Tuesday, 1 June 2021

ಪಾಹಿ ಶ್ರೀ ನರಸಿಂಹ ಪ್ರಿಯ ಶನೈಶ್ಚರನೆ ನಮೋ ಸಂತತ ankita prasannavenkata

 " ಶ್ರೀ  ಪ್ರಸನ್ನ ಶ್ರೀನಿವಾಸ ದಾಸರ ಕಣ್ಣಲ್ಲಿ ಶ್ರೀ ಶನಿ ಮಹಾತ್ಮ "

ಪಾಹಿ ಶ್ರೀ ನರಸಿಂಹ ಪ್ರಿಯ -

ಶನೈಶ್ಚರನೆ ನಮೋ ಸಂತತ ।

ಪಾಹಿ ನಮೋ ಗ್ರಹರಾಜಶೌರಿ -

ಮಹೇಶ್ವರನೇ ಕೃಪಾಕರ ।। ಪಲ್ಲವಿ ।।

ಪೃಥ್ವೀ ತತ್ತ್ವಾಭಿಮಾನಿಯೇ ನಮೋ - 

ಕರ್ಮಪನು ಎಂಬ ಪುಷ್ಕರನು ।

ಮತ್ತು ಅಜಾನಜರು ಋಷಿ -

ಗಂಧರ್ವ ಮಹಾ ಸಮುದಾಯಕೆ ।।

ಮೇದಿನಿ ರಾಜರು ಮನುಷ್ಯರೂ -

ಸರ್ವರಿಗೂ ಗುರು ಈಶ್ವರ ।

ನೀ ದಯದಿ ಹರಿದಾಸರನ್ನ -

ಸಲಹುತಿಯೋ ಶರಣೆಂಬೆ ।। ಚರಣ ।।

ಸೂರ್ಯ ಛಾಯಾ ಸೂನು -

ಕಾಲ ರೂಪಿ ಮಹಾ ಗ್ರಹ ನಮೋ ।

ಕಾಯೋ ಜಟಿಲನೇ ವಜ್ರ ರೋಮನೆ -

ದಾನವರಿಗೆ ಭಯಂಕರ ।।

ತ್ರಯಂಬಕ ನಾರದರಿಗುಪದೇಶ -

ಕೊಂಡಾಡಿದ ನಿನ್ನನ್ನು ।

ಖ್ಯಾತ ರಘುವಂಶೋತ್ಥ ಅತಿ । ವಿ ।

ಖ್ಯಾತ ದಶರಥ ಕೀರ್ತಿತ ।। ಚರಣ ।।

ಜ್ಞಾನ ಚಕ್ಷುರ್ನಮಸ್ತೇಸ್ತು -

ಕಶ್ಯಪಾತ್ಮಜ ಸೂನವೇ ।

ತುಷ್ಟೋದದಾಸಿ ವೈರಾಜ್ಯ೦ -

ರುಷ್ಟೋ ಹರಸಿ ತಕ್ಷಣಾತ್ ।।

ನಿನ್ನನ್ನು ದಶರಥನು ಸ್ತುತಿಸಿ -

ನಮಿಸೆ ವರಗಳನಿತ್ತು ನೀ ।

ಕ್ಷೋಣಿ ಜನ ಸಂರಕ್ಷಣೆಗೆ ಬಗೆ -

ಪಾದ್ಮ ಉಕ್ತದಿ ಅರುಹಿದಿ ।। ಚರಣ ।।

ಗಂಗಾ ಮಹಿಮ ರಕ್ಷೋ ಭುವನ -

ಪ್ರಸ್ಥಾನೋಕ್ತವು ತ್ವತ್ ಕೃತ ।

ತುಂಗ ಮಹಿಮ ಶ್ರೀ ಲಕ್ಷ್ಮೀ -

ಭೂಮಾ ನಾರಸಿಂಹನ ಸ್ತೋತ್ರವು ।।

ರಾಘವ ಕೃತ ತ್ವತ್ ಕೃತ ಈ -

ನುಡಿಗಳ್ ಪಠಿಸಿ ಕೇಳ್ವರ್ಗೆ ।

ಶೋಕನೀಗಿ ಇಷ್ಟ ಲಭಿಸುವುದು -

ನೃಹರಿ ಪ್ರಿಯ ನೀ ಒದುಗುವಿ ।। ಚರಣ ।।

ವರಹುಹಾಸನನ ತಾತ -

ಪ್ರಸನ್ನ ಶ್ರೀನಿವಾಸ ನೃಕೇಸರಿ ।

ಘನ್ನ ದಯದಿ ಪ್ರಸನ್ನನಾಗಿ -

ಒಲಿಯೆ ಸಾಧನವಾಗುವ ।।

ಜ್ಞಾನ ಭಕ್ತಿ ವೈರಾಗ್ಯ ಸಂಪತ್ -

ಆಯುರಾರೋಗ್ಯ ಇತ್ತು ನೀ ।

ಎನ್ನ ತಪ್ಪುಗಳ ಮನ್ನಿಸಿ -

ಎನ್ನ ಪಾಹಿ ಸತತ ಶನೈಶ್ಚರ ।। ಚರಣ ।।

****


No comments:

Post a Comment