ಆನಂದಭೈರವಿ ರಾಗ ಮತ್ತು ಆದಿತಾಳ
2ND Audio by Amruta Bai
rendered by srI Ananda rAo, srIrangam
to aid learning the dAsara pada
ರಾಮನಾಮ ಪಾಯಸಕ್ಕೆ
ಕೃಷ್ಣನಾಮ ಸಕ್ಕರೆ
ವಿಟ್ಠಲನಾಮ ತುಪ್ಪವ ಕಲಸಿ
ಬಾಯಿ ಚಪ್ಪರಿಸಿರೊ ||ಪ||
ಒಮ್ಮಾನ ಗೋಧಿಯ ತಂದು
ವೈರಾಗ್ಯ ಕಲ್ಲಿಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು
ಸಣ್ಣ ಶಾವಿಗೆಯ ಹೊಸೆದು ||
ಹೃದಯವೆಂಬೊ ಮಡಕೆಯಲ್ಲಿ
ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ
ಹರಿವಾಣಕೆ ಬಡಿಸಿಕೊಂಡು ||
ಆನಂದ ಆನಂದವೆಂಬೊ
ತೇಗು ಬಂದಾಗ ಎರಡು ತೇಗು ಬಂದಾಗ
(/ತೇಗು ಬಂದಿತು ಕಾಣಿರೊ)
ಆನಂದಮೂರುತಿ ನಮ್ಮ
ಪುರಂದರವಿಠಲನ ನೆನೆಯಿರೊ ||
*****
ರಾಗ ಆನಂದಭೈರವಿ ರೂಪಕ ತಾಳ (raga, taala may differ in audio)
ರಾಗ ಪಂತುವರಾಳಿ ಏಕತಾಳ
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ
ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಸೇವೆಗೆ ಹೊಸೆದು
ಹೃದಯವೆಂಬೊ ಪಾತ್ರೆಯೊಳಗೆ ಭಾವವೆಂಬೊ ಎಸರು ಇಟ್ಟು
ಬುದ್ದಿಯಿಂದ ಪಕ್ವವ ಮಾಡಿ ಹರಿವಾಣದೊಳಗೆ ನೀಡಿ
ಆನಂದ ಆನಂದವೆಂಬೊ ತೇಗು ಬಂದ ಪರಿಯಲಿ
ಆನಂದಮೂರುತಿ ನಮ್ಮ ಪುರಂದರವಿಠಲ ನೆನೆಯಿರೊ
***
Raaga: aanaMdabairavi taaLa: rUpaka
raama naama paayasakke kRuShNanaama sakkare |
viThalanaama tuppava kalasi baayi capparisiro ||pa||
ommaana gOdhiya taMdu vairaagya kallili bIsi |
summane sajjigeya tegedu saNNa shaavigeya hosedu ||1||
hRudayaveMbo maDakeyalli bhaavaveMbo esaraniTTu |
buddhiyiMda paakamaaDi harivaaNake baDisikoMDu ||2||
aanaMda aanaMdaveMbo tEgu baMditu kANirO |
aanaMda mUruti namma puraMdara viThalana neneyiro ||3||
***
Rama nama payasakke krushna nama sakkare
Vithala nama tuppava kalasi baya capparisiro ||pa||
Ommana godhiya tamdu vairagya kallali bisi
Summane sajjigeya tegedu sanna savigeya hosedu ||1||
Hrudayavembo madakeyali bavavembo esaranittu
Buddhiyinda paka madi harivanake badisikondu ||2||
Ananda anandavembo tegu banditu kaniro
Ananda muruti namma purandara vithalana neneyiro ||3||
***pallavi
rAma nAma pAyasakke krSNa nAma sakkare viTTala nAma tuppava kalasi bAyi capparisiro
caraNam 1
ommAna gOdiya tandu virAgya kallili bIsi summane lajjigeya tegadu saNNa shAvikeya hosedu
caraNam 2
hrdayavembo maDkeyalli bhAvavembo esaraniTTu buddhiyinda pAka mADi harivANake baDisikoNDu
caraNam 3
Ananda Anandavembo tEgu bandAga eraDu Ananda mUruti namma purandara viTTalana neneyiro
***
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಟ್ಠಲ
ನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ ll ಪ ll
ಒಮ್ಮನ ಗೋದಿಯ ತಂದು ವೈರಾಗ್ಯ ಕಲ್ಲಲ್ಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಶಾವಿಗೆ ಹೊಸೆದು ll 1 ll
ಹೃದಯವೆಂಬೋ ಮಡಿಕೆಯಲ್ಲಿ ಭಾವವೆಂಬೋ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ ಹರಿವಾಣಕ್ಕೆ ಬಡಿಸಿಕೊಂಡು ll 2 ll
ಆನಂದ ಆನಂದವೆಂಬೋ ತೇಗು ಬಂತು ಕಾಣಿರೋ
ಆನಂದಮೂರುತಿ ನಮ್ಮ ಪುರಂದರವಿಟ್ಠಲನ ನೆನೆಯಿರೋ ll 3 ll
***
ಎಲ್ಲಿಯವರೆಗೆ ? - ಆನಂದ ಆನಂದವೆಂಬೋ ತೇಗು ಬರುವವರೆಗೆ.
ಪಾಯಸ ಸಮರಸವಾಗಿದೆ. ಸುಮಧುರವಾಗಿದೆ. ದಟ್ಟವಾಗಿದೆ. ಮತ್ತೆ ಮತ್ತೆ ಚಪ್ಪರಿಸ ಬೇಕೆನಿಸುವದು. ಇದುವೇ ಭಕ್ತಿ ಭರಿತ ಜ್ಞಾನ ಸಹಿತ ಸರ್ವ ಶರಣಾಗತಿ ಪರಮಾತ್ಮನಲ್ಲಿ.
ಪರಮಾತ್ಮನೇ ಪರಮಾನ್ನ. ಪರಮಾನ್ನವೇ ಪಾಯಸ. ಪಾಯಸವೇ ಪರಮ ಅನ್ನ. ಪರಮಾತ್ಮನೇ ಅನ್ನ ಶಬ್ದ ವಾಚ್ಯ. ಅನ್ಯರು ಅನ್ನವಲ್ಲ. ಯಾಕೆ?
ಎಲ್ಲರಿಗೂ ಅನ್ನದ - ಅನ್ನಂ ದದಾತಿ ಅದಕ್ಕಾಗಿ ಆತ ಅನ್ನ.
ಅಷ್ಟೇ ಅಲ್ಲ, ಪ್ರಲಯಕಾಲದಲ್ಲಿ ಇಡೀ ಚರಾಚರ ಬ್ರಹ್ಮಾಂಡವನ್ನೇ ಉಂಡು ಉದರದಲ್ಲಿ ಧರಿಸುತ್ತಾನೆ. ಬ್ರಹ್ಮಾಂಡ ಅವನ ಅನ್ನ. ಅದಕ್ಕಾಗಿ ಆತ ಅನ್ನ - ಪರಮಾನ್ನ - ಪಾಯಸ.
ಈ ಪಾಯಸ ಯಾವುದರಿಂದ ಮಾಡಿದಿರಿ ? ಯಾಕಿಷ್ಟು ರುಚಿ ?
ಕೇಳಿ - ಒಮ್ಮನ ಗೋದಿಯ ತಂದು ವೈರಾಗ್ಯ ಕಲ್ಲಲ್ಲಿ ಬೀಸಿ -.
ಜೀವವೇ ಬೀಜ - ಗೋದಿ.. ಒಳ್ಳೇ ಜೀವವೇ ಒಮ್ಮನ ಗೋದಿ. ಘಮ್ಮನ ಪಾಯಸದ ಗೋದಿ. ಈ ಜೀವ ಗೋದಿ ಸಂಸಾರವೆಂಬುವ ಚಕ್ರ - ಬೀಸು ಕಲ್ಲು.
ಸುಖ ದುಃಖವೆಂಬ ಬೀಸುವ ಸುತ್ತುಗಳು. ಹುಟ್ಟು ಸಾವುಗಳ ಚಕ್ರ. ಸಾಕಾಯಿತು. ಸಾರವಿಲ್ಲ ಸಂಸಾರದಲ್ಲಿ ಅನಿಸಿತು. ಸಂಸಾರ ಸಸಾರವಲ್ಲ ಅನಿಸಿತು.
ಉತ್ಪನ್ನವೇ ವೈರಾಗ್ಯ = ಅದೇ ಸಂಸಾರದಲ್ಲಿ ವಿರತಿ.
ಸಾರ, ವರಸಾರ, ವರರಸ, ಯಾರು ? ಸಂಸಾರದಿಂದ ಪಾರುಮಾಡುವ ತಾರ ಯಾರು ? ತಾರ ಪಾದ್ಯ ಭಗವಂತ ಎನಿಸಿತು.
ಪರಮಾತ್ಮನಲ್ಲಿ ರತಿ. ಇದು ಭಕ್ತಿ..
ಇನ್ನು
ಸುಮ್ಮನ ಸಜ್ಜಿಗೆ ತೆಗೆದು - ಗೋದಿಯ ಆರಿಸಿ ಶುದ್ಧೀಕರಿಸಿ ಸಜ್ಜಿಗೆ ಮಾಡುವದು - ಅಹಂಕಾರ ಮಮಕಾರ ತೆಗೆದು ಸಣ್ಣ ಸಜ್ಜಿಗೆ ಅಂದರೆ ಮದ, ಮತ್ಸರಾದಿ ಅರಿಷಡ್ ವೈರಿಗಳ ಕುಟ್ಟಿ, ವಿನಮ್ರತೆ.
ನೀನು ಈಶ ನಾನು ದಾಸ ಎಂಬ ಸಜ್ಜಿಗೆ - ಜೀವನ ಸಾತ್ವಿಕ ಗುಣಕ್ಕೆ ಉಪಚಯ.
ಸಣ್ಣ ಶಾವಿಗೆ ಹೊಸೆದು - ಪಯ ಎಂದರೆ ಹಾಲು. ಹಾಲಿನಿಂದ ಮಾಡಿದ್ದು ಪಾಯಸ. ಹಾಲು ಶುದ್ಧ ಸಾತ್ವಿಕತೆ, ಜ್ಞಾನದ ಪ್ರತೀಕ.
ಸಜ್ಜಿಗೆಯಲ್ಲಿ ಅಂತಃಕರಣವೆಂಬೋ ಹಾಲು ಬೆರೆಸಿ. ನಮಸ್ಕರಿಸುತ್ತ ಕಲಿಸಿ.
ದೇಹದಂಡನೆಯಿಂದ ನಾದಿ, ಜ್ಞಾನದಿಂದ ತಿಕ್ಕಿ, ಪ್ರೀತಿಯಿಂದ ನೆನೆಸಿ. ಭಕ್ತಿಯಿಂದ ಹೊಸೆಯಿರಿ. ಆಗ ಪರಮಾನ್ನಕ್ಕೆ ಪಕ್ವ ಶಾವಿಗೆ ಸಿದ್ಧ.
ಹೃದಯವೆಂಬೋ ಮಡಿಕೆಯಲ್ಲಿ - ದೇಹವೇ ಮಡಿಕೆ. ಹೃದಯವೇ ಅವಕಾಶ. ಅಲ್ಲಿಯೇ ಪರಮಾತ್ಮ, ಜೀವಾತ್ಮ ವಾಸ. ಮುಖ್ಯ ಪ್ರಾಣರೇ ಅಧಿಷ್ಠಾನ. ಇವೆಲ್ಲ ಅಷ್ಟದಳ ಕಮಲದಲ್ಲಿ. ಇದು ಅಡಿಗೆ ಮನೆ.. ಪರಮಾತ್ಮವೆಂಬೋ ಪರಮಾನ್ನವೇ ಅಡಿಗೆ.
ತಯಾರಿಸುವ ಬಗೆ ಹೇಗೆ ?
ಭಾವ ಎಂಬೋ ಎಸರನ್ನಿಟ್ಟು - ಭಾವ, ನೀರು, ಶಾಖ ಈ ಮೂರು ಬೇಕು ಪಾಕ ಮಾಡಲು.
ಏನು ಭಾವ ? - ಭಾವ ಅಂದರೆ ಇರುವಿಕೆ. ಅಸ್ತಿತ್ವ. ಆಸ್ತಿಕ್ಯ. ಪರಮಾತ್ಮ ಇದ್ದಾನೆ. ನಮ್ಮನ್ನು ಅನವರತ ರಕ್ಷಿಸುತ್ತಾನೆ ಎಂಬ ದೃಢ ವಿಶ್ವಾಸ.
ಶ್ರದ್ಧೆ, ನಿಷ್ಠೆ. ಆತ ಪರಮ ಎಂಬ ಜ್ಞಾನ. ಇದು ಭಾವ. ಈ ಭಾವ ಬರುವ ಬಗೆ ಹೇಗೆ ?
ನೀರು ತೆಗೆದುಕೊಳ್ಳಿ. ನೀರು ಎಂದರೆ ತೀರ್ಥ. ತೀರ್ಥ ಎಂದರೆ ಶಾಸ್ತ್ರ ಜ್ಞಾನ.
ಚಿನ್ನಕ್ಕೆ ಪುಟವಿಟ್ಟಾಗ ಚೊಕ್ಕ ಬಂಗಾರ - ಅದಕ್ಕೆ ಶಾಖ ಕೊಡಿ. ಕಾಯಿಸಿ. ಎಸರು ಬರುವುದು. ಜ್ಞಾನ ಭಕ್ತಿ ಉಕ್ಕುವದು. ಪಕ್ವವಾಗುವುದು.
ಬುದ್ಧಿಯಿಂದ ಪಾಕಮಾಡಿ - ಮನಸ್ಸು ಚಂಚಲಾತ್ಮಕ. ಚಾಂಚಲ್ಯ ಬೇಡ. ಬುದ್ದಿ ನಿಶ್ಚಯಾತ್ಮಕ. ಅದಕ್ಕಾಗಿ ಬುದ್ಧಿಯಿಂದ ಪಾಕಮಾಡಿ. ಜ್ಞಾನ ಕುದಿಸಿ.
ಕೃಷ್ಣ ನಾಮವೆಂಬ ಸಿಹಿ ಸಕ್ಕರೆ ಬೆರೆಸಿ - ಕೃಷ್ಣ ಮಹಾತ್ಮೆ ಜ್ಞಾನವೇ ಸಿಹಿ ಸಿಹಿ. ಅನುಭವ ಅನುಸಂಧಾನವೆಂಬ ಸಣ್ಣ ಸೌಟಿನಿಂದ ಕಲಿಸಿ.
ಶ್ಮ, ದಮ, ನಿಷ್ಠೆ, ನಿಗ್ರಹ, ನಪ, ತಪ, ತಾಳ್ಮೆ ಮೊದಲಾದ ಯಾಲಕ್ಕಿ, ಲವಂಗ, ಗೋಡಂಬಿ, ದ್ರಾಕ್ಷಿ, ಕೇಶರ ಸೇರಿಸಿ. ಕಲಿಸಿ ಕಲಕಿ, ಪಾಯಸ ಸುರಸ, ಸಮರಸವಾಗುವುದು. ಪರತತ್ವ ಪರಮಾತ್ಮ ಎಂದು ನಿಶ್ಚಯಿಸಿ.
ಇದಕ್ಕೆ ವಿಟ್ಠಲ ನಾಮ ತುಪ್ಪವ ಬೆರೆಸಿ - ತುಪ್ಪ ಸ್ನಿಗ್ಧ. ದಟ್ಟ ಗಟ್ಟಿ. ನಿರಂತರ. ತೈಲಧಾರೆಯಂತೆ ತುಂಡಾಗದ ಅಚಲ ಭಕ್ತಿ.
ಭಕ್ತಿ ಬೆರೆಸಿದ ಪರಮಾತ್ಮನ ಮಹಾತ್ಮೆ ಜ್ಞಾನ ಪಕ್ವ ಪರಮಾನ್ನ, ಪಾಯಸ.
ರಾಮ, ಕೃಷ್ಣ, ವಿಟ್ಠಲ ಎಲ್ಲ ಪರಮಾತ್ಮನ ನಾಮಗಳೇ. ನೂರು ನಾಮ, ವಿಷ್ಣು ಸಹಸ್ರನಾಮ. ಅನಂತ ನಾಮ. ಅನಂತ ರೂಪಗಳು. ಅನಂತ ಗುಣಗಳು.
ಇಲ್ಲಿ 'ನೇಹ ನಾನಾಸ್ತಿ ಕಿಂಚನ' - ಹರಿಯ ರೂಪ ರೂಪಗಳಲ್ಲಿ, ಗುಣ, ರೂಪದಲ್ಲಿ ಅಭೇದ. ಅದ್ವೈತ. ದ್ವೈತವಿಲ್ಲ. ಭೇದವಿಲ್ಲ. ಅದಕ್ಕಾಗಿ ದಾಸರ ಅನೇಕ ನಾಮ ಪ್ರಯೋಗ.
ಒಂದು ಪಾಯಸ ಪ್ರಯೋಜನ.
ಹರಿವಾಣಕ್ಕೆ ಬಡಿಸಿಕೊಂಡು ಬಾಯಿ ಚಪ್ಪರಿಸಿರೋ - ಎಲ್ಲಿಯವರೆಗೆ ?
ಆನಂದ ಆನಂದವೆಂಬೋ ತೇಗು ಬಂತು ಕಾಣಿರೋ -
ಇಷ್ಟು ಪಕ್ವಪಾಕವನ್ನು ಹರಿವಾಣಕ್ಕೆ ಬಡಿಸಿಕೊಳ್ಳಿ. ಏನಿದು ?
ಹರಿವಾಣ ಒಂದು ವಿಸ್ತಾರ ಪರಾತ. ಅದಕ್ಕೆ ಹಾಕಿಕೊಳ್ಳಬೇಕು. ಅಂದರೆ ಜ್ಞಾನ ಭಕ್ತಿಯ ಪರಮಾನ್ನ ಇನ್ನೂ ವಿಸ್ತಾರ ಮಾಡಿ. ಗುರು ಅನುಗ್ರಹ ಕೂಡಿಸಿಕೊಳ್ಳಿ. ಸಜ್ಜನ ಸಂಗ ಬೆರೆಸಿ. ಶಾಸ್ತ್ರ ಜ್ಞಾನ ಅನುಸಂಧಾನಕ್ಕೆ ತನ್ನಿ. ಅದನ್ನು ನಿತ್ಯ ಜೀವನದಲ್ಲಿ ಅನುಭವಿಸಿ.
ಮಲಗುವಾಗ, ಏಳುವಾಗ, ಮನೆಕೆಲಸ ಮಾಡುವಾಗ, ಸುಖದಲ್ಲಿ, ದುಃಖದಲ್ಲಿ ಕಷ್ಟದಲ್ಲಿ, ಕ್ಲಿಷ್ಟದಲ್ಲಿ ಬಡತನದಲ್ಲಿ ಸಿರಿತನದಲ್ಲಿ ಸಿರಿರಮಣನ ಸ್ಮರಣೆಯಾಗಬೇಕು.
ಬಾಯಿ ಚಪ್ಪರಿಸುವದು ಎಂದರೆ ಮತ್ತೆ ಮತ್ತೆ ಹರಿನಾಮ ಸ್ಮರಣೆ. ಜಗಿದಷ್ಟೂ ಸಿಹಿ ಸಿಹಿ ಕಲ್ಲುಸಕ್ಕರೆ ಪಾಯಸ. ತೇಗು ತೃಪ್ತಿಯ ಸಂಕೇತ. ಆನಂದದ ತೇಗು ಪರಮಾನಂದದ ಪ್ರತೀಕ. ಜ್ಞಾನ ಭಕ್ತಿ ಪರಿಪಕ್ವವಾದಾಗ ಸಾಕ್ಷಾತ್ಕಾರ. ಆಗ ಪರಮಾನಂದ. ಆಗ
ನೀನು ಈಶ, ನಾನು ದಾಸ ಎಂಬ ಎರಡು ಆನಂದದ ತೇಗು.
ನೀನು ಪರಮಾತ್ಮ, ನಾನು ಜೀವಾತ್ಮ ಎಂಬ ಅರಿವಿನ ಆನಂದದ ಎರಡುತೇಗು.
ಇದೆಲ್ಲ ದೊರೆಯುವದು ಆನಂದಮೂರ್ತಿ ಪುರಂದರವಿಟ್ಠಲನ ನಿರಂತರ ಸ್ಮರಣೆಯಿಂದ.
ಇಂಥ ತುಪ್ಪ ಸಕ್ಕರೆ ಹಾಲು ಕೂಡಿದ ಪಾಯಸ ಚಪ್ಪರಿಸದವರಾರು ?
ರಾಮನಾಮ ಪಾಯಸ ಸದಾ ಚಪ್ಪರಿಸುವ ಹನುಮಂತನಿದ್ದಾನೆ. ಶೇಷನಾದ ಲಕ್ಷ್ಮಣನಿದ್ದಾನೆ. ತನ್ನ ಸತಿ ಉಮೆಗೆ ರಾಮನಾಮ ಉಪದೇಶಿಸಿದ ಈಶ್ವರನಿದ್ದಾನೆ. ರಾಮನಾಮ ರುಚಿಉಂಡ ವಾಲ್ಮೀಕಿ ಮುನಿಗಳಿದ್ದಾರೆ. ಸಕಲ ಋಷಿ ಮುನಿಗಳು ಈ ಪಾಯಸದ ಬೆನ್ನು ಹತ್ತಿದವರೇ. ಶಬರಿ ಇದ್ದಾಳೆ. ಜಟಾಯು ಇದ್ದಾನೆ ನಾರಾಯಣ ನಾಮದ ಅಜಮಿಳನಿದ್ದಾನೆ.
ಆದಿಮೂಲ ನಾಮದ ರುಚಿಕಂಡ ಗಜರಾಜನಿದ್ದಾನೆ. ನಾರಾಯಣ ಪ್ರಿಯ ಬಾಲಧ್ರುವ, ನರಸಿಂಹ ಪ್ರಿಯ ಬಾಲ ಪ್ರಹ್ಲಾದರಿದ್ದಾರೆ. ಕೃಷ್ಣ ನಾಮ ಪಾಯಸದ ಭಕುತರ ಮುಗಿಯದ ಸಾಲು ಸಾಲೇ ಇದೆ.
ವಿಟ್ಠಲ ನಾಮ ಪಾಯಸದ ರುಚಿಕಂಡ, ಉಂಡ ಪುರಂದರದಾಸರೇ ಸಾಕ್ಷಿಯಾಗಿದ್ದಾರೆ. ದಾಸರ ಮುಖ್ಯ ಪ್ರಾಣರ ಅಂತರ್ಗತ.
ಶ್ರೀ ಕೃಷ್ಣಾರ್ಪಣಮಸ್ತು
ಲೇಖಕರು - ಡಾ. ವಿಜಯೀನ್ದ್ರ ದೇಸಾಯಿ
ದಾಸರ ಮಾತಿನ ಸೊಬಗು (ದಾಸರ ಪದಗಳ ಅರ್ಥ ಚಿಂತನೆ) ಗ್ರಂಥದಿಂದ
ಪ್ರಕಾಶಕರು : ಪ್ರತಿಭಾ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ಬೆಂಗಳೂರು
***
ನಾಮವಿಠಲ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೊ ಪ
ಒಮ್ಮನ ಗೊದಿಯ ತಂದು | ವೈರಾಗ್ಯ ಕಲ್ಲಲಿ ಬೀಸಿ |ಸುಮ್ಮನ ಸಜ್ಜಿಗೆ ತೆಗೆದು | ಸಣ್ಣ ಸೇವಗೆ ಹೊಸೆದು 1
ಹೃದಯವೆಂಬ ಪಾತ್ರೆಯೊಳಗೆ | ಮನವೆಂಬ ಎಸರನಿಟ್ಟು |ಬುದ್ದಿಯಿಂದ ಪಾಕ ಮಾಡಿ |ಹರಿವಾಣತುಂಬಿರೋ 2
ಆನಂದ ಆನಂದವೆಂಬ ತೇಗು ಬಂದ ಪರಿಯಲಿ |ಆನಂದ ಮೂರುತಿ ನಮ್ಮ ಪುರಂದರವಿಠಲ 3
*******
No comments:
Post a Comment