾಗಳುಸಂಕೇತ.
ದೇಹ, ಗೇಹಗಳ
ಅಭಿಮಾನಕ್ಕೆ ಹೇತು.
ಅವುಗಳನ್ನು ಕಳೆದು ಕೊಳ್ಳ ಬೇಕು.
ಅಭಿಮಾನ ಷಟ್ಕ, ಅಜ್ಞಾನ ಷಟ್ಕಗಳ ನಾಶ.
ಕಣ್ಣು, ಕಿವಿ, ಮೂಗು, ನಾಲಿಗ, ತ್ವಚೆ ಇವು
ಐದು ಜ್ಞಾನೇಂದ್ರಿಯಗಳು.
ಇವೇ ತುಂಟರು. ಯಾಕೆ?
ನೋಡಬಾರದ್ದು ನೋಡಲೆ ಬೇಕು.
ಕೇಳಬಾರದ್ದು ಕೇಳುವದು.
ಮೂಸಬಾರದ್ದು ಮೂಸುವದು.
ತಿನಬಾರದ್ದು ತಿನ್ನುವದು.
ಮುಟ್ಟಬಾರದ್ದು ಮುಟ್ಟುವದು.
ಇದು ಅಡ್ಡ ದಾರಿ. ತುಂಟರ ದಾರಿ.
ಇವುಗಳನ್ನು ತುಳಿದು ಅಂದರೆ ಮೆಟ್ಟಿ ನಿಲ್ಲ ಬೇಕು.
ಇಂದ್ರಿಯ ನಿಗ್ರಹ ಬೇಕು.
ಕಂಟಕ - ಚಂಚಲ ಮನಸ್ಸು.
ಸತ್ಕಾರ್ಯ ಬಯಕೆ.
ಆದರೆ ದುಷ್ಕರ್ಮ ಕರಣ.
ಹಿತ ಅಕರಣ.
ಅಹಿತ ಕರಣ.
ಮನೋನಿಗ್ರಹ ಬೇಕು.
ಕಂಟಕ ಅಳಿಯ ಬೇಕು.
ಮನ ಹರಿ ಪದತಲದಿ ಸ್ಥಿರವಾಗ ಬೇಕು.
ಎಂಟನ್ನು ಅಳಿಯ ಬೇಕು.
ಅಷ್ಟ ಮದಗಳ ಕಳೆದು ಕೊಳ್ಳ ಬೇಕು.
ಮತ್ತೆ ಅಹಂ, ಮಮಕಾರ ಅಳಿಯ ಬೇಕು.
ಭಂಟನಾಗೀ ಬಂದೇ --
ಈತ ಭಂಟನಾಗಿ ಬರಬೇಕು.
ಆತ ನೆಂಟನಾಗಿ ಉದ್ಧರಿಸುತ್ತಾನೆ.
ಆತ ಈಶ. ನಾನು ದಾಸ.
'ರಕ್ಷತೀ ಇತ್ಯೇವ ವಿಶ್ವಾಸಃ'
ನನ್ನ ರಕ್ಷಣೆ ಆತನ ಹೊಣೆ.
ಸಂಪೂರ್ಣ ಶರಣಾಗತಿ.
ಇವು ಹೇಗೆ ಸಾಧ್ಯ?
ಶಾಸ್ತ್ರ ಅಧ್ಯಯನ.
ಸಜ್ಜನ ಸಂಗ
ಹರಿ, ವಾಯು, ಗುರುಗಳ ಅನುಗ್ರಹ.
ಇದು ವೈಕುಂಠದ ದಾರಿ.
ದೃಷ್ಟಿಯಿಂದಲೀ ನಾನು ಕಂಡೆ. --
ಪರಮಾತ್ಮನ ಅನುಗ್ರಹ.
ಹೊಸಕಣ್ಣು ಹಚ್ಚಿದ.
ದಿವ್ಯ ದೃಷ್ಟಿ ಕೊಟ್ಟ.
ವೈಭವದ ವೈಕುಂಠ,
ಅಲ್ಲಿ ಭಾಗವತರ ಅರಸು.
ಸೃಷ್ಟಿ ಸ್ಥಿತಿ ಲಯಾದಿಗಳ ಈಶ
ಶೇಷಶಾಯಿ ಶ್ರೀ ರಂಗನ ಕಂಡೆ.
ಮತ್ತೆ ಅಲ್ಲಿ ಏನೇನು ಕಂಡೆ?
ದಾಸರು ಹೇಳುತ್ತಾರೆ -
ವನ, ಉಪವನ, ಘನ ಸರೋವರ, ಕನಕ ಗೋಪುರಗಳ ಕಂಡೆ. ---
ಇವೆಲ್ಲ ಮನೋಹರ ಸುಂದರ ವೈಕುಂಠದ ವೈಬವಗಳು.
ಇನ್ನೊಂದು ಅರ್ಥ --
ವನ = ನೀರು = ತೀರ್ಥ = ಶಾಸ್ತ್ರ
ಶಾಸ್ತ್ರ ಅಂದರೆ ಜ್ಞಾನ ಮಯ.
ಸುಜ್ಞಾನದ ಸರೋವರ, ಸಾಗರಗಳ ಕಂಡೆ.
ವಜ್ರ, ವೈಡೂರ್ಯದ ತೊಲೆಗಳ ಕಂಡೆ.
ವೈಕುಂಠ ಸಕಲ ಸಂಪದ್ಭರಿತ ಇದು ಒಂದು ಅರ್ಥ. ಇನ್ನೊಂದು -
ಘನೀಕೃತ ಭಕ್ತಿ ವಿರಕ್ತಿಗಳಾದಿಗಳೇ ತೊಲೆಗಳು.
ಅಂದರೆ ವೈಕುಂಠದ ದಾರಿಗೆ
ಸದ್ಗುಣಗಳೇ ಆಧಾರ ಸ್ತಂಭಗಳು.
ಅಲ್ಲಿದೆ ಪ್ರಜ್ವಲಿಸುವ ಮಹಾದ್ವಾರ.
ತೇಜ, ಪ್ರಜ್ವಲನ ಜ್ಞಾನದ ಸಂಕೇತ.
ತೇಜೋಮಯ ಜ್ಞಾನದ ಹೆಬ್ಬಾಗಿಲು.
ಜ್ಞಾನಿಗಳ ದರ್ಶನ.
ನಿರ್ಜರಾದಿ ಮುನಿಗಳ ಕಂಡೆ. --
ಅಲ್ಲಿ ಸಂಸಾರ ಗೆದ್ದ ಮುನಿಗಳು.
ಭಕ್ತಿ, ಜ್ಞಾನಗಳಿಂದ ಪರಮಾತ್ಮನನ್ನು
ಹಾಡುತ್ತಿದ್ದಾರೆ. ಕೊಂಡಾಡುತ್ತಿದ್ದಾರೆ.
ಆನಂದಪಡುತ್ತಿದ್ದಾರೆ.
ನವ ವಿಧ ಭಕ್ತಿಯ ಘನ ವೈಭವ.
ದಿವ್ಯ ಹರಿ ಮಹಾತ್ಮೆ ಹಾಡುವ
ತುಂಬುರು, ನಾರದರು
ನರ್ತನ ಸೇವೆ ಮಾಡುವ ರಂಭೆ, ಊರ್ವಶಿಯರು.
ಶ್ರವಣ, ಮನನ,ಧ್ಯಾನ, ಬ್ರಹ್ಮ ಜಿಜ್ಣಾಸೆ.
ಇವೆಲ್ಲ ಮಾಡುತ್ತಿರುವ ಭಾಗವತರ
ಸಮ್ಮೇಳನಗಳು ಅಲ್ಲಲ್ಲಿ.
ಮತ್ತೆ
ಅಂಬುಜೋದ್ಭವ - ಬ್ರಹ್ಮ, ರುದ್ರಾದಿ,
ಹರಿ ಪರಿವಾರದ ಮಹಾ ವೈಭವ ಕಂಡೆ.
ಇಂತಹ ಮಹಾ ವೈಭವದ ವೈಕುಂಠದ
ಮಧ್ಯೆ ರಾರಾಜಿಸುವ
ನಾಗಶಯನ ಶ್ರೀ ರಂಗ ಅಬಿನ್ನ ಆರಾಧ್ಯ ದೈವ
ಆದಿಕೇಶವನನ್ನು ಕಾಣುತ್ತಾರೆ ಕನಕದಾಸರು.
ಅವರು ಅಪರೋಕ್ಷ ಜ್ಞಾನಿಗಳು.
ಒಟ್ಟಿನಲ್ಲಿ ತಾತ್ಪರ್ಯ --
ಶಾಸ್ತ್ರ ಶ್ರವಣ, ಮನನ,ಜಿಜ್ಣಾಸೆ
ತತ್ವ ನಿಶ್ಚಯವಾಗ ಬೇಕು.
ಇಪ್ಪತ್ತೊಂದು ತತ್ವಗಳ
ಸದುಪಯೋಗವಾಗ ಬೇಕು.
ಪರಮ ವಿಶ್ವಾಸವಿಡ ಬೇಕು.
ದಾಸನಾಗ ಬೇಕು.
ನವವಿಧ ಭಕ್ತಿ ಬೆಕು.
ಭಕ್ತಿ ವಿರಕ್ತಿಯ ಆಧಾರ ಸ್ತಂಭ ಕಟ್ಟಬೇಕು.
ಜ್ಞಾನವೇ ವೈಕುಂಠದ ದಾರಿಯ ಮಹಾದ್ವಾರ.
ಇಷ್ಟೆಲ್ಲ ಪಾಥೇಯ ಕಟ್ಟ ಬೇಕು.
ಆಗ ಅದು ಸರಿ ದಾರಿ.
ವೈಕುಂಠ ಒಂದೇ ಕೂಗಳತೆ.
ವೈಕುಂಠ ಪತಿ ನಾಗಶಯನನ ದರ್ಶನ.
ಎನ್ನುತ್ತಾರೆ ದಾಸವರೇಣ್ಯರು.
ಹೆದ್ದೈವನ, ಅವನ ಅರಮನೆ, ಸಿರಿಮನೆ ಕಂಡ ಕನಕದಾಸರಿಗೆ ನಮಿಸಿ, ಅವರ ಅಂತರ್ಗತ
ಮುಖ್ಯಪ್ರಾಣ ಅಂತರ್ಗತ
ಶೇಷಶಾಯಿ ಆದಿಕೇಶವನಿಗೆ ಸಹಸ್ರ ನಮಿಸಿ ಅನುಗ್ರಹ ಪಡೆಯೋಣ.
(ದಾಸರ ಮಾತಿಗೆ ಇದೊಂದು ವಿಭಿನ್ನ ಅರ್ಥ ಮಾಡುವ ಪ್ರಯತ್ನ. ಸರಿಯೇ ನೋಡಿ.)
ಡಾ. ವಿಜಯೇಂದ್ರ ದೇಸಾಯಿ..
ಶ್ರೀ ಕೃಷ್ಣಾರ್ಪಣಮಸ್ತು.
***
No comments:
Post a Comment