Wednesday 29 December 2021

ಏನ ಪೇಳಲಿ ತಂಗಿ ತಿಮ್ಮಯ್ಯನ ಏನು ಹೇಳಲಿ ತಂಗಿ purandara vittala ENA PELALI TANGI TIMMAYYANA




chaitra suresh rao and gayathri tumkur venkatesh 2018


GAYATHRI TUMKUR VENKATESH 2012


ರಾಗ- ಮಧ್ಯಮಾವತಿ 
ಏನು ಹೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆ
ಕನಸುಕಂಡೆನ ಮನದಲಿ ಕಳವಳಗೊ೦ಡೆನೆ||ಪ||

ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವಇಟ್ಟು ಅ೦ದುಗೆಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ II೧II

ಮಕರಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ II೨II

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ II೩ II

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ II೪II

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣ ದಿಂದ
ಪುರಂದರವಿಠಲನ ಕೂಡಿದೇನೆ II೫II
***


Kanasukandene manadalli kalavalagondene
Enu helali tangi timmayyana padavanu kande || pallavi ||

Ponnada kadaganittu timmayya ta
Polva namava ittu anduge Galugennuta
Ena munde bandu nintiddanalle || 1 ||

Makarakundalavanittu timmayya ta
Kasturi tilakavanittu gejje Galugenuta
Svami ta bandu nintiddanalle || 2 ||

Muttina pallakki yatigalu
Hottu nintiddaralle Catra camaradinda
Rangayyana utsava murutiya || 3 ||

Tamara kamaladali krushnayya ta
Bandu nintiddanalle vayu bommadigalu
Rangayyana seveya maduvare || 4 ||

Navaratna kettisida svami enna
Hrudayamantapadalli sarvabaranadinda
Purandaravithalana kudidene || 5 ||
***

pallavi

kanasu kaNDene manadalle kaLavaLa koNDene

anupallavi

Enu heLasi tangi timmayyana pAdavanu kaNDe

caraNam 1

ponnada kaDaganiTTu timmaya tA pOlva nAmava iTTU
anduge ghalukennuta ena munde bandu nindiddanalle

caraNam 2

makara kuNDalavaniTTu timmaya tA kastUri tilakaniTTu
gejje ghulukenuta svAmi tA bandu ninda nindiddanalle

caraNam 3

muttina pallakki yatigaLu hottu nindiddaralle
chatra cAmaradinda rangayya utsava mUrutiya

caraNam 4

tAmara kamaladali krSNayya tA bandu nindiddanalle
vAyu bommAdigaLu rangayyana sEveya mADuvare

caraNam 5

navaratna kettisida svAmi enna hrdaya maNTapadalli
sarvAbharaNadinda purandara viTTalana kUDidEne
***

ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||

ಮಕರಕುಂಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ ||

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ || ೩ ||

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ || ೪ ||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮಂಟಪದಲ್ಲಿ ಸರ್ವಾಭರಣದಿಂದ

ಪುರಂದರವಿಠಲನ ಕೂಡಿದೇನೆ || ೫ ||
*******

ರಾಗ ದ್ವಿಜಾನಂತಿ/ಅಟ್ಟ ತಾಳ

ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||

ಮಕರಕುಂಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ ||

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ || ೩ ||

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ || ೪ ||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮಂಟಪದಲ್ಲಿ ಸರ್ವಾಭರಣದಿಂದ
ಪುರಂದರವಿಠಲನ ಕೂಡಿದೇನೆ || ೫ ||

ಪೊನ್ನದ - ಹೊನ್ನಿನ, ಬಂಗಾರದ.
ಪೋಲ್ವ - ಪೊಳೆವ, ಹೊಳೆಯುವ.
ಬೊಮ್ಮಾದಿಗಳು - ಬ್ರಹ್ಮನೇ ಮೊದಲಾದ ದೇವತೆಗಳು.

[ಪುರಂದರ ಸಾಹಿತ್ಯ ದರ್ಶನ - ಭಾಗ ೧]

***********

ಸುಮ್ಮನೆ ದೊರಕುವುದೇ ಶ್ರೀರಾಮನ purandara vittala SUMMANE DORAKUVUDE SRIRAMANA


GAYATHRI TUMKUR VENKATESH 2020






RAGAMAALIKE 



ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು ||ಪ ||
ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||ಅ ||

ಭಕ್ತಿರಸದಲಿ ತನ್ನ ಚಿತ್ತ ಪರವಶವಾಗಿ
ಅಚ್ಯುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ ||

ಕಂತುಪಿತನ ದಿವ್ಯನಾಮ ಅಂತರಂಗದೊಳಿಟ್ಟು
ಚಿಂತೆಯೆಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ ||

ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು
ಘನ್ನಪೂರ್ಣ ಪುರಂದರವಿಠಲನ ಭಜಿಸದೆ ||
***

ರಾಗ – ಆನಂದಭೈರವಿ  ತಾಳ – ತ್ರಿಪುಟಿ (raga tala may differ in audio)
raaga – aanaMdabhairavi  taaLa – tripuTi 


ಸುಮ್ಮನೆ ದೊರಕುವದೆ ಶ್ರೀರಾಮನ ದಿವ್ಯನಾಮವು
ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ

ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು
ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ

ಭಕ್ತಿ ರಸದಲ್ಲಿ ತನ್ನು ಚಿತ್ತ ಪರವಶನಾಗಿ
ಅಚ್ಯುತನ ನಾಮವನು ಬಚ್ಚಿಟ್ಟುಕೊಂಡವಗಲ್ಲದೆ

ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ
ಆನಂದಪೂರ್ಣ ಪುರಂದರ ವಿಠಲನ ನೋಡಿದಗಲ್ಲದೆ
***


summane dorakuvade shrIraamana divyanaamavu
janmajanmaaMtarada duShkarma hOdavagallade

kaMtupitana moorutiya tannaMtaraMgadoLiTTu
ciMte ella biTTu nishchiMtanaadavagallade

bhakti rasadalli tannu citta paravashanaagi
acyutana naamavanu bacciTTukoMDavagallade

tannoLage idda moorutiya kaNNoLage taMdare
aanaMdapoorNa puraMdara viThalana nODidagallade
***

pallavi

summanae dorakuvade shrI rAmana divya nAmavu

anupallavi

janma janmAntarada duSkarma hOdavagallade

caraNam 1

bhakti rasadali tanna citta paravashavAgi acyutana nAmava bacciTTu koNDavagallade

caraNam 2

kantu pitana divya nAma antaranagadoLiTTu cinteyella biTTu niscintanAdavagallade

caraNam 3

kaNNoLagidda mUruti tannoLage tandu ghanna pUrNa purandara viTTalana bhajisade
***

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು |
ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ಪ.

ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು |
ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ 1

ಭಕ್ತಿರಸದಲಿ ತನ್ನ ಚಿತ್ತಪರವಶನಾಗಿ |
ಅಚ್ಯುತನ ನಾಮವನು ಬಚ್ಚಿಟ್ಟು ಕೊಂಡವಗಲ್ಲದೆ 2

ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ |
ಆನಂದ ಪೂರ್ಣ ಪುರಂದರವಿಠಲನ ನೋಡಿದವಗಲ್ಲದೆ 3
****

ರಾಗ ಹಿಂದೊಳ  ತಾಳ ಆದಿ (raga, taala may differ in audio)
ರಾಗ ಆನಂದಭೈರವಿ ತ್ರಿಪುಟ ತಾಳ

ಶಿವದರುಶನ ನಮಗಾಯಿತು ಕೇಳೆ purandara vittala SHIVA DARUSHANA NAMAGAAYITU KELE


CHAITRA SURESH RAO 2017





ರಾಗ: ಮಧ್ಯಮಾವತಿ/ಆದಿ ತಾಳ

ಶಿವದರುಶನ ನಮಗಾಯಿತು ಕೇಳಿ
ಶಿವರಾತ್ರಿಯ ಜಾಗರಣೆ || ಪಲ್ಲವಿ ||

ಪಾತಾಳಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು || ೧ ||

ಬೇಡಿದ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುವನು || ೨ ||

ಹರನನು ಕಂಡೆನು ಪುರಂದರವಿಠಲನ
ಹರಿನಾರಾಯಣನ ಧ್ಯಾನದಲಿ || ೩ ||
***

Siva darusana namagayitu kele
Sivaratriya jagarane ||

Patala gangeya snanava madalu
Patakavella pariharavu
Jyotirlingana dhyanava madalu
Dyutagalilla anudinavu ||

Bediva varagala koduvanu tayi
Brahmana raniya noduvanu
Aduta paduta Eruta basavana
Anamdadali nalidaduvanu ||

Sikarava kandenu purandaravithalana
Harinarayana dhyanadale ||
***

pallavi

shiva darushana namagAidu kELE shivarAtriya jAgaraNe

anupallavi

pAtALa gangeya snAnava mADalu pAtakavella parihAravu jyOti lingana dhyAnava mADalu dyUtagaLilla anudinavu

caraNam

bEDida varagaLa koDuvanu tAyi brhmaNa rANiya nODuvanu Aduta pADuta vELaya pasavana
Anandadali nalidADuvanu cigaravu kaNDenu purandara viTTalana hari nArAyaNa dhyAnadali
***

ಶಿವ ದರುಶನ ನಮಗಾಯಿತು ಕೇಳೆ
ಶಿವರಾತ್ರಿಯ ಜಾಗರಣೆ ||

ಪಾತಾಳ ಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು ||

ಬೇಡಿವ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುವನು ||

ಶಿಖರವ ಕಂಡೆನು ಪುರಂದರವಿಠಲನ
ಹರಿನಾರಾಯಣ ಧ್ಯಾನದಲೆ ||
******

ಶ್ರೀ ಪುರಂದರದಾಸರ ಕೃತಿ 

 ರಾಗ ಮಧ್ಯಮಾವತಿ              ಆದಿತಾಳ 

ಶಿವ ದರುಶನ ನಮಗಾಯಿತು ಕೇಳಿ ।
ಶಿವರಾತ್ರಿಯ ಜಾಗರಣೆಯಲಿ ॥ ಪ ॥

ಪಾತಾಳ ಗಂಗೆಯ ಸ್ನಾನವ ಮಾಡಲು ।
ಪಾತಕವೆಲ್ಲವು ಪರಿಹಾರವು ॥
ಜ್ಯೋತಿರ್ಲಿಂಗವ ಧ್ಯಾನವ ಮಾಡಲು ।
ದ್ಯೂತಗಳಿಲ್ಲವು ಅನುದಿನವು ॥ 1 ॥

ಬೇಡಿದ ವರಗಳ ಕೊಡುವನು ತಾಯಿ - ।
ಬ್ರಹ್ಮನ ರಾಣಿಯ ನೋಡುವನು ॥
ಆಡುತ ಪಾಡುತ ಏರುತ ಬರುವನು ।
ಆನಂದದಲಿ ನಲಿದಾಡುವನು ॥ 2 ॥

ಹರನನು ಕಂಡೆನು ಪುರಂದರವಿಠಲನ ।

ಹರಿನಾರಾಯಣ ಧ್ಯಾನದಲಿ ॥ 3 ॥
***********

ಮದ್ದು ಮಾಡಲರಿಯಾ ಮುದ್ದು ರಮಾದೇವೀ purandara vittala MADDU MADALARIYE MUDDU


GAYATHRI TUMKUR VENKATESH 2012


ರಾಗ ಮಧ್ಯಮಾವತಿ ತ್ರಿಪುಟ ತಾಳ 

ಮದ್ದು ಮಾಡಲರಿಯೆ ಮುದ್ದು ರಮಾದೇವಿ ||ಪ ||
ಮುದ್ದು ಬಾಲಕೃಷ್ಣನಲಿ ಮನ ಸಿದ್ಧವಾಗಿ ನಿಲ್ಲುವಂತೆ ||

ವಚನಗಳೆಲ್ಲ ವಾಸುದೇವನ ಕಥೆಯೆಂದು
ರಚನೆ ಮಾಡುವಲ್ಲಿ ರಕ್ತಿ ನಿಲ್ಲೋ ಹಾಗೆ ||

ಸಂತೆ ನೆರಹಿದ ಸತಿಸುತರು ತನ್ನವರೆಂಬ
ಭ್ರಾಂತಿ ಬಿಟ್ಟು ನಿಶ್ಚಿಂತನಾಗೋ ಹಾಗೆ ||

ಎನ್ನೊಡೆಯ ಸಿರಿ ಪುರಂದರವಿಠಲನ್ನ
ಸನ್ಮತಿಯಿಂದ ನಾ ಹಾಡಿ ಪಾಡೋ ಹಾಗೆ ||
***

pallavi

maddu mADalariye muddu ramAdEvi

anupallavi

muddu bAlakrSNanali mana siddhavAgi nilluvante

caraNam 1

vacanagaLella vAsudEvana katheyendu racane mADuvalli rakti nillO hAge

caraNam 2

sante nerahida sati sutaru tannavaremba bhrAnti biTTu nishcintanAkO hAge

caraNam 3

ennoDeya siri purandara viTTalanna sanmatiyinda nA hADi pADO hAge
***

ಮದ್ದು ಮಾಡಲರಿಯಾ ಮುದ್ದು ರಮಾದೇವೀ ಪ.

ಮುದ್ದು ಕೃಷ್ಣನಲ್ಲಿ ಮನ ಸಿದ್ಧವಾಗಿ ನಿಲ್ಲುವಂತೆ ಅಪ

ವಚನಗಳೆಲ್ಲ ವಾಸುದೇವನ ಕಥೆಯೆಂದು
ರಚನೆ ಮಾಡುವರಲ್ಲಿರಕ್ತಿನಿಲ್ಲುವ ಹಾಗೆ1

ಸಂತೆ ನೆರಹಿಸತಿ ಸುತರು ತನ್ನವರೆಂಬ
ಭ್ರಾಂತಿ ಬಿಟ್ಟು ನಿಶ್ಚಿಂತನಾಗುವ ಹಾಗೆ 2

ಎನ್ನೊಡೆಯಸಿರಿ ಪುರಂದರವಿಠಲನ
ಸನ್ಮತಿಯಿಂದೆ ಹಾಡಿ ಪಾಡುವ ಹಾಗೆ 3
**********

ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ purandara vittala BIDE NINNA PADAVA BINKAVINNEKO


GAYATHRI TUMKUR VENKATESH 2012





ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ
ಕೊಡು ಮನದೀಷ್ಟವ ಕೋಪವಿನ್ನೇಕೊ ||

ನೀರ ಪೊಕ್ಕರು ಬಿಡೆ ಬೆನ್ನಿನೊಳಗೆ, ಬಹು-

ಭಾರ ಪೊತ್ತೆನೆಂದು ಬಿದ್ದರು ಬಿಡೆನು
ಕೋರೆಯ ಮಸೆಯುತ ಕೆಸರು ಕೊಂಡರು ಬಿಡೆ
ಘೋರರೂಪವ ತಾಳಿ ಘುರಿಘುರಿಸಲು ನಾನು ||

ತಿರುಕನೆಂದರು ಬಿಡೆ ತಿಳಿದು ತಾಯ ಕೊರಳ

ತರಿಕನೆಂದರು ನಿನ್ನ ನಾ ಬಿಡೆನೋ
ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ
ದುರುಳ ಮಡುವಿನಲಿ ಧುಮುಕಿದರೆಯು ನಾನು ||

ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು

ಒಡನೆ ಹಯವೇರಿ ಓಡಿದರು ಬಿಡೆನು
ಪೊಡವಿಯೊಳಗೆ ನಮ್ಮ ಪುರಂದರವಿಠಲನೆ
ಕಡೆಹಾಯಿಸುವ ಭಾರ ನಿನ್ನದದಕೆ ನಾನು ||
***

ರಾಗ ಮೋಹನ ಅಟತಾಳ (raga, taala may differ in audio)

pallavi

biDe ninna pAdava bingavinnEko koDu manadiSTava kOpavidEko

caraNam 1

nIra pokkaru biDe benninoLage bahu bhAra pottenendu biddaru biDenu
koreya maseyuta kesaru koNDaru biDe ghOra rUpava tALi ghuru ghurisalu nAnu

caraNam 2

tiruganendaru biDe tiLidu tAya koraLa tarikanendaru ninna nA biDenO
poreya pitana vAkya kADa sEralu biDe duruLa maDuvinalli dhumukidareyu nAnu

caraNam 3

kaDu battalAgi enna kaili kAsillendaru oDane hayavanEri Odidaru biDEnu
poDaviyoLage namma purandara viTTalane kaDehAyisuva bhAra ninnadadake nAnu
***

Mohana - Ata

P: biDe ninna pAdava bingavinnEko koDu manadiSTava kOpavidEko

C1: nIra pokkaru biDe benninoLage bahu bhAra pottenendu biddaru biDenu
koreya maseyuta kosari kondaru biDe ghOra rUpava tALi ghuri ghurisalu nAnu

2: tiruganendaru biDe tiLidu tAya koraLa tarikanendaru ninna nA biDenO
poreya pitana vAkya kADa sEralu biDe darana maDuvinalli dhumukidareyu nAnu

3: kaDu badalAgi enna kaili kAsillendaru oDane hayavanEri Odidaru biDEnu
poDaviyoLage namma purandara viTTalane kaDehAyisuva bhAra ninnadadake nAnu
***
 

Meaning: I wont (bide) leave your feet, why do you put on airs? Why are you angry? 

C1: I wont leave you (your name) even when I am in water, neither I will leave you when I carry a heavy load (bhara hottenendu) on my back and fall (biddaru); (I wont leave) Even if someone confront me with a sharp weapon, If a dangerous (tiger like) threat comes.

C2: Cannot translate exact – I wont leave you even in difficult situations.

C3: Even when I become very poor(kadu badalagi), and I have no money(kasillendadaru) in my hands(enna kaili)(I wont leave you),  (because) in this world(podaviyolage), the responsibility(bhara) of seeing one through(kadehAyisuva) (this life) is of purandaravithala.
***

Tuesday 28 December 2021

ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು others AMMA AMMA AMMA NAMMA TOLIGE REKKE HACHCHU

 



CHAITRA SURESH RAO AND PRERANA SURESH RAO 1998


writer H S Venkatesha Murthy

ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ ಹಚ್ಚು
ಸೊಂಟಕೆ ಬೆಳ್ಳಿ ಪಟ್ಟಿ ಕಟ್ಟಿ ಹಕ್ಕಿ ಪುಚ್ಚಾ ಚುಚ್ಚು ಹಕ್ಕಿ ಪುಚ್ಚಾ ಚುಚ್ಚು ||ಪ ||

ಹಾರುತ್ತಿನಿ ರೆಕ್ಕೆ ಬಿಚ್ಚಿ ತೆಂಗಿನ ಮರಕ್ಕೂ ಮೇಲೆ 
ಜಗಲಿ ಮೇಲೆ ನಿಂತೇ ನಮಗೆ ಅಮ್ಮ ಟಾಟಾ ಹೇಳೇ ಅಮ್ಮ ಟಾಟಾ ಹೇಳೇ


ಹಾಗೆ ಹಾಗೆ ಮೇಲೆ ಹೋಗಿ ಮುಟ್ಟುತೀವಿ ಬಾನ 
ಹೇಳುತ್ತಿವಿ ಯಾರು ಕೇಳದ ಚುಕ್ಕಿ ಹಾಡೋ ಹಾಡ ಚುಕ್ಕಿ ಹಾಡೋ ಹಾಡ


ತಿನ್ಗಾಳೂರಿನ ಅಂಗಳ ಸೇರಿ ಬೆಳ್ಳಿ ಮೊಲವನು ನೋಡಿ 
ಹಿಡಿಯುತ್ತಿವಿ ಆರು ಬಣ್ಣದ ಜಿಂಕೆಯಾ ಹೇಗೋ ಮಾಡಿ ಜಿಂಕೆಯಾ ಹೇಗೋ ಮಾಡಿ


ಕೊಟ್ಟೆ ಕೊಡುವನು ಚಂದ ಮಾಮ ಕೆನ್ನೆ ತುಂಬ ಮುತ್ತು 
ಮುದ್ದಿಸಿ ಬಿಟ್ಟನು ತುದಿಗೆ ಇಳಿಸುವನು ಯಾರು ಇಲ್ಲದ ಹೊತ್ತು ಯಾರು ಇಲ್ಲದ ಹೊತ್ತು
***
 

ಸೃಷ್ಟಿಯ ಉಳಿಸಿರಿ ಕಷ್ಟವ ಕಳೆಯಿರಿ others SRUSHTIYA ULISIRI KASHTAVA KALEYIRI

 

chaitra suresh rao and prerana suresh rao 1998


ಸೃಷ್ಟಿಯ ಉಳಿಸಿರಿ ಕಷ್ಟವ ಕಳೆಯಿರಿ 

SRUSHTIYA ULISIRI KASHTAVA KALEYIRI

***


ಜನನಿ ಭಾರತಿ ಜನ್ಮ ಧಾತ್ರಿ ದಿವ್ಯ ನಾಡಿದು JANANI BHAARATI JANMA DHAATRI DIVYA NAADIDU

PRERANA SURESH RAO 2023

ಜನನಿ ಭಾರತಿ ಜನ್ಮ ಧಾತ್ರಿ ದಿವ್ಯ ನಾಡಿದು ಸೋದರಿ

ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ ||ಪ||


ಎಲ್ಲಿ ರಾಮಾಯಣನು ಬೆಳಗಿತೊ ss

ಎಲ್ಲಿ ಗೀತೆಯು ಸುದೆಯು ಹರಡಿತೊ

ವೇದಘೋಷ ಗಳಲ್ಲಿ ಮೊಳಗಿತೊ


ಅದುವೇ ಭಾರತ ಸೋದರ

 ನಮ್ಮನಾಡಿದು ಸೋದರಿ ||1||


ಎಲ್ಲಿ ಮೋಹನ ಕೊಳಲನೂದಿದ

ಎಲ್ಲಿ ಪರಶಿವ ನರ್ತಿಸಿದನು

ವಾಣಿ ಲಕುಮಿ ಗೌರಿ ಗಣಪತಿ

ಪೂಜೆಗೊಳ್ಳುವ ನಾಡಿದು

ದೇವತೆಗಳ ಬೀಡಿದು ||2||


ಗಂಗಾ ಜಮುನಾ ತುಂಗ ಭದ್ರ

ಸಿಂಧೂ ಮಹಾನದಿ ಕೃಷ್ಣ ಕಪಿಲೆ

ಗೋಧೆ ಕಾವೇರಿಯು ಹರಿವಾ

ನಾಡಿದು ss ನಮ್ಮದು s

ಸುಫಲ ಸುಂದರ ಬೀಡಿದು3 ||3||

***


ಸಗಪಸಗಪ ಗಪದಗಪದ ಪದನಿಪದನಿ ದನಿಸದನಿಸ

ನಿಸಗಸನಿಸ ದನಿದಪದಪ (ಗಪದನಿಸ)3


ಜನನಿ ಭಾರತಿ ಜನ್ಮ ಧಾತ್ರಿ ದಿವ್ಯ ನಾಡಿದು ಸೋದರಿ

ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ ||ಪ||


ಸs,ನಿ, ನಿ, ಸ, ನಿ, ದ, ಪ,ಮ,ಗ, ದs, ಗ, ಪ, ದ, ನಿ, ದ, ಪ, ಗ, ಗ, ಪ, ದ, ಸ, ಪss

ಎಲ್ಲಿ ರಾಮಾಯಣನು ಬೆಳಗಿತೊ ss

ಎಲ್ಲಿ ಗೀತೆಗೀತೆಯು ಸುದೆಯು ಹರಡಿತೊ

ವೇದಘೋಷ ಗಳಲ್ಲಿ ಮೊಳಗಿತೊ

 

ಗ, ಗ, ಸ, ನಿ, ನಿ, ಸ


ಅದುವೇ ಭಾರತ ಸೋದರ

 ನಮ್ಮನಾಡಿದು ಸೋದರಿ ||1||

ಸ, ಗ, ಪ, ಗ, ಸ, ನಿ, ಸ, ನಿ, ದs, ಗ, ಪ, ದ, ನಿ, ದ, ಪ, ಗ, ಗ, ಪ, ಗ, ಸ, ಪs

 ಎಲ್ಲಿ ಮೋಹನ ಕೊಳಲನೂದಿದ

 ಎಲ್ಲಿ ಪರಶಿವ ನರ್ತಿಸಿದನು

ವಾಣಿ ಲಕುಮಿ ಗೌರಿ ಗಣಪತಿ

ಪೂಜೆಗೊಳ್ಳುವ ನಾಡಿದು

ದೇವತೆಗಳ ಬೀಡಿದು ||2||

ಸs,ನಿ, ನಿ, ಸ, ನಿ, ದ, ಪ, ಗ, ದs, ಗ, ಪ, ದ, ನಿ, ದ, ಪ, ಗ, ಗ, ದ, ಪ, ಸ, ಪs,ಸs

ಗಂಗಾ ಜಮುನಾ ತುಂಗ ಭದ್ರ

ಸಿಂಧೂ ಮಹಾನದಿ ಕೃಷ್ಣ ಕಪಿಲೆ

ಗೋಧೆ ಕಾವೇರಿಯು ಹರಿವಾ

ನಾಡಿದು ss ನಮ್ಮದು s

ಸುಫಲ ಸುಂದರ ಬೀಡಿದು 3 ||3||

***


ಒಂದೇ ಒಂದೇ ನಾವೆಲ್ಲರೂ others ONDE ONDE NAAVELLAROO


PRERANA SURESH RAO+ AIR program, Hassan December 1997



writer - g s shivarudrappa
ಒಂದೇ ಒಂದೇ ನಾವೆಲ್ಲರೂ ಒಂದೇ
ಈ ದೇಶದಲೊಳು ಎಲ್ಲಿದ್ದರು ಭಾರತ ನಮಗೊಂದೇ ।।

ಹಲವು ಕೊಂಬೆಗಳು ಚಾಚಿಕೊಂಡರು, ಮರಕ್ಕೆ ಬುಡವೊಂದೇ ।
ಸಾವಿರ ನದಿಗಳು ಹೇಗೆ ಹರಿದರು, ಕೂಡುವ ಕಡಲೊಂದೇ ।
ಇರುಳಿಗೆ ಸಾಸಿರ ಚಿಕ್ಕೆಗಳಿದ್ದರು, ಹಗಲಿಗೆ ರವಿ ಒಂದೇ ।
ಅಗಣಿತ ಗ್ರಹ ಮಂಡಲಗಳ ಚಲನೆಗೆ ಆಕಾಶವು ಒಂದೇ ।।

ನೂರು ಬಗೆಯ ಆರಾಧನೆ ಇದ್ದರು, ದೇವರೆಲ್ಲರಿಗೂ ಒಂದೇ ।
ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಿಳುಪೊಂದೇ ।
ನಡೆನುಡಿ ಭೇದಗಳೆಷ್ಟೇ ಇದ್ದರೂ ಬದುಕುವ ಜನರೊಂದೇ ।
ನೆರಳು ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜವೊಂದೇ ।।
***


Onde onde, navellaru onde lyrics in English:
Onde onde, navellaru onde
ee deshadolleddiru bharata namagonde ||P||

Halavu kombegala chachikondaru marakke buda onde
savira nadigalu hege haridaru kuduva kadalonde ||1||

Irulige sasira chikkegaliddaru hagalige ravi onde 
aganita graha mandalagala chalanege akaravu onde ||2||

Nuru bageya aradhane iddaru devaru ellarigonde
halavu bannagala hasugalu kareyuva halina biluponde ||3||

Nade nudi bedhagaleshte iddaru badukuva jana onde
nelalu belakugala rekkeya bichchuta haraduva dhwajavonde ||4||

***


ಹಿಮಗಿರಿಯ ಶಿಖರಗಳ ಬೆಳ್ಳಿ ಮುಗಿಲಿಂದ HIMAGIRIYA SHIKHARAGALA BELLI MUGILINDA

PRERANA SURESH RAO 2023


ರಚನೆ: ಕೆ. ಎಸ್. ನರಸಿಂಹ ಸ್ವಾಮಿ  

ಹಿಮಗಿರಿಯ ಶಿಖರಗಳ ಬೆಳ್ಳಿ ಮುಗಿಲಿಂದ                   

ಗಂಗೆಯ ತರಂಗಗಳ ಮರ್ಮರಗಳಿಂದ  

ಬಾನ ಬೆಳಕಿನ ಬಯಲ ಮಿನುಗುವೆಡೆಯಿಂದ                                                 

ಬಿರುಗಾಳಿ ಭೋರ್ಗರೆವ ಕಡಲ ತಡಿಯಿಂದ

ಹರಸು ಬಾ....ಹರಸು ಬಾ.... ಹರಸು ಬಾ.  ವೀರ ಜನನಿ

 

ಸೊಂಪಾದ ಹೊನ್ನಾದ ಕಾನನಗಳಿಂದ.                                 

ಕಲ್ಪತರು ದೇವದಾರುಗಳ ನೆಲೆಯಿಂದ.                                             

ಪರಿಜಾತ ಸುಗಂಧ ಸಿರಿದಳಿರಿನಿಂದ                                     

ಹೆಸರಿರದ ಹಕ್ಕಿಗಳ ಇನಿದನಿಗಳಿಂದ                                       

ಹರಸು ಬಾ....ಹರಸು ಬಾ.... ಹರಸು ಬಾ.  ವೀರ ಜನನಿ

 

ಬಾಯಾರಿ ಕಂಗೆಟ್ಟ ಮರುಭೂಮಿಯಲ್ಲಿ                                      

ನಿನ್ನ ಕರುಣೆ ಮಳೆಗೆ ಎತ್ತರೆದುರಲ್ಲಿ?                                       

ಫಲ ಪುಷ್ಪಗಳು ತೂಗಿ ಕಣ್ತಣಿಸುವಲ್ಲಿ                                                      

ಸ್ವಾತಂತ್ರ್ಯದುತ್ಸವದ ಮುಂಬೆಳಕಿನಲ್ಲಿ.                                       

ಹರಸು ಬಾ....ಹರಸು ಬಾ.... ಹರಸು ಬಾ.  ವೀರ ಜನನಿ

 

ಗುಡಿಯ ಮುಂದಿದೆ ನಿನ್ನ ಎತ್ತರದ ತೇರು                                   

ಸರ್ವ ಜನತೆಯ ಪ್ರಾಣ ಶಕ್ತಿ ಬಾ ಏರು                                    

ಬಿಡುಗಡೆಯ ಹಬ್ಬವಿದು ತೇರನೆಳೆಯುವೆವು                                   

ನಾವೆಲ್ಲರೊಂದಾಗಿ ನಿನಗೆ ಕೈ ಮುಗಿದು                                                           

ಹರಸು ಬಾ....ಹರಸು ಬಾ.... ಹರಸು ಬಾ.  ವೀರ ಜನನಿ

***


ದೂರ ದೂರ ಸಾಗುವ ಬಾಳ others DOORA DOORA SAAGUVA BAALA

GAYATHRI TUMKUR VENKATESH 1993 - VIDEO AT DALLAS 2012

ದೂರ ದೂರ ಸಾಗುವ ಬಾಳ ಹೊನಲ ತೀರಕೆ

ತೇಲಿ ತೇಲಿ ಹೋಗುವ ಮನದ ಕಡಲ ತೀರಕೆ

ಮನದ ಕಡಲ ತೀರಕೆ

ದೂರ ದೂರ ಸಾಗುವ..ಆ.. 


ಹುಟ್ಟು ಹಾಕಿ ಮುಂದೆ ಸಾಗಿ ಗುರಿಯ ಮುಟ್ಟುವ

ಕೆಚ್ಚೆದೆಯ ನಾವೆಯಿಂ ಬಾಳ ಯಾನ ಮಾಡುವ 

ದೂರ ದೂರ ಸಾಗುವ ಬಾಳ ಸ್ವರ್ಗಕೆ 

ತೇಲಿ ತೇಲಿ ಹೋಗುವ ಮನದ ಕಡಲ ತೀರಕೆ

ಮನದ ಕಡಲ ತೀರಕೆ  ಮನದ ಕಡಲ ತೀರಕೆ

ದೂರ ದೂರ ಸಾಗುವ..ಆ.. 


ಹಕ್ಕಿಯಂತೆ ಹಾರುವ ಮೋಡದಂತೆ ತೇಲುವ 

 ನಕ್ಕು ನಲಿದು ಹೂವಾಗಿ ಬಾಳ ತೀರ ಸೇರುವ

ದೂರ ದೂರ ಸಾಗುವ ಬಾಳ ಸ್ವರ್ಗಕೆ 

ತೇಲಿ ತೇಲಿ ಹೋಗುವ ಮನದ ಕಡಲ ತೀರಕೆ

ಮನದ ಕಡಲ ತೀರಕೆ ಮನದ ಕಡಲ ತೀರಕೆ

ದೂರ ದೂರ ಸಾಗುವ..ಆ.. 


DOORA DOORA SAAGUVA BAALA HONALA TEERAKE 

***


ದಿನ ದಿನ ದಿನ ಧಿನ್ ತಕತಾ others DINA DINA DINA DHIN TAKA THAA ದಶಾವತಾರ DASHAVATARA

chaitra suresh rao and prerana suresh rao
CKS School Day, Hassan October 1998 


ದಿನ ದಿನ ದಿನ ಧಿನ್ ತಕತಾ   

DINA DINA DINA DHIN TAKA THAA ದಶಾವತಾರ DASHAVATARA

*** 



ನಮ್ಮ ಹಳ್ಳಿ ಬ್ಯಾರೆ ಮ್ಯಾಗೆ others NAMMA HALLI BAARE MYAAGE

chaitra suresh rao and prerana suresh rao
CKS School Day, Hassan November 1999 


ನಮ್ಮ ಹಳ್ಳಿ ಬ್ಯಾರೆ ಮ್ಯಾಗೆ 

NAMMA HALLI BAARE MYAAGE

***


ಅಮ್ಮ ಕೇಳು ಕೇಳು others AMMA KELU KELU

 

chaitra suresh rao and prerana suresh rao
CKS School Day, Hassan October 1998


ಅಮ್ಮ ಕೇಳು ಕೇಳು AMMA KELU KELU

***


ತಂದಾನಿ ತಾನೋ ತಂದನಾನೋ others TANDAANI TAANO TANDANAANO

 

chaitra suresh rao and prerana suresh rao
CKS School Day, Hassan November 1999 


ತಂದಾನಿ ತಾನೋ ತಂದನಾನೋ  

TANDAANI TAANO TANDANAANO

***


ದಿದ್ಧಿತಾ ಧಿತ್ತ ಆಲಿ ಮೇಕೆ ಮಣ others DIDDHITA DHITTA AALI MEKE MANA gujarati


chaitra suresh rao and prerana suresh rao
CKS School Day, Hassan October 1998

गुजराती

ದಿದ್ಧಿತಾ ಧಿತ್ತ ಆಲಿ ಮೇಕೆ ಮಣ DIDDHITA DHITTA AALI MEKE MANA

***


ತೂಗು ತೂಗುಯ್ಯಾಲೆಯಾ others TOOGU TOOGUYYAALEYA

chaitra suresh rao and prerana suresh rao
CKS School Day, Hassan November 1998 


ತೂಗು ತೂಗುಯ್ಯಾಲೆಯಾ TOOGU TOOGUYYAALEYA

***


ದಿನ್ ತಕಾ ಕಾದುಕೊಂಡು ಕುಳಿತಿಹಳು others DIN TAKAA KAADUKONDU KULITIHALU


chaitra suresh rao and prerana suresh rao
CKS School Day, Hassan November 1999 


ದಿನ್ ತಕಾ ಕಾದುಕೊಂಡು ಕುಳಿತಿಹಳು

DIN TAKAA KAADUKONDU KULITIHALU

***

 

ಕೋಗಿಲೆ ಚೆಲ್ವ ಕೋಗಿಲೆ others KOGILE CHELVA KOGILE


GAYATHRI TUMKUR VENKATESH 1993



ಕೋಗಿಲೆ.. ಚೆಲ್ವ ಕೋಗಿಲೆ.. 
ಮುದ್ದು ಕೋಗಿಲೆ.. ಜಾಣ ಕೋಗಿಲೆ..

ಹಿಂದೆ ತಪದೊಳೀಶ  ನೊಂದಿರುತಿರುಲೇಸು 
ಬೆಂದ ಕಾಮನ ಬಿಟ್ಟ ಕೋಗಿಲೆ..
ಚೆಲ್ವ ಕೋಗಿಲೆ.. 
ಮುದ್ದು ಕೋಗಿಲೆ ಜಾಣ ಕೋಗಿಲೆ..

ಬಂತು ಬೇಗದಿ ಬಾರೆ ಇಂದೂಧರನ ಕೂಡಿ
ಕುಂದದೆ ನೀ ಬಾಳೋ ಕೋಗಿಲೆ..
ಚೆಲ್ವ ಕೋಗಿಲೆ.. 
ಮುದ್ದು ಕೋಗಿಲೆ ಜಾಣ ಕೋಗಿಲೆ..
 

ವನಮುನಿಗಳ ನೀತಿಯನು

ಕೆಡಿಸುವಾ ದುಷ್ಟ ಮನಸಿಜನನು ಮೀರಿ ಕೋಗಿಲೆ..

ಚೆಲ್ವ ಕೋಗಿಲೆ.. 

ಮುದ್ದು ಕೋಗಿಲೆ ಜಾಣ ಕೋಗಿಲೆ..

***   

https://www.youtube.com/watch?v=jIW8xC4Bzbw

ಕಡಲಿನ ನಡಿಗೆಯ ಹಾಡುವೆನು others KADALINA NADIGEYA HAADUVENU

 

chaitra suresh rao and prerana suresh rao
AIR program, Hassan August 1997 


ಪ್ರಕೃತಿ ಗೀತೆ-

ಕಡಲಿನ ನಡಿಗೆಯ ಹಾಡುವೆನು 

KADALINA NADIGEYA HAADUVENU

***


ಬಾಗಿಲೊಳು ಕೈ ಮುಗಿದು ಒಳಗೆ ಬಾ others BAAGILOLU KAI MUGIDU OLAGE BAA

CHAITRA SURESH RAO 2019


 -ಕುವೆಂಪು

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ

ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ||

ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು

ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ


ಗಂಟೆಗಳ ದನಿಯಿಲ್ಲ ಜಾಗಟೆಗಳಿಲಿಲ್ಲ

ಕರ್ಪೂರದಾರತಿಯ ಜ್ಯೋತಿಯಿಲ್ಲ

ಭಗವಂತನಾನಂದ ರೂಪುಗೊಂಡಿವುದಿಲ್ಲಿ

ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ


ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ

ಬಾದರಾಯಣನಂತೆ ಭಾರತವ ಹಾಡುತಿವುದಿಲ್ಲಿ

ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ

ಮೂರ್ಚೆಯಲಿ ಮೈ ಮರೆತು ತೇಲುತಿದೆ ಭೂಭಾರವಿಲ್ಲಿ

***

- Kuvempu

bAgiloLu kai mugidu oLage baa yAtrikane

shileyalla vee guDiyu kaleya baleyu ||

kambaniya mAleyanu edeya baTTaloLiTTu

dhanyateya kusumagaLa arpisilli


ganTegaLa daniyilla jAgaTegaLililla

karpUra-dAratiya jyOtiyilla

bhagavantanAnanda rUpugonDihudilli

rasikateye kaDalukki harivudilli


sarasadinduliyutide shileyu rAmAyaNavanilli

bAdarAyaNanante bhAratava hADutivudilli

kushalatege beragAgi mUkavAgide kAlavilli

moorCheyali mai maretu tElutide bhUbhAravilli

***


ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂದೈ ಭೋಗ traditional MOODAL KUNIGAL KERE NODORGONDAI BHOGA

p kalinga rao




GAYATHRI TUMKUR VENKATESH november 1993



 - ಜನಪದ

ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂದೈ ಭೋಗ

ಮೂಡಿ ಬರ್ತಾನೆ ಚಂದಿರಾಮ, ತಾನಂದನೋ

ಮೂಡಿ ಬರ್ತಾನೆ ಚಂದಿರಾಮ

ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ ಹಾದಿಲಿ ಕಲ್ಲು ಕಟ್ಟೆ, ತಾನಂದನೋ

ಸಂತೆ ಹಾದಿಲಿ ಕಲ್ಲು ಕಟ್ಟೆ


ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ

ಭಾವ ತಂದಾವನೆ ಬಣ್ಣದ್ ಸೀರೆ, ತಾನಂದನೋ

ಭಾವ ತಂದಾವನೆ ಬಣ್ಣದ್ ಸೀರೆ

ನಿಂಬೆಯ ಹಣ್ಣೀನಂತೆ ತುಂಬಿ ಕುಣಿಗಲ್ ಕೆರೆ

ಅಂದಾ ನೋಡಲು ಶಿವ ಬಂದ್ರು, ತಾನಂದನೋ

ಅಂದಾ ನೋಡಲು ಶಿವ ಬಂದ್ರು


ಅಂದಾವ ನೋಡಲು ಶಿವ ಬಂದ್ರು ಶಿವಮೊಗ್ಗಿ

ಕಬ್ಬಕ್ಕಿ ಬಾಯ ಬೀಡುತಾವೆ, ತಾನಂದನೋ

ಕಬ್ಬಕ್ಕಿ ಬಾಯ ಬೀಡುತಾವೆ

ಕಬ್ಬಕ್ಕಿನೇ ಬಾಯ ಬೀಡುತಾವೆ ಇಬ್ಬಿಡ

ಗಬ್ಬಾದ್ ಹೊಂಬಾಳೆ ನಡುಗ್ಯಾವೆ, ತಾನಂದನೋ

ಗಬ್ಬಾದ್ ಹೊಂಬಾಳೆ ನಡುಗ್ಯಾವೆ


ಹಾಕಾಕ್ಕೊಂದ್ ಆರೆಗೋಲು ನೂಕಾಕ್ಕೊಂದ್ ಊರುಗೋಲು

ಬೊಬ್ಬೆ ಹೊಡೆದಾವು ಬಾಳೆಮೀನು, ತಾನಂದನೋ

ಬೊಬ್ಬೆ ಹೊಡೆದಾವು ಬಾಳೆಮೀನು

ಬೊಬ್ಬೆಯ ಹೊಡೆದಾವು ಬಾಳೆಮೀನ್ ಕೆರೆಯಾಗೆ

ಗುಬ್ಬಿ ಸಾರಂಗ ನಗುತಾವೆ, ತಾನಂದನೋ

ಗುಬ್ಬಿ ಸಾರಂಗ ನಗುತಾವೆ

***

- Janapada

mooDal kuNigal kere nODOrgondai bhOga

mooDi bartAne chandhirAma, tAnandanO

mooDi bartAne chandirAma

A tantrisi nODOrge enthA kuNigal kere

sante hAdili kallu kaTTe, tAnandanO

sante hAdili kallu kaTTe


bALeya haNNinante bAgida kuNigal kere

bhAva tandAvane baNNad seere, tAnandanO

bhAva tandAvane baNNad seere

nimbeya haNNinante tumbi kuNigal kere

anda nODalu shiva bandru, tAnandanO

anda nODalu shiva bandru


andAva nODalu shiva bandru shivamoggi

kabbakki bAya biDutAve, tAnandanO

kabbakki bAya biDutAve

kabbakkinE bAya biDutAve ibbeeDa

gabbAd hombALe naDugyAve, tAnandanO

gabbAd hombALe naDugyAve


hAkAkkond AregOlu nUkAkkond UrgOlu

bobbe hoDedAvu bALe meenu, tAnandanO

bobbe hoDedAvu bALe meenu

bobbeya hoDedAvu bALe meen kereyAge

gubbi sAranga nagutAve, tAnandanO

gubbi sAranga nagutAve

***


ಜುಂಬಕ ಜುಂಬಕ ಜುಂಬಕವಾಲ traditional JUMBAKA JUMBAKA JUMBAKA JUMBAKAWALA

 

ಜುಂಬಕ ಜುಂಬಕ ಜುಂಬಕವಾಲ JUMBAKA JUMBAKA JUMBAKA JUMBAKAWALA

GAYATHRI TUMKUR VENKATESH november 1993


***